ನವದೆಹಲಿ[ಮಾ.05]: ಚೀನಾ ಮೂಲದ ಕೊರೋನಾ ವೈರಸ್‌ ಜಗ​ತ್ತಿ​ನಾ​ದ್ಯಂತ ಶರ​ವೇ​ಗ​ದಲ್ಲಿ ಹಬ್ಬು​ತ್ತಿದೆ. ಭಾರ​ತ​ದ​ಲ್ಲಿಯೂ 3 ಪ್ರಕ​ರ​ಣ​ಗ​ಳಲ್ಲಿ ಕೊರೋನಾ ವೈರಸ್‌ ತಗು​ಲಿ​ರು​ವುದು ದೃಢ​ವಾ​ಗಿದೆ. ಸೋಂಕಿ​ತರ ಸಂಖ್ಯೆ ಇನ್ನೂ ಹೆಚ್ಚಾ​ಗ​ಬ​ಹು​ದೆಂಬ ಶಂಕೆ ವ್ಯಕ್ತ​ವಾ​ಗು​ತ್ತಿ​ದೆ. ಈಗಾ​ಗ​ಲೇ ಅನು​ಮಾ​ನಾ​ಸ್ಪ​ದ 23,532 ಜನ​ರನ್ನು ನಿಗಾ​ದಲ್ಲಿ ಇಡ​ಲಾ​ಗಿದೆ ಎಂದು ಸರ್ಕಾ​ರವೇ ಹೇಳಿದೆ. ನೆರೆಯ ಶ್ರೀಲಂಕಾ​ದಲ್ಲೂ ಒಬ್ಬ​ರಿಗೆ ಸೋಂಕು ತಗು​ಲಿ​ರು​ವುದು ದೃಢ​ವಾ​ಗಿದೆ. ಪಾಕಿ​ಸ್ತಾ​ನವೂ ಮೊದಲ ಸೋಂಕಿತ ವ್ಯಕ್ತಿಯ ಬಗ್ಗೆ ಬಾಯ್ಬಿ​ಟ್ಟಿದೆ.

ನಮಸ್ತೇ ಹೇಳಿ ಕೊರೋನಾದಿಂದ ಬಚಾವ್ ಆಗಿ ಅಂತಿದ್ದಾರೆ ಸಲ್ಮಾನ್ ಖಾನ್

ಭಾರ​ತಕ್ಕೇಕೆ ಇದು ದೊಡ್ಡ ಸವಾ​ಲು?

ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆಯಿರುವ ದೇಶ ಚೀನಾ. ಭಾರತ ನಂ.2 ಸ್ಥಾನದಲ್ಲಿದೆ. ಆದರೆ, ಜನಸಾಂದ್ರತೆಯಲ್ಲಿ ಚೀನಾಕ್ಕಿಂತ ಭಾರತ ಮುಂದಿದೆ. ಚೀನಾದಲ್ಲಿ ಪ್ರತಿ ಚದರ ಕಿ.ಮೀ. ಜಾಗದಲ್ಲಿ 148 ಜನರು ವಾಸಿಸುತ್ತಿದ್ದರೆ ಭಾರತದಲ್ಲಿ ಪ್ರತಿ ಚದರ ಕಿ.ಮೀ.ಯಲ್ಲಿ 420 ಜನರು ವಾಸಿಸುತ್ತಿದ್ದಾರೆ. ಮೇಲಾಗಿ, ಇಲ್ಲಿನ ಆರೋಗ್ಯ ವ್ಯವ​ಸ್ಥೆಯು ಅಷ್ಟೊಂದು ಸಮ​ರ್ಪ​ಕ​ವಾ​ಗಿ​ಲ್ಲದ ಕಾರಣ ಮತ್ತು ದೇಶೀಯ ಆಂತ​ರಿಕ ವಲಸೆ ಹೆಚ್ಚಾ​ಗಿ​ರು​ವು​ದ​ರಿಂದ ಸೋಂಕು ನಿಯಂತ್ರಣ ಭಾರ​ತಕ್ಕೆ ಒಂದು ದೊಡ್ಡ ಸವಾಲು. ಭಾರತದ ಜನಸಂಖ್ಯೆಗೆ ಹೋಲಿ​ಸಿ​ದರೆ ಕೊರೋನಾ ಸೋಂಕಿತ ಪ್ರಕ​ರ​ಣ​ಗಳು ತೀರಾ ಚಿಕ್ಕ​ದೆ​ನಿ​ಸ​ಬ​ಹು​ದು. ಆದರೆ ಕೊರೋನಾ ವೈರಸ್‌ ಚೀನಾ​ದಿಂದ ಹೊರಗೆ ವ್ಯಾಪ​ಕ​ವಾಗಿ ಹಬ್ಬು​ತ್ತಿ​ದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಏಕಾ​ಏಕಿ ಈ ಸೋಂಕು ವ್ಯಾಪಿ​ಸಿ​ದಲ್ಲಿ ತೀವ್ರ ಜನನಿ​ಬಿ​ಡ​ವಾ​ಗಿ​ರುವ ಭಾರ​ತ​ದಂಥ ದೇಶ​ಕ್ಕೆ ಅದನ್ನು ತಡೆಯುವುದು ಚೀನಾಕ್ಕಿಂತ ಕಷ್ಟವಾಗಬಹುದು. ಜೊತೆಗೆ ಆರ್ಥಿಕತೆಗೂ ತಾಳಿಕೊಳ್ಳಲಾಗದ ಹೊಡೆತ ನೀಡಬಹುದು ಎಂಬ ಕಳವಳ ವ್ಯಕ್ತವಾಗುತ್ತಿದೆ.

ಕೊರೋನಾ ವೈರಸ್‌ಗೆ ಸಿಕ್ತು ಔಷಧಿ!: 48 ಗಂಟೆಯಲ್ಲಿ ರೋಗಿ ಗುಣಮುಖ?

ಜನ​ಸಾಂದ್ರ​ತೆಯೇ ಕಂಟಕ

ಬೇರೆಲ್ಲಾ ದೇಶ​ಗ​ಳಿ​ಗಿಂತ ಭಾರತ ಕೊರೋನಾ ಬಗ್ಗೆ ಹೆಚ್ಚು ಜಾಗೃ​ತ​ವಾ​ಗಿ​ರ​ಬೇಕು. ಕಾರಣ ಭಾರ​ತದ ಜನ​ಸಾಂದ್ರತೆ. ಪ್ರತಿ ಚದರ ಕಿ.ಮೀ. ಪ್ರದೇ​ಶ​ದಲ್ಲಿ ಇಲ್ಲಿ 420 ಜನರು ವಾಸಿ​ಸು​ತ್ತಾರೆ. ಅದೇ ಚೀನಾ​ದಲ್ಲಿ 148 ಜನರು ವಾಸಿ​ಸು​ತ್ತಾರೆ. ಮುಂಬೈನ ಧಾರಾವಿ ಕೊಳಚೆ ಪ್ರದೇ​ಶ​ದಲ್ಲಿ ಅಥವಾ ಸಾಂಪ್ರ​ದಾ​ಯಿಕ ಅವಿ​ಭಕ್ತ ಕುಟುಂಬ​ಗ​ಳಲ್ಲಿ ಸೋಂಕು ತಗು​ಲುವ ಸಾಧ್ಯತೆ ಹೆಚ್ಚು. ಪರ​ಸ್ಪರ ಮಾತು, ಶೀತ, ಕೆಮ್ಮು, ಸೀನು ಇವು​ಗ​ಳಿಂದ ಸೋಂಕು ವ್ಯಾಪಿ​ಸ​ಬ​ಹು​ದು.

ಬೆಂಗ್ಳೂರಲ್ಲಿ ಕೊರೋನಾ ವೈರಸ್: ರೋಗ ಬರದಂತೆ ಹಿಂಗ್ ಮಾಡಿದ್ರೆ ಬೆಸ್ಟ್

ಪಾಕಿ​ಸ್ತಾನ ಮತ್ತು ಬಾಂಗ್ಲಾದೇಶ ಎರಡೂ ಸಾರ್ವ​ಜ​ನಿಕ ಆರೋಗ್ಯಕ್ಕೆ ಭಾರ​ತ​ಕ್ಕಿಂತ ಕಡಿಮೆ ವ್ಯಯಿ​ಸು​ತ್ತಿವೆ. ಹಾಗಾಗಿ ಆ ದೇಶ​ದಲ್ಲಿ ಸೋಂಕು ಹೆಚ್ಚಾ​ಗು​ತ್ತಲೇ ಇದೆ. ಪಾಕಿ​ಸ್ತಾ​ನ​ದಲ್ಲಿ ಪತ್ತೆ​ಯಾದ ಮೊದಲ ಪ್ರಕ​ರ​ಣ​ದಲ್ಲಿ ಸೋಂಕಿತ ವ್ಯಕ್ತಿಯು ಇರಾ​ನ್‌​ನಿಂದ ಬಂದ​ವನು. ಮಧ್ಯ​ಪ್ರಾ​ಚ್ಯ​ದಲ್ಲಿ ಈಗಾ​ಗಲೇ 245 ಜನ​ರಲ್ಲಿ ಸೋಂಕಿ​ರು​ವುದು ದೃಢ​ಪ​ಟ್ಟಿದ್ದು, 26 ಜನರು ಸಾವ​ನ್ನ​ಪ್ಪಿ​ದ್ದಾರೆ. ಪಾಕಿ​ಸ್ತಾನವು ಚೀನಾ, ಜಪಾನ್‌ ಮತ್ತು ಇರಾ​ನ್‌​ನಿಂದ ಬರುವ ಮತ್ತು ಹೋಗುವ ವಿಮಾ​ನ​ಗ​ಳನ್ನು ರದ್ದು​ಪ​ಡಿ​ಸಿದೆ. ಪಾಕ್‌ ಚೀನಾ​ದಲ್ಲಿ ಸಿಕ್ಕಿ​ಬಿದ್ದ ವಿದ್ಯಾ​ರ್ಥಿ​ಗ​ಳನ್ನು ಕರೆ​ತ​ರಲು ನಿರಾ​ಕ​ರಿ​ಸಿದೆ. ಬಾಂಗ್ಲಾ ಚೀನಾದ ವುಹಾ​ನ್‌​ನಿಂದ ಕರೆ​ತಂದ 312 ಜನ​ರನ್ನು ಢಾಕಾದ ಹೊರ​ವ​ಲ​ಯ​ದಲ್ಲಿ ತೀವ್ರ ನಿಗಾ​ದಲ್ಲಿ ಇರಿ​ಸಿ​ದೆ.

ಆಂತ​ರಿ​ಕ ವಲ​ಸೆ​ಯಿಂದ ಸಮ​ಸ್ಯೆ

ಚೀನಾ​ದಂತೆ ಭಾರ​ತದಲ್ಲೂ ಆಂತ​ರಿಕ ವಲಸೆ ಹೆಚ್ಚು. 2011ರ ಜನ​ಗ​ಣತಿ ಪ್ರಕಾರ 45 ಕೋಟಿ ಜನರು ಉದ್ಯೋಗ ಅಥವಾ ಸೌಲಭ್ಯ ಅರಸಿ ಒಂದು ಪ್ರದೇ​ಶ​ದಿಂದ ಇನ್ನೊಂದು ಪ್ರದೇ​ಶಕ್ಕೆ ವಲಸೆ ಬಂದಿ​ದ್ದಾರೆ. ದಿನ​ನಿ​ತ್ಯ ಲಕ್ಷಾಂತರ ಜನ ಉದ್ಯೋಗ ಅರಸಿ ಗ್ರಾಮೀಣ ಪ್ರದೇ​ಶ​ದಿಂದ ನಗರ ಪ್ರದೇ​ಶಕ್ಕೆ ಬರುತ್ತಾರೆ. ಇಂಥ ಸಂದ​ರ್ಭ​ದಲ್ಲಿ ಈ ಮಾರ​ಣಾಂತಿಕ ವೈರಸ್‌ ತಡೆ​ಯು​ವುದು ಸುಲ​ಭದ ಕೆಲ​ಸ​ವಲ್ಲ. ಚೀನಾ ಕೊರೋನಾ ಪೀಡಿತ ಹುಬೈ ಪ್ರಾಂತ್ಯಕ್ಕೆ ಸಂಪ​ರ್ಕ​ವನ್ನೇ ತಪ್ಪಿಸಿ ವೈರಸ್‌ ನಿಯಂತ್ರ​ಣಕ್ಕೆ ಪ್ರಯ​ತ್ನಿ​ಸಿತ್ತು. ಆದರೆ ಭಾರತದಲ್ಲಿ ಇಂಥ ಪ್ರಯತ್ನ ಫಲ ಕೊಡುವುದಿಲ್ಲ. ಭಾರ​ತ​ದ​ಲ್ಲಿ ಜನ​ರು ನಿತ್ಯ ಒಂದಿ​ಲ್ಲೊಂದು ಪ್ರದೇ​ಶಕ್ಕೆ ಪ್ರಯಾ​ಣಿ​ಸು​ವು​ದ​ರಿಂದ ಸೋಂಕು ಬೇಗ ವ್ಯಾಪಿ​ಸುವ ಸಾಧ್ಯತೆ ಹೆಚ್ಚು. ದೊಡ್ಡ ಪ್ರಮಾ​ಣ​ದಲ್ಲಿ ಸೋಂಕು ಏಕಾ​ಏಕಿ ಹಬ್ಬಲು ಆರಂಭ​ವಾ​ದರೆ ಈಗಾ​ಗಲೇ ಸಂಕ​ಷ್ಟ​ದ​ಲ್ಲಿ​ರುವ ಭಾರತದ ಆರ್ಥಿ​ಕ​ತೆಗೆ ದೊಡ್ಡ ಹೊಡೆತ ಬೀಳು​ತ್ತ​ದೆ. ನಮ್ಮ ದೇಶದ ಆರೋಗ್ಯ-ರಕ್ಷಣಾ ಖರ್ಚು ವಿಶ್ವದಲ್ಲೇ ಅತ್ಯಂತ ಕಡಿಮೆ. ಒಟ್ಟು ದೇಶೀಯ ಉತ್ಪನ್ನದ ಕೇವಲ 3.7% ಮಾತ್ರ ಭಾರತ ಆರೋ​ಗ್ಯ​ಕ್ಕಾಗಿ ವ್ಯಯ ಮಾಡು​ತ್ತಿ​ದೆ. ಅದು ಸಾರ್ವಜನಿಕ ಆಸ್ಪತ್ರೆಗಳ ದೈನಂದಿನ ನಿರ್ವಹಣೆ ಮತ್ತು ದುರಸ್ತಿಗೇ ಬೇಕಾಗುತ್ತದೆ. ಇನ್ನು ಖಾಸಗಿ ಆಸ್ಪ​ತ್ರೆ​ಗಳು ಬಹು​ತೇ​ಕ​ರಿಗೆ ನಿಲು​ಕದ ನಕ್ಷ​ತ್ರ.

ಕೊರೋನಾ ಬಂದ ಕೂಡ್ಲೇ ಸಾಯೋಲ್ಲ: ಹೀಗ್ ಮಾಡಿದ್ರೆ ರೋಗ ಬರೋದೇ ಇಲ್ಲ...

ಚೀನಾ​ದಲ್ಲಿ ಸೋಂಕು ಹರ​ಡಿ​ದಾ​ಗಿ​ನಿಂದ ಭಾರ​ತ ಸೋಂಕು ನಿಯಂತ್ರ​ಣಕ್ಕೆ ​ಸಾ​ಕ​ಷ್ಟುಕ್ರಮ ​ಕೈ​ಗೊ​ಳ್ಳು​ತ್ತಿ​ದೆ. ಬಂದರು ಮತ್ತು ಏರ್‌​ಪೋ​ರ್ಟ್‌​ಗ​ಳ​ಲ್ಲಿ ಪ್ರಯಾ​ಣಿ​ಕ​ರನ್ನು ಪರೀ​ಕ್ಷಿ​ಸ​ಲಾ​ಗು​ತ್ತಿ​ದೆ. ಈಗಾ​ಗಲೇ ಸೋಂಕುಪೀಡಿತ ದೇಶಗಳಿಂದ ಭಾರತಕ್ಕೆ ಬರುವವರ ವೀಸಾ​ವನ್ನು ರದ್ದು ಮಾಡಿದೆ. ನೂತನ ಟ್ರಾವೆಲ್‌ ಅಡ್ವೈ​ಸ​ರಿ​ಯನ್ನು ಬಿಡು​ಗಡೆ ಮಾಡಿ​ದೆ. ಆದ​ರೆ ಭಾರತದಲ್ಲಿ ಕ್ಷಯರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿದ ನ್ಯೂಸೌತ್‌ ವೇಲ್ಸ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪದ್ಮನೇಸನ್‌ ನರಸಿಂಹನ್‌, ಭಾರತದಲ್ಲಿ ರೋಗ ಹರಡುವ ಸಾಧ್ಯತೆಗಳು ಹೆಚ್ಚು ಎಂದು ಅಭಿ​ಪ್ರಾ​ಯ​ಪ​ಟ್ಟಿ​ದ್ದಾರೆ. ಆಂತ​ರಿಕ ವಲಸೆ, ಜನ​ಸಾಂದ್ರತೆ, ಸೂಕ್ತ ಆರೋಗ್ಯ ಸೌಲ​ಭ್ಯ​ಗಳ ಕೊರತೆ ಭಾರ​ತಕ್ಕೆ ಅತಿ ದೊಡ್ಡ ಸವಾ​ಲಾ​ಗ​ಬಲ್ಲದು ಎಂದು ಅವರು ಹೇಳಿ​ದ್ದಾ​ರೆ.

ಬೇಸಿ​ಗೆ ಭಾರ​ತಕ್ಕೆ ವರ​ವಾ​ಗು​ತ್ತಾ?

ಕೊರೋನಾ ವೈರಸ್‌ ಈಗಾಗಲೇ ಹರಡುತ್ತಿರುವ ಸ್ಥಳಗಳಿಗಿಂತ ಭಾರತ ಮತ್ತು ದಕ್ಷಿಣ ಏಷ್ಯಾದ ದೇಶ​ಗ​ಳಿಗೆ ಸದ್ಯಕ್ಕೆ ಅನುಕೂಲವಾಗುವಂತಹ ಒಂದೇ ಒಂದು ಅಂಶ​ವೆಂದ​ರೆ ಇಲ್ಲಿ​ನ ಹವಾಮಾನ. ಎ​ಲ್ಲಾ ರೀತಿಯ ಕೊರೋನಾ ವೈರಸ್‌ಗ​ಳು ತಂಪಾದ, ಶುಷ್ಕ ಹವಾಮಾನದಲ್ಲಿ ಹೆಚ್ಚು ಸಕ್ರಿ​ಯ​ವಾ​ಗು​ತ್ತವೆ. ಹಾಗಾ​ಗಿಯೇ ಚಳಿ​ಗಾ​ಲ​ದಲ್ಲಿ ಜ್ವರ ಹೆಚ್ಚು. ಭಾರತ ಸೇರಿ​ದಂತೆ ಏಷ್ಯಾ ಉಪಖಂಡದಲ್ಲಿ ಬೇಸಿಗೆ ಸಮೀಪಿಸುತ್ತಿರುವುದರಿಂದ, ಸೂರ‍್ಯನ ಶಾಖವು ವೈರಸ್ಸನ್ನು ಹೊರಹಾಕುವಲ್ಲಿ ಸಹಾ​ಯ​ಕ​ವಾ​ಗಬ​ಹು​ದು ಎಂಬುದು ಸಣ್ಣ ಸಮಾ​ಧಾನ ತರುವ ವಿಷ​ಯ.

ಹಾಗೆಯೇ ದೇಶಾ​ದ್ಯಂತ ವೈರಸ್‌ ನಿಯಂತ್ರ​ಣಕ್ಕೆ ತುರ್ತು ಕ್ರಮ ಕೈಗೊ​ಳ್ಳ​ಲಾ​ಗು​ತ್ತಿದೆ. ಭಾರ​ತದ ಆರೋಗ್ಯ ವ್ಯವ​ಸ್ಥೆಯು ಅಷ್ಟೊಂದು ಸಮ​ರ್ಪ​ಕ​ವಾ​ಗಿ​ಲ್ಲ​ದಿ​ದ್ದ​ರೂ, ಭಾರ​ತಕ್ಕೆ ಇಂಥ ವೈರ​ಸ್‌​ಗಳು ಹೊಸದೇ​ನ​ಲ್ಲ. ಮಲೇ​ರಿಯಾ, ಡೆಂಘೀ, ಕ್ಷಯ ಮುಂತಾದ ರೋಗಗಳು ಇಲ್ಲಿ ಅಪ್ಪ​ಳಿಸಿ ಲಕ್ಷಾಂ​ತರು ಜನರು ಮೃತ​ಪ​ಟ್ಟಿ​ದ್ದರು. ಆ ಎಲ್ಲಾ ಸೋಂಕು​ಗ​ಳಿಂದ ಭಾರತ ಸಾಕಷ್ಟುಪಾಠ ಕಲಿ​ತಿದೆ. ಇಂಥ ಸೋಂಕು​ಗಳ ವಿರುದ್ಧ ಹೋರಾ​ಡುವ ಪರಿ​ಣ​ತಿ​ಯ​ನ್ನು ಪಡೆ​ದಿದೆ. ಆದರೆ, ಅಷ್ಟಕ್ಕೇ ಸಮಾ​ಧಾನ ಪಡು​ವಂತಿಲ್ಲ. ಚೀನಾ​ದಂತೆ ಭಾರ​ತ​ದಲ್ಲಿ ಕೊರೋನಾ ವ್ಯಾಪಿ​ಸಿ​ದರೆ ಖಂಡಿ​ತ​ವಾ​ಗಿಯೂ ದೇಶಕ್ಕೆ ದೊಡ್ಡ ಕಂಟ​ಕ​ವಾಗು​ವು​ದ​ರಲ್ಲಿ ಸಂದೇ​ಹ​ವಿ​ಲ್ಲ.

ಕೃಪೆ: ದಿ ಪ್ರಿಂಟ್‌