Asianet Suvarna News Asianet Suvarna News

ದೆಹಲಿಯಲ್ಲಿ ಪರಿಸ್ಥಿತಿ ಗಂಭೀರ, ರಾಷ್ಟ್ರ ರಾಜಧಾನಿ ಮತ್ತೆ ಲಾಕ್‌ಡೌನ್?

ದೆಹಲಿಯಲ್ಲಿ ಮತ್ತೊಮ್ಮೆ ಲಾಕ್ ಡೌನ್ ಆಗುತ್ತಾ?| ಈ ಬಗ್ಗೆ ಗಂಭೀರ ಚಿಂತನೆ ನಡೆಸಿದೆಯಂತೆ ಕೇಜ್ರಿವಾಲ್ ಸರ್ಕಾರ?| ದಿನಕ್ಕೆ ಒಂದು ಸಾವಿರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳದ ಹಿನ್ನಲೆ

Coronavirus cases are increasing day by day Kejriwal may again announce complete lockdown in  delhi
Author
Bangalore, First Published Jun 11, 2020, 11:33 AM IST | Last Updated Jun 11, 2020, 1:16 PM IST

ನವದೆಹಲಿ(ಜೂ.11): ದೇಶಾದ್ಯಂತ ಕೊರೋನಾ ವೈರಸ್ ಅಟ್ಟಹಾಸ ಮಿತಿ ಮೀರಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಆಭರೀ ಏರಿಕೆಯಾಗಿದೆ. ಅಗತ್ಯ ಕ್ರಮ ಕೈಗೊಂಡರೂ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಿರುವಾಗ ಇಲ್ಲಿ ಮತ್ತೆ ಸಂಪೂರ್ಣ ಲಾಕ್‌ಡೌನ್ ಹೇರುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿವೆ.

ಜುಲೈ ಅಂತ್ಯದೊಳಗೆ ರಾಷ್ಟ್ರ ರಾಜಧಾನಿಗೆ ಮತ್ತೊಂದು ಶಾಕ್!

ಹೌದು ಕೊರೋನಾ ಸಂಖ್ಯೆ ಏರಿಕೆ ನಡುವೆ ದೆಹಲಿಯಲ್ಲಿ ಜುಲೈ ಅಂತ್ಯದೊಳಗೆ ಸೋಂಕಿತರ ಸಂಖ್ಯೆ 5 ಲಕ್ಕಕ್ಕೇರಲಿದೆ ಎಂದು ಅಂದಾಜಿಸಲಾಗಿದ್ದು, ಈ ಮಾಹಿತಿಯನ್ನು ಸಿಎಂ ಕೇಜ್ರೀವಾಲ್ ಖುದ್ದು ಬಹಿರಂಗಪಡಿಸಿದ್ದರು. ಒಂದು ದಿನನಕ್ಕೆ ಒಂದು ಸಾವಿರಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿದ್ದು, ಇದು ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಲಾಕ್‌ಡೌನ್ ಸಡಿಲಿಕೆ ಬಳಿಕ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ಮತ್ತೆ ದೆಹಲಿಯಲ್ಲಿ ಲಾಕ್‌ಡೌನ್ ಹೇರುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. 
    
ಲಾಕ್ ಡೌನ್ ಮತ್ತೆ ಏರಬೇಕಾದ ಅನಿವಾರ್ಯ ಸ್ಥಿತಿ ದೆಹಲಿ ಸರ್ಕಾರದೆದುರು ಬಂದಿದೆ. ಸಮುದಾಯ ಹರಡುವಿಕೆಯೂ ಆರಂಭವಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರಜೈನ್ ಕೂಡಾ ಹೇಳಿದ್ದಾರೆ. ಅಲ್ಲದೇ ಇದೊಂದು ತಾಂತ್ರಿಕ ಪದ ಅಷ್ಟೆ. ಸಮುದಾಯ ಹರಡುವಿಕೆ ಬಗ್ಗೆ ಕೇಂದ್ರ ಘೋಷಣೆ ಮಾಡಬೇಕು ಎಂದೂ ತಿಳಿಸಿದ್ದಾರೆ. 

ಹಳ್ಳಿಗರಿಗೆ ರೋಗ ನಿರೋಧಕ ಶಕ್ತಿ ಜಾಸ್ತಿ ಯಾಕೆ? ಗುಟ್ಟು ಬಿಚ್ಚಿಟ್ಟ ಉದಾಸಿ

ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೊರೋನಾ ನಿಯಂತ್ರಿಸಲು ಸಂಪೂರ್ಣ ಲಾಕ್‌ಡೌನ್ ಒಂದೇ ಆಪ್ ಸರ್ಕಾರದೆದುರು ಇರುವ ಮಾರ್ಗವಾಗಿದೆ. ಈ ಬಗ್ಗೆ ಚರ್ಚೆ ಆರಂಭವಾಗಿದ್ದು, ಮತ್ತೆ ರಾಷ್ಟ್ರ ರಾಜಧಾನಿ ಸಂಪೂರ್ಣವಾಗಿ ಸ್ತಬ್ಧಗೊಳ್ಳುವ ಎಲ್ಲಾ ಲಕ್ಷಣಗಳಿವೆ.

News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್‌

"

Latest Videos
Follow Us:
Download App:
  • android
  • ios