ದೇಶವನ್ನುದ್ದೇಶಿಸಿ ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಮಾತು!
ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು| ಮಂಗಳವಾರ ರಾತ್ರಿ 8 ಗಂಟೆಗೆ ಮೋದಿ ಭಾಷಣ| ಲಾಕ್‌ಡೌನ್ ವಿಸ್ತರಣೆಯೋ? ಅಂತ್ಯವೋ?
ನವದೆಹಲಿ(ಮೇ.12): ಮಂಗಳವಾರ ರಾತ್ರಿ ಎಂಟು ಗಂಟೆಗೆ ಪ್ರಧಾನಿ ಮಂದಿ ದೇಶವನ್ನುದ್ದೆಶಿಸಿ ಭಾಷಣ ಮಾತನಾಡಲಿದ್ದು, ಯಾವ ವಿಚಾರಚವಾಗಿ ಮಾತನಾಡುತ್ತಾರೆ ಎಂಬುವುದು ಭಾರೀ ಕುತೂಹಲ ಮೂಡಿಸಿದೆ.
ಈ ಸಂಬಂಧ ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಪ್ರಧಾನಿ ಮೋದಿ ಲಾಲ್‌ಡೌನ್ ಸಂಬಂಧ ದೇಶವನ್ನುದ್ದೆಶಿಸಿ ಮಾತನಾಡಬಹುದೆಂದು ಅಂದಾಜಿಸಲಾಗಿದೆ.
17ರ ನಂತರ ದೇಶವ್ಯಾಪಿ ಮೃದು ಲಾಕ್‌ಡೌನ್ ಜಾರಿ ಸಂಭವ: ಏನಿರುತ್ತೆ? ಏನಿರಲ್ಲ?
ಈಗಾಗಲೇ ದೇಶದಲ್ಲಿ ಮೂರನೇ ಹಂತದ ಲಾಕ್‌ಡೌನ್ ನಡೆಯುತ್ತಿದ್ದು, ಕೊಂಚ ಸಡಿಲಿಕೆ ನೀಡಲಾಗಿದೆ. ಆದರೆ ಲಾಕ್‌ಡೌನ್ ಸಡಿಲಿಕೆ ಬಳಿಕ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರುತ್ತಿರುವುದು ಆತಂಕ ಮೂಡಿಸಿದೆ.
ಹೀಗಿರುವಾಗ ಪಿಎಂ ಮೋದಿ ಲಾಕ್‌ಡೌನ್ ವಿಸ್ತರಿಸುತ್ತಾರೋ? ಅಥವಾ ಕೊನೆಗೊಳಿಸುತ್ತಾರೋ? ಅಥವಾ ಮತ್ತಷ್ಟು ಕಠಿಣಗೊಳಿಸುತ್ತಾರೋ ಎಂಬುವುದು ಸದ್ಯ ಕುತೂಹಲ ಮೂಡಿಸಿದೆ.
ಮೋದಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಿಎಂ ಬಿಎಸ್‌ವೈ ಮಂಡಿಸಿದ ಪ್ರಮುಖಾಂಶಗಳು..!
ಸಿಎಂ ಜೊತೆಗೆ ಪಿಎಂ ಚರ್ಚೆ
ಸೋಮವಾರವಷ್ಟೇ ಪ್ರಧಾನಿ ಮೋದಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಲಾಕ್‌ಡೌನ್ ವಿಸ್ತರಣೆ ಕುರಿತಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಲಾಕ್‌ಡೌನ್ ತೆರವಿನ ಬಳಿಕದ ಸಮಸ್ಯೆ ಎದುರಿಸಲು ನೀಲನಕ್ಷೆ ತಯಾರಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದ್ದು, ಇದನ್ನು ಮೇ. 15ರೊಳಗೆ ಕೇಂದ್ರಕ್ಕೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಮೇ. 17ರ ಬಳಿಕ ಮೃದು ಲಾಕ್‌ಡೌನ್ ಜಾರಿಗೊಳಿಸುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಇದು ಈ ಹಿಂದಿನ ಲಾಕ್‌ಡೌನ್‌ಗಿಂತ ಭಿನ್ನವಾಗಿರಲಿದೆ ಎನ್ನಲಾಗಿದೆ.
ಸಿಎಂ-ಪಿಎಂ ವಿಡಿಯೋ ಕಾನ್ಫರೆನ್ಸ್: ಮೋದಿ ಸಭೆಯ ಒಟ್ಟಾರೆ ಸಾರಾಂಶ ಇಲ್ಲಿದೆ....!
ವಿಶ್ವ ದಾದಿಯರ ದಿನ
ಇಂದು ವಿಶ್ವ ದಾದಿಯರ ದಿನವಾಗಿರುವುದರಿಂದ ಕೊರೋನಾ ವೈರಸ್ ತುರ್ತು ಪರಿಸ್ಥಿತಿ ವೇಳೆ ಹೋರಾಡುತ್ತಿರುವ ಎಲ್ಲ ನರ್ಸ್ಗಳಿಗೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ
ಕೇಂದ್ರದ ಪ್ರಕಾರ ಇದುವರೆಗೂ 70,756 ಸೋಂಕಿತರ ಪೈಕಿ ಕೇವಲ 22454 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಮೂಲಕ ಪ್ರಸ್ತುತ ದೇಶದಲ್ಲಿ 46008 ಸಕ್ರಿಯ ಪ್ರಕರಣಗಳಿವೆ. ಎಲ್ಲರಿಗೂ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
"
"