ಮೇ. 3ವರೆಗೆ ದೇಶದಾದ್ಯಂತ ಲಾಕ್‌ಡೌನ್: ಪಿಎಂ ಮೋದಿ ಅಧಿಕೃತ ಘೋಷಣೆ!
ಮೇ. 3ವರೆಗೆ ದೇಶದಾದ್ಯಂತ ಲಾಕ್‌ಡೌನ್ ಘೋಷಣೆ| ಎಲ್ಲರ ಸಲಹೆ ಸೂಚನೆ ಮೇರೆಗೆ ಲಾಕ್‌ಡೌನ್ ವಿಸ್ತರಿಸಿರುವ ಮೋದಿ| ಲಾಕ್‌ಡೌನ್ ಸಡಿಲಿಕೆಗೆ ನಿಯಮ
ನವದೆಹಲಿ(ಏ.04): ಮಾರಕ ಕೊರೋನಾ ವೈರಸ್ ನಿಗ್ರಹಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾ.24ರಂದು ಘೋಷಣೆ ಮಾಡಿದ್ದ ಸುದೀರ್ಘ 21 ದಿನಗಳ ‘ಭಾರತ ಲಾಕ್‌ಡೌನ್’ ಮಂಗಳವಾರ ಮುಕ್ತಾಯಗೊಂಡಿದ್ದು, ಎರಡನೇ ಹಂತದ ಲಾಕ್‌ಡೌನ್ ಘೋಷಿಸಲಾಗಿದೆ. ಈ ಸಂಬಂಧ ಅಧಿಕೃತ ಘೋಷಣೆ ಮಾಡಿರುವ ಪಿಎಂ ಮೋದಿ ದೇಶದಾದ್ಯಂತ ಮೇ 3ರವರೆಗೆ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ್ದಾರೆ.
"
ಕೊರೋನಾ ವಾರಿಯರ್ ವೈದ್ಯ ಕಂದನ ನೋಡದೆ ತಿಂಗಳಾಯ್ತು!
ಕೊರೋನಾ ವೈರಸ್ ನಿಯಂತ್ರಣ ನಿಟ್ಟಿನಲ್ಲಿ ನಾಲ್ಕನೇ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ 'ವಿಶ್ವದಾದ್ಯಂತ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ತೆಗೆದುಕೊಂಡಿರುವ ಕ್ರಮ ಹಾಗೂ ಭಾರತೀಯರು ಇದಕ್ಕೆ ಕೊಟ್ಟ ಬೆಂಬಲ ಇಡೀ ವಿಶ್ವವೇ ಹಾಡಿ ಹೊಗಳುತ್ತಿದೆ. ಈಗಾಗಲೇ ಹೇರಲಾಗಿರುವ ಲಾಕ್‌ಡೌನ್ ಹಾಗೂ ಸಾಮಾಝಿಕ ಅಂತರದಿಂದ ಕೊರೋನಾದಿಂದ ಉಂಟಾಗಲಿದ್ದ ಅಪಾಯವನ್ನು ತಳ್ಳಿ ಹಾಕುವಲ್ಲಿ ನಾವು ಬಹುತೇಕ ಯಶಸ್ವಿಯಾಗಿದ್ದೇವೆ' ಎಂದಿದ್ದಾರೆ. ಅಲ್ಲದೇ 'ಎಲ್ಲಾ ರಾಜ್ಯ ಅಧಿಕಾರಿಗಳ ಹಾಗೂ ನಾಗರಿಕರ ಸಲಹೆಯನ್ನಾಧರಿಸಿ ಭಾರತದಾದ್ಯಂತ ಮೇ. 3ರವರೆಗೆ ಲಾಕ್‌ಡೌನ್ ವಿಸ್ತರಿಸುತ್ತಿರುವುದಾಗಿ ಘೋಷಿಸಿದ್ದಾರೆ.
ಮೇ. 3ರವರೆಗೆ ಲಾಕ್‌ಡೌನ್‌ನಲ್ಲೇ ಇರಬೇಕೆಂದಿರುವ ಪಿಎಂ ಮೋದಿ 'ಈ ಹಿಂದಿನಂತೆಯೇ ನಿಯಮಗಳನ್ನು ಕಟ್ಟು ನಿಟ್ಟಿನಿಂದ ಪಾಲಿಸಬೇಕು. ಯಾವುದೇ ಕಾರಣಕ್ಕೂ ಹೊಸ ಪ್ರದೇಶಗಳಲ್ಲಿ ಇದು ಹರಡದಂತೆ ನಿಗಾ ವಹಿಸಬೇಕು. ಒಬ್ಬ ಸೋಂಕಿತ ಹೆಚ್ಚದ್ರೂ ಅದು ನಮಗೆ ಚಿಂತೆಯ ವಿಚಾರವಾಗಬೇಕು. ಹಾಟ್ ಸ್ಪಾಟ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಮೊದಲಿಗಿಂತಲೂ ಹೆಚ್ಚು ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ಏ. 20ವರೆಗೆ ಪ್ರತಿ ಏರಿಯಾ, ಗ್ರಾಮ, ಠಾಣೆ, ತಾಲೂಕು, ಜಿಲ್ಲೆಯ ಮೇಲೂ ಗಮನ ಹರಿಸಲಾಗುತ್ತದೆ. ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌ಡೌನ್ ಹೇಗೆ ಪಾಲಿಸಲಾಗುತ್ತದೆ ಎಂಬುವುದನ್ನು ಮೌಲ್ಯ ಮಾಪನ ಮಾಡಲಾಗುತ್ತದೆ. ಯಾವ ಕ್ಷೇತ್ರ ಈ ಅಗ್ನಿ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತದೋ ಅಲ್ಲಿ ಮಟ್ಟದ ರಿಯಾಯಿತಿ ನೀಡಲಾಗುತ್ತದೆ' ಎಂದಿದ್ದಾರೆ.
ಕೊರೋನಾ ವೈರಸ್ ಹಾಟ್ ಸ್ಪಾಟ್ ಆಗಿರುವ ಪ್ರದೇಶದಲ್ಲಿ ಕಟ್ಟು ನಿಟ್ಟಿನ ಕ್ರಮ ಪಾಲಿಸಿ, ನಿಯಂತ್ರಿಸಲು ಯಶಸ್ವಿಯಾದರೆ ಕೆಲ ಸಡಿಲಿಕೆ ನೀಡಲಾಗುತ್ತದೆ ಘೋಷಿಸಲಾಗಿದೆಯಾದರೂ. ಹೊರ ಬರಲು ಸನುಸರಿಸುವ ನಿಯಮ ಕಟ್ಟು ನಿಟ್ಟಾಗಿರುತ್ತದೆ. ಲಾಕ್‌ಡೌನ್ ನಿಯಮ ಉಲ್ಲಂಘಿಸಿದರೆ, ಅಥವಾ ಕೊರೋನಾ ಮತ್ತೆ ಆ ಪ್ರದೇಶಕ್ಕೆ ಕಾಲಿಟ್ಟರೆ ಎಲ್ಲಾ ಅನುಮತಿಯನ್ನೂ ಕೂಡಲೇ ಹಿಂಪಡೆಯಲಾಗುತ್ತದೆ. ಹೀಗಾಗಿ ನೀವು ಜವಾಬ್ದಾರಿಯುತವಾಗಿ ನಡೆಯಿರಿ, ಇತರರಿಗೆ ಬೇಜವಾಬ್ದಾರಿತನ ವಹಿಸದಂತೆ ಎಚ್ಚರಿಸಿ' ಎಂದಿದ್ದಾರೆ.
ಡಿಸ್ಚಾರ್ಜ್ ಆಗಿದ್ದ ಇಬ್ಬರಿಗೆ ಮತ್ತೆ ಕೊರೋನಾ ಸೋಂಕು!
ನಾಳೆ, ಬುಧವಾರ ಎಲ್ಲಾ ರಾಜ್ಯ ಸರ್ಕಾರಗಳು ಲಾಕ್‌ಡೌನ್ ಸಂಬಂಧ ವಿಸ್ಕೃತ ಸೂಚನೆಗಳನ್ನು ಜಾರಿಗೊಳಿಸಲಿವೆ. ಅಲ್ಲದೇ ಏ. 20ರಿಂದ ಸೀಮಿತ ಪ್ರದೇಶಗಳಲ್ಲಿ, ಈ ಸೀಮಿತ ಸಡಿಲಿಕೆ ನಮ್ಮ ಸಮಾಅಜದ ಬಡ ವರ್ಗದ ಜನತೆ ಹಾಗೂ ಕಾರ್ಮಿಕರ ಹಿತ ದೃಷ್ಟಿಯಿಂದ ನೀಡಲಾಗಿದೆ. ದಿನಗೂಲಿ ಕಾರ್ಮಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಹೊಸ ಗೈಡ್‌ಲೈನ್ಸ್ ರೂಪಪಿಸಲಾಗಿದೆ ಎಂದಿರುವ ಪಿಎಂ ಮೋದಿ, ಈ ಮೂಲಕ ಕೃಷಿಕರಿಗೆ ಹಾಗೂ ರೈತರಿಗೆ ಅತ್ಯಂತ ಕಡಿಮೆ ತೊಂದರೆಯಾಗುವಂತೆ ನೋಡಿಕೊಳ್ಳಲಾಗಿದೆ ಎಂದಿದ್ದಾರೆ.
ಔಷಧಿಯಿಂದ ಹಿಡಿದು ಧಾನ್ಯಗಳವರೆಗೆ ಎಲ್ಲವೂ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ರೋಗಿಗಳಿಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. 600ಕ್ಕೂ ಹೆಚ್ಚು ಆಸ್ಪತ್ರೆಗಳು ಚಿಕಿತ್ಸೆ ನಿಡಲು ಸಿದ್ಧವಾಗಿವೆ ಎಂದೂ ಮೋದಿ ತಿಳಿಸಿದ್ದಾರೆ.
ಜನರ ಬಳಿ ಮೋದಿ ಮನವಿಗಳು
* ಮನೆಯಲ್ಲಿರುವ ಹಿರಿಯ ಸದಸ್ಯರ ವಿಶೇಷ ಕಾಳಜಿ ವಹಿಸಿ, ಕೊರೋನಾ ತಗುಲದಂತೆ ಗಮನಹರಿಸಿ.
* ಸಾಮಾಜಿಕ ಅಂತರ ಹಾಗೂ ಲಾಕ್‌ಡೌನ್ ಪಾಲಿಸಿ. ಮನೆಯಲ್ಲಿ ತಯಾರಿಸಿದ ಫೇಸ್ ಕವರ್ ಅಥವಾ ಮಾಸ್ಕ್‌ಗಳನ್ನು ದಯವಿಟ್ಟು ಬಳಸಿ
* ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಆಯುಷ್ ಇಲಾಖೆ ನೀಡಿರುವ ನಿರ್ದೇಶನಗಳನ್ನು ಪಾಲಿಸಿ
* ಕೊರೋನಾ ಸಂಕ್ರಮಣ ಹರಡದಂತೆ ನಿಗಾ ವಹಿಸಲು ಸರ್ಕಾರದಿಂದ ಬಿಡುಗಡೆ ಮಾಡಲಾದ ಆರೋಗ್ಯ ಸೇತು ಮೊಬೈಲ್ ಆಪ್ ಬಳಸಿ
* ಎಷ್ಟು ಸಾಧ್ಯವೋ ಅಷ್ಟು ಬಡ ಕುಟುಂಬಗಳ ಆರೈಕೆ ಮಾಡಿ, ಆಹಾತರ ವ್ಯವಸ್ಥೆ ಮಾಡಿ
* ವ್ಯವಸಾಯ ಹಾಗೂ ಉದ್ಯೋಗದಲ್ಲಿ ನಿಮ್ಮೊಂದಿಗೆ ಕೆಲಸ ಮಾಡುವವರ ಕುರಿತು ಸಂವೇದನಾಶೀಲರಾಗಿ. ಯಾವುದೇ ಕಾರಣಕ್ಕೂ ಅವರನ್ನು ಕೆಲಸದಿಂದ ತೆಗೆದು ಹಾಕಬೇಡಿ
* ದೇಶದ ಕೊರೋನಾ ಯೋಧರಾದ ಡಾಕ್ಟರ್, ನರ್ಸ್, ಪೌರ ಕಾರ್ಮಿಕರು, ಪೊಲೀಸರು ಹಾಗೂ ಇನ್ನಿತರರನ್ನು ಆಧರದಿಂದ ನೋಡ, ಗೌರವಿಸಿ ಎಂದಿದ್ದಾರೆ.
ಅಂತಿಮವಾಗಿ ಸಂಪೂರ್ಣ ನಿಷ್ಟೆಯಿಂದ ಲಾಕ್‌ಡೌನ್ ಹಾಗೂ ಸಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ದೇಶವನ್ನು ರಕ್ಷಿಸಿ ಎಂದಿದ್ದಾರೆ.