ನವದೆಹಲಿ(ಮೇ.12): ಆಯುರ್ವೇದ ಗಿಡಮೂಲಿಕೆಗಳಾದ ಅಶ್ವಗಂಧ, ಯಷ್ಟಿಮಧು, ಗುಡುಚಿ ಪೀಪ್ಲಿ ಹಾಗೂ ಆಯುಷ್‌-64 ಮಾತ್ರೆಗಳನ್ನು ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಕ್ಲಿನಿಕಲ್‌ ಪ್ರಯೋಗಕ್ಕೆ ಒಳಪಡಿಸಲು ಆಯುಷ್‌ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ.

ಈ ಉತ್ಪನ್ನಗಳನ್ನು ಕೊರೋನಾಗೆ ನಿರೋಧಕವಾಗಿ ಅಥವಾ ಇರುವ ಔಷಧಿಗಳಿಗೆ ಮತ್ತಷ್ಟುಪೂರಕವಾಗಿ ಬಳಸುವ ಬಗ್ಗೆ ಪ್ರಯೋಗ ನಡೆಯಲಿದೆ ಎಂದು ಆಯುಷ್‌ ಸಚಿವಾಲಯ ತಿಳಿಸಿದೆ.

ದೇಶವನ್ನುದ್ದೇಶಿಸಿ ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಮಾತು!

‘ಸಂಜೀವಿನಿ ಆ್ಯಪ್‌ ಸಹಾಯದಿಂದ ಹೈ ರಿಸ್ಕ್‌ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಇತರ ಸಿಬ್ಬಂದಿಗಳ ಮೂಲಕ ಈ ಕ್ಲಿನಿಕಲ್‌ ಪ್ರಯೋಗ ನಡೆಸಲಾಗುತ್ತದೆ. ಸಂಜೀವಿನಿ ಆ್ಯಪ್‌ ಮೂಲಕ 50 ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ’ ಎಂದು ಆಯುಷ್‌ ಸಚಿವಾಲಯ ತಿಳಿಸಿದೆ.

‘ನಮ್ಮ ಸಾಂಪ್ರದಾಯಿಕ ಜ್ಞಾನ ತುಂಬಾ ಶ್ರೀಮಂತವಾಗಿದೆ. ಇದು ಕೊರೋನಾ ನಿಯಂತ್ರಣಕ್ಕೆ ಪರಿಣಾಮಕಾರಿ ಕೆಲಸ ಮಾಡುವ ಸಾಧ್ಯತೆ ಇದೆ’ ಎಂದು ಅದು ವಿಶ್ವಾಸ ವ್ಯಕ್ತಪಡಿಸಿದೆ.

30,000 ಖರ್ಚು ಮಾಡಿ ಮನೆಗೆ ಬಂದವನ ಹೊರಗಟ್ಟಿದ ಕುಟುಂಬ!

4 ಔಷಧದ ಮಹತ್ವ:

ಅಶ್ವಗಂಧವು ಸಕ್ಕರೆ ಅಂಶದ ನಿಯಂತ್ರಣ, ಒತ್ತಡ ಹಾಗೂ ಖಿನ್ನತೆ ನಿಯಂತ್ರಣಕ್ಕೆ ಸಹಕಾರಿ. ಯಷ್ಟಿಮಧು ಅಲ್ಸರ್‌ ನಿರೋಧಕ, ಕೆಮ್ಮು-ನೆಗಡಿ ನಿಯಂತ್ರಕವಾಗಿ ಕೆಲಸ ಮಾಡುತ್ತದೆ. ಗುಡುಚಿ ಪೀಪ್ಲಿ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಒತ್ತಡ ನಿಯಂತ್ರಣಕ್ಕೂ ಇದು ಸಹಕರಿಸುತ್ತದೆ. ಇನ್ನು ಆಯುಷ್‌-64 ಮಲೇರಿಯಾ ನಿರೋಧಕ ಔಷಧಿಯಾಗಿದೆ.