ನವ​ದೆ​ಹ​ಲಿ(ಮೇ.31): ಕೋವಿಡ್‌ ಲಸಿ​ಕೆ​ಗಳ ಕೊರತೆ ಬಗ್ಗೆ ರಾಜ್ಯ ಸರ್ಕಾ​ರ​ಗಳ ದೂರಿನ ಬೆನ್ನಲ್ಲೇ, ಜೂನ್‌ ತಿಂಗ​ಳಲ್ಲಿ ಕೋವಿ​ಶೀಲ್ಡ್‌ ಲಸಿ​ಕೆಯ 9-10 ಕೋಟಿಯಷ್ಟುಡೋಸ್‌​ಗ​ಳನ್ನು ಉತ್ಪಾ​ದಿಸಿ ಪೂರೈ​ಸ​ಲಾ​ಗು​ತ್ತದೆ ಎಂದು ಕೇಂದ್ರ ಸರ್ಕಾ​ರಕ್ಕೆ ಸೀರಂ ಇನ್‌​ಸ್ಟಿ​ಟ್ಯೂಟ್‌ ಭರ​ವಸೆ ನೀಡಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಈ ಕುರಿ​ತಾಗಿ ಇತ್ತೀ​ಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವ​ರಿಗೆ ಪತ್ರ ಬರೆದ ಕೋವಿ​ಶೀಲ್ಡ್‌ ಲಸಿಕೆ ಉತ್ಪಾ​ದಿ​ಸುವ ಹೊಣೆ ಹೊತ್ತಿ​ರುವ ಪುಣೆಯ ಸೀರಂ ಇನ್‌​ಸ್ಟಿ​ಟ್ಯೂ​ಟ್‌​(​ಎಸ್‌​ಐ​ಐ), ಕೊರೋ​ನಾ​ದಿಂದ ಎದು​ರಾ​ಗಿ​ರುವ ಸವಾ​ಲು​ಗಳ ಮಧ್ಯೆಯೇ ಲಸಿಕೆ ಉತ್ಪಾ​ದನೆ ಹೆಚ್ಚ​ಳ​ಕ್ಕಾಗಿ ನಮ್ಮ ಸಿಬ್ಬಂದಿ ಹಗ​ಲಿ​ರುಳು ಎನ್ನದೇ ಕಾರ್ಯ ನಿರ್ವ​ಹಿ​ಸು​ತ್ತಿ​ದ್ದಾ​ರೆ. ಮೇ ತಿಂಗ​ಳಲ್ಲಿ 6.4 ಕೋಟಿಯಷ್ಟುಡೋಸ್‌​ಗ​ಳನ್ನು ಉತ್ಪಾ​ದಿಸಿ, ಪೂರೈ​ಸ​ಲಾ​ಗಿದೆ. ಆದರೆ ಜೂನ್‌ ತಿಂಗ​ಳಲ್ಲಿ 10 ಕೋಟಿಯಷ್ಟುಡೋಸ್‌​ಗ​ಳನ್ನು ನೀಡಲಾಗುವುದು ಎಂದು ಆಶ್ವಾ​ಸ​ನೆ ನೀಡಿದೆ.

ಕೋವಿ​ಶೀಲ್ಡ್‌, ಕೋವ್ಯಾ​ಕ್ಸಿನ್‌ ಮತ್ತು ರಷ್ಯಾದ ಸ್ಪುಟ್ನಿ​ಕ್‌-5 ಎಂಬ ಮೂರು ಕೊರೋನಾ ಲಸಿ​ಕೆ​ಗ​ಳನ್ನು ಭಾರತದಲ್ಲಿ ಬಳ​ಸ​ಲಾ​ಗು​ತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona