ನವದೆಹಲಿ(ಸೆ.21): ಕೊರೋನಾ ವೈರಸ್ ವಿರುದ್ಧ ಹೋರಾಡಲು ಲಸಿಕೆ ಹೆಚ್ಚು ಪರಿಣಾಮಕಾರಿ. ಇದರ ಜೊತೆಗೆ ಸಾಮಾಜಿಕ ಅಂತರ, ಮಾಸ್ಕ್, ಶುಚಿತ್ವಕ್ಕೆ ಆದ್ಯತೆ ನೀಡಿದರೆ ದೇಶದಿಂದ ಕೊರೋನಾ ಸಂಪೂರ್ಣವಾಗಿ ನಾಶವಾಗಲಿದೆ. ಸದ್ಯ ಲಸಿಕೆ ಲಭ್ಯವಿಲ್ಲ. ಬಹುತೇಕ ಲಸಿಕೆಗಳು ಪ್ರಯೋಗದ ಹಂತದಲ್ಲಿದೆ. ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಸಂಶೋಧರು, ತಜ್ಞ ವೈದ್ಯರು ಅಂತಿಮ ಮುದ್ರೆ ಬಿದ್ದ ಬೆನ್ನಲ್ಲೇ ದೇಶಕ್ಕಾಗುವ ಲಸಿಕೆ ಉತ್ಪಾದನೆ ಹಾಗೂ ವಿತರಣೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.

50 ದಿನದಲ್ಲಿ 1.35 ಲಕ್ಷ ಜನರಿಗೆ ಕೊರೋನಾ ಸೋಂಕು: ಆತಂಕದಲ್ಲಿ ಬೆಂಗಳೂರಿನ ಜನತೆ..!

ವರ್ಷಾಂತ್ಯದೊಳಗೆ ಅಥವಾ 2021 ಆರಂಭದಲ್ಲಿ ಲಸಿಕೆ ಬಳಕೆಗೆ ಲಭ್ಯವಾಗಲಿದೆ ಎಂದು ಮೋದಿ ಹೇಳಿದ್ದರು. ಇನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಕೂಡ ಲಸಿಕೆ 2021ರ ಆರಂಭದಲ್ಲಿ ಲಭ್ಯವಾಗಲಿದೆ ಎಂದಿದ್ದಾರೆ.  ಆದರೆ ದೇಶಾದ್ಯಂತ ಲಸಿಕೆ ಸಿಗುವಂತೆ ಮಾಡುವುದು ಭಾರತದ ಮುಂದಿರುವ ಮತ್ತೊಂದು ಸವಾಲು ಎಂದು ಹರ್ಷವರ್ಧನ್ ಹೇಳಿದ್ದಾರೆ. 

ವಿಶ್ವದ ಅತಿ ದೊಡ್ಡ ಲಸಿಕೆ ಉತ್ಪಾದನಾ ಸಂಸ್ಥೆಯಾದ ಭಾರತದ ಸೆರಮ್ ಸಂಸ್ಥೆ ಚೀಫ್ ಎಕ್ಸ್‌ಕ್ಯೂಟೀವ್ ಅದಾರ್ ಪೂನಾವಲ್ಲಾ ಲಸಿಕೆ ಕುರಿತು ಮಹತ್ವದ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಭಾರತದಲ್ಲಿ ಎಲ್ಲಾ ಭಾಗದಲ್ಲಿ, ಎಲ್ಲರಿಗೂ ಕೊರೋನಾ ಲಸಿಕೆ 20204ರಲ್ಲಿ ಲಭ್ಯವಾಗಲಿದೆ ಎಂದಿದ್ದಾರೆ. 

ಸದ್ಯ ಭಾರತದಲ್ಲಿ ಪ್ರತಿ ದಿನ ಸರಾಸರಿ 1,000 ಮಂದಿ ಕೊರೋನಾಗೆ  ಬಲಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಿದೆ. ಇದರ ನಡುವೆ ಕೊರೋನಾ ಲಸಿಕೆ ಕೂಡ ವಿಳಂಭವಾಗುತ್ತಿದೆ. ಹೀಗಾಗಿ ಭಾರತದಲ್ಲಿ ಕೊರೋನಾ ನಿಯಂತ್ರಣ ಅತೀ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕೊರೋನಾ ಲಸಿಕೆ ಉತ್ಪಾದನೆಯ ನಂತರ,  ಲಸಿಕೆ ಪ್ರಮಾಣವನ್ನು ಭಾರತದಾದ್ಯಂತ ಲಕ್ಷಾಂತರ ಜನರಿಗೆ ವಿತರಿಸಲು, ಸಾಗಾಟ ಮಾಡಲು  ಅತ್ಯಾಧುನಿಕ ಲಾಜಿಸ್ಟಿಕ್ಸ್, ಹೆಚ್ಚಿನ  ಮಾನವ ಸಂಪನ್ಮೂಲ ಅತೀ ಅಗತ್ಯವಾಗಿದೆ.