Asianet Suvarna News Asianet Suvarna News

ದೇಶದಲ್ಲಿ ಒಂದೇ ದಿನ 1340 ಜನಕ್ಕೆ ಸೋಂಕು ದೃಢ: ಹೆಚ್ಚಿದ ಕೊರೋನಾ ಗಂಡಾಂತರ!

ದೇಶದಲ್ಲಿ ಒಂದೇ ದಿನ 1340 ಜನಕ್ಕೆ ಸೋಂಕು ದೃಢ, 43 ಮಂದಿ ಸಾವು!| ನಿನ್ನೆ ದಾಖಲೆ ಪ್ರಮಾಣದ ಕೇಸ್‌ ಪತ್ತೆ| ದೇಶದಲ್ಲಿ 11 ಸಾವಿರಕ್ಕೂ ಹೆಚ್ಚು ಬಾಧಿತರು| 400ರ ಗಡಿಯತ್ತ ಸಾವಿನ ಸಂಖ್ಯೆ| ಭಾರತದಲ್ಲಿ ಹೆಚ್ಚಿದ ಕೊರೋನಾ ಗಂಡಾಂತರ| 
 
Coronavirus in India 29 deaths over 1400 cases in 24 hour total count surges past 10000
Author
Bangalore, First Published Apr 15, 2020, 7:08 AM IST

ನವದೆಹಲಿ(ಏ.15): ಕೊರೋನಾ ಹಬ್ಬದಂತೆ ತಡೆಯಲು ದೇಶಾದ್ಯಂತ ಲಾಕ್‌ಡೌನ್‌ ಸೇರಿದಂತೆ ಇನ್ನಿತರ ಬಿಗಿ ಕ್ರಮ ಕೈಗೊಂಡ ಹೊರತಾಗಿಯೂ, ಮಂಗಳವಾರ ಒಂದೇ ದಿನ ದೇಶಾದ್ಯಂತ 1340 ಹೊಸ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸೋಮವಾರ 350ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದ ಮಹಾರಾಷ್ಟ್ರದಲ್ಲಿ ಮಂಗಳವಾರವೂ ಹೊಸದಾಗಿ 359 ಪ್ರಕರಣಗಳು ದಾಖಲಾಗಿವೆ. ಇದು ಈವರೆಗೆ ಮಹಾರಾಷ್ಟ್ರ ಮತ್ತು ದೇಶವ್ಯಾಪಿ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಸೋಂಕಿನ ಪ್ರಮಾಣವಾಗಿದೆ.

ಮತ್ತೊಂದೆಡೆ ಮಂಗಳವಾರ ಸೋಂಕಿಗೆ ದೇಶಾದ್ಯಂತ 43 ಜನ ಬಲಿಯಾಗಿದ್ದು, ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 381ಕ್ಕೆ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶವ್ಯಾಪಿ ಲಾಕ್‌ಡೌನ್‌ ಅನ್ನು ಮೇ 3ರವರೆಗೆ ವಿಸ್ತರಿಸಿದ ಬೆನ್ನಲ್ಲೇ, ಹೊರಬಿದ್ದಿರುವ ಈ ಅಂಕಿಅಂಶಗಳು ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟುಸ್ಫೋಟಗೊಳ್ಳುವ ಭೀತಿ ಎದುರಾಗುವಂತೆ ಮಾಡಿದೆ.

Fact Check: ಕೊರೋನಾ ಮಾರಿಗೆ ಚೀನಾದಲ್ಲಿ ಬಲಿಯಾದವರ ಅಸಲಿ ಲೆಕ್ಕ , ಸಾವಿರದಲ್ಲಿಲ್ಲ!

ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿ ಅನ್ವಯ ಸೋಂಕಿತರ ಸಂಖ್ಯೆ 10815ಕ್ಕೆ ತಲುಪಿದ್ದರೆ, ಪಿಟಿಐ ಸುದ್ದಿಸಂಸ್ಥೆ ದೇಶವ್ಯಾಪಿ ಸೋಂಕಿನ ಪ್ರಮಾಣ 11312ಕ್ಕೆ ತಲುಪಿದೆ ಎಂದು ಹೇಳಿದೆ.

ಮಹಾಸ್ಫೋಟ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಮತ್ತಷ್ಟುವ್ಯಾಪಕಗೊಂಡಿದೆ. ಮಂಗಳವಾರ ಒಂದೇ ದಿನ ರಾಜ್ಯದಲ್ಲಿ 359 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 2684ಕ್ಕೆ ತಲುಪಿದೆ. ಜೊತೆಗೆ ಮಂಗಳವಾರ ರಾಜ್ಯದ ವಿವಿಧೆಡೆ 18 ಜನ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಪ್ರಮಾಣ 178ಕ್ಕೆ ಏರಿದೆ. ಈ ಪೈಕಿ ಮುಂಬೈಯೊಂದರಲ್ಲಿ 112 ಜನ ಸಾವನ್ನಪ್ಪಿದ್ದಾರೆ.

ಅಗತ್ಯ ಸಿದ್ಧತೆ:

ಈ ನಡುವೆ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌, ‘ದೀರ್ಘಾಕಾಲೀನವರೆಗೂ ಅಗತ್ಯವಿರುವಷ್ಟುಕೊರೋನಾ ಪರೀಕ್ಷಾ ಕಿಟ್‌ಗಳನ್ನು ಶೇಖರಿಸಿಕೊಳ್ಳಲಾಗಿದೆ. ಸೋಂಕಿತರ ಚಿಕಿತ್ಸೆಗಾಗಿ ದೇಶಾದ್ಯಂತ 1,06,719 ಐಸೋಲೇಷನ್‌ ಬೆಡ್‌ಗಳನ್ನು ಹೊಂದಿರುವ 602 ಆಸ್ಪತ್ರೆಗಳನ್ನು ಮೀಸಲಿಡಲಾಗಿದೆ. ಅಲ್ಲದೆ, 12,024 ಐಸಿಯು ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೇ. 3ವರೆಗೆ ದೇಶದಾದ್ಯಂತ ಲಾಕ್‌‌ಡೌನ್: ಪಿಎಂ ಮೋದಿ ಅಧಿಕೃತ ಘೋಷಣೆ!

ಇದೇ ವೇಳೆ ಮುಂದಿನ 28 ದಿನಗಳ ಕಾಲಾವಧಿಯಲ್ಲಿ ದೇಶದ ಪ್ರತ್ಯೇಕ ಪ್ರದೇಶವೊಂದರಲ್ಲಿ ಒಂದೇ ಒಂದು ಹೊಸ ಕೊರೋನಾ ಪ್ರಕರಣ ದಾಖಲಾಗದೆ ಇದ್ದರೆ, ಕೊರೋನಾ ಸರಪಳಿಯನ್ನು ಹರಿದುಹಾಕಿದಂತೆಯೇ ಎಂದು ಇದೇ ವೇಳೆ ಆರೋಗ್ಯ ಇಲಾಖೆ ಹೇಳಿದೆ.

"

Follow Us:
Download App:
  • android
  • ios