ಡೆಲ್ಲಿ ಮಂಜು
ಕೊರೋನಾ ವೈರಸ್, ಲಾಕ್ ಡೌನ್ ಈ ವಿಚಾರದ ಬಗ್ಗೆ ಸಂಸದ ಶಿವಕುಮಾರ್ ಉದಾಸಿ ಅನೇಕ ವಿಚಾರ ಹಂಚಿಕೊಂಡಿದ್ದಾರೆ. ನಾವು ಇನ್ನು ಮುಂದೆ ಹೇಗೆ ಬದುಕಬೇಕು ಎಂಬುದನ್ನು ಹೇಳಿದ್ದಾರೆ.

ಕೊರೊನಾ ನಿಮಗೆ ವೈಯಕ್ತವಾಗಿ ಕಲಿಸಿದ ಪಾಠ ಏನು?
ಹೆಲ್ತ್ ಕಾನ್ಶಿಯಸ್‌ನೆಸ್‌ ಬಗ್ಗೆ ಪಾಠ ಕಲಿಸಿತ್ತು. ಜೋರಾಗಿ ಕೆಮ್ಮ ಬೇಕಾದ್ರೆ, ಸೀನ ಬೇಕಾದ್ರೆ ಕರವಸ್ತ್ರ ಅಡ್ಡ ಹಿಡಿಯಬೇಕು ಅನ್ನೋದು ನನ್ನ ಸೇರಿದಂತೆ ಎಲ್ಲರಿಗೂ ಗೊತ್ತು. ಆದ್ರೆ ಮಾಡ್ತಾ ಇರಲಿಲ್ಲ. ಕೈ ಅಡ್ಡ ಹಿಡಿದ್ರೆ ಪುನಃ ಹೋಗಿ ಸ್ಯಾನಿಟೈಸ್ ಮಾಡಬೇಕು ಅಥವಾ ಸಾಬೂನು ಹಚ್ಚಿ ಕೈ ತೋಳಿಯಬೇಕು ಅನ್ನೋದೂ ಗೊತ್ತಿದೆ. ಆದ್ರೆ ನಾವು ಮಾಡ್ತಾ ಇರಲಿಲ್ಲ. ಇವೆಲ್ಲಾ ಗೊತ್ತಿದ್ರೂ ಕೊರೊನಾ ಪುನಃ ಕಲಿಸ್ತು. ಈಗ ಮಾಸ್ಕ್ ಹಾಕೋದು ಬಂತು. ಮೊದಲು ಪಕ್ಕದಲ್ಲಿ ಯಾರಿದ್ದಾರೆ ಅನ್ನೋದು ನೋಡದೆ ಕೆಮ್ಮಿ ಬಿಡ್ತಾ ಇದ್ವಿ. ಈಗ ಪಕ್ಕಾ ಗೊತ್ತಾಯ್ತು ಇನ್ನು ಮುಂದೆ ಮಾಡಬಾರದು ಅಂಥ. ಇದು ನನ್ನ ಉದಾಹರಣೆಗಳೇ. 

ಮೋದಿ ಆಶಯದಂತೆ ಹಾವೇರಿ-ಗದಗ ಅಭಿವೃದ್ಧಿ; ಉದಾಸಿ

ಲಾಕ್ ಡೌನ್ ಸಮಯವನ್ನು ನೀವು ಹೇಗೆ ಕಳದ್ರಿ?
ಪುಸ್ತಕ ಓದುವುದು ನನ್ನ ಬಹಳ ದೊಡ್ಡ ಹವ್ಯಾಸ. ನಾನು ಸದಾ ಪುಸ್ತಕ ಪ್ರೇಮಿ. ಇತ್ತೀಚೆಗೆ ಓದುವ ಪುಸ್ತಕಗಳ  ಬ್ಯಾಕ್ ಲಾಗ್ ಜಾಸ್ತಿಯಾಗಿತ್ತು. ಆರೇಳು ತಿಂಗಳಿಂದ ನನ್ನ ಮನೆಯವರಿಗೂ ಹೇಳ್ತಾ ಇದ್ದೆ. ಪುಸ್ತಕ ಓದಲು ಸಮಯ ಸಿಗ್ತಾ ಇರಲಿಲ್ಲ ಅಂಥ. 

ನನ್ನ ಓದಿಗೆ ಲಾಕ್ ಡೌನ್ ಒಳ್ಳೆಯ ವೇದಿಕೆಯಾಯ್ತು. ಎಂಥಾ ಬಿಜಿ ಷಡ್ಯೂಲ್ ಇರಲಿ ಓದೋ ಹವ್ಯಾಸ ಇಡ್ಕೊಂಡಿದ್ದಿನಿ. ಕೆಲವು ದಿನ 10 ರಿಂದ 12 ಗಂಟೆ ಓದಿನಲ್ಲೇ ಕಳೆದಿದ್ದೇನೆ. ಈಸ್ಟ್ ಇಂಡಿಯಾ ಕಂಪನಿಗೆ ಸಂಬಂಧಪಟ್ಟ ಮೂರು ಪುಸ್ತಕ ಡಿಟೈಲ್ ಆಗಿ ಓದಿದೆ. 

ಹಣಕಾಸು, ಇತಿಹಾಸ, ಪ್ರಚಲಿತ ವಿದ್ಯಮಾನ, ಆಟೋಬಯೋಗ್ರಾಫಿಗಳು, ಅರ್ಥಶಾಸ್ತ್ರದ ಪುಸ್ತಕಗಳ ಬಗ್ಗೆ ನನಗೆ ಒಲವು ಜಾಸ್ತಿ. ಓದಲಿಕ್ಕೆ ಸಹ ಸಮಯ ಜಾಸ್ತಿ ಸಿಕ್ತು.

ನವದೆಹಲಿಗೆ ಮತ್ತೊಂದು ದೊಡ್ಡ ಸಂಕಷ್ಟ ಬಂತು

ಮನೆಯವರ ಜೊತೆ ಹೇಗೆ ಕಳದ್ರಿ?
ಮೊದಲ ಲಾಕ್ಡೌನ್ ಅವಧಿ ಕಳೆದು ಏಪ್ರಿಲ್ 22ಕ್ಕೆ ನಾನು ಬೆಂಗಳೂರು ತಲುಪಿದೆ. ಆದಾದ ಬಳಿಕ ಹೆಚ್ಚು ಕಡಿಮೆ 25 ದಿನ ಕ್ಷೇತ್ರದಲ್ಲೇ ಇದ್ದೇನೆ.  ಉಳಿದಂತೆ ಮಕ್ಕಳಿಬ್ಬರಿಗೆ ಆನ್ ಲೈನ್ ಎಕ್ಸಾಂ. ಈ ಕೋವಿಡ್‌ನಿಂದ ನಮ್ ಮನೆ ಹೌಸ್ ಫುಲ್ ಆಗಿತ್ತು. ಎಲ್ಲರೂ ಒಟ್ಟಿಗೆ ಸೇರಿದ್ವಿ.

ಇಂಥ ಸಮಸ್ಯೆಗಳ ಬಗ್ಗೆ ನಾವು ಇನ್ನೂ ಹೆಚ್ಚು ಕೆಲಸ ಮಾಡಬೇಕಿದೆ ಅಂಥ ಅನ್ನಿಸಿದ 2 ಸಮಸ್ಯೆಗಳು ಯಾವುವು?
ಮೊದಲನೆಯದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಹಲವು ಬಾರಿ ಕ್ಷೇತ್ರದಲ್ಲಿ ನನಗೂ ಕಾಯ್ದುಕೊಳ್ಳಲು ಆಗಲೇ ಇಲ್ಲ. ಇಲ್ಲಿ ಕಟ್ ಅಂಡ್ ಕ್ಲಿಯರ್ ಗೊತ್ತಾಗಿದ್ದು, ಮಾತು ಮತ್ತು ಕೃತಿ ಎರಡು ಒಂದೇ ಆಗಬೇಕು. ಹಲವು ಬಾರಿ ಮಧ್ಯಮಗಳು ತೋರಿಸಿದ್ರು, ನಾವೂ ಹೇಳಿದ್ರು ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳದು ಜನರೊಟ್ಟಿಗೆ ಆಗೋದಿಲ್ಲ. ಹಾಗಾಗಿ ನಾವೇ ಅಥವಾ ನಾನೇ ನಿಯಂತ್ರಣ ಹಾಕೋಬೇಕಾಗಿದೆ. ಈ ಶಿಸ್ತನ್ನು ಕಾಯ್ದುಕೊಳ್ಳುವ ಪರಿಪಾಠ ಬೆಳೆಯಬೇಕು. ಯಾರ ಭೇಟಿಗಾದ್ರು ಹೋದರೆ ಮೊದಲು ಕೈ ಕುಲುಕುತ್ತಿದ್ವಿ. ಈಗ ಕೈ ಮುಗಿಯುತ್ತೆವೆ. ಇದರ ಬಗ್ಗೆ ಇನ್ನೂ ಆಸಕ್ತಿ ಎಲ್ಲರಲ್ಲೂ ಹೆಚ್ಚಬೇಕು.

ಎರಡನೇದು ಸರ್ಕಾರ ಕಾಯ್ದೆ ಮಾಡಬಹುದು, ಹೇಳಬಹುದು. ಆದ್ರೆ ಪಾಲಿಸುವವರು ಜನರು. ಜನರು ಮನಸ್ಸು ಮಾಡಿದ್ರೆ ಯಶಸ್ಸು ಸಿಗುತ್ತೆ. ಜಪಾನ್ ನಲ್ಲಿ ಇರುವಂತೆ ಕೈ ಮುಗಿಯುವುದು, ಕೈ ಸ್ಯಾನಿಟೇಜಷನ್ ಮಾಡಿಕೊಳ್ಳುವುದು ಇಲ್ಲಿಯೂ ಕೂಡ ಇದೊಂದು ಜೀವನದ ಕ್ರಮ ಆಗಬೇಕು. 

ಲಾಕ್ ಡೌನ್ ಹೊತ್ತಲ್ಲೂ ಸಾರ್ವಜನಿಕ ರಿಂದ ಬಂದ ವಿಶೇಷ ಕರೆಗಳು?
ಲಾಕ್ ಡೌನ್ ಶುರುವಾಗಿ ಒಂದೆರಡು ವಾರ ಆಗಿತ್ತು. ಕ್ಷೇತ್ರದ ಹಳ್ಳಿಯೊಂದರಿಂದ ಸಮುದಾಯ ಭವನ ಬೇಕು ಅಂತಾ ಹೇಳಿದ್ರು. ಅಯ್ಯೋ ಮಾರಾಯರೆ ಈಗ ಸಮುದಾಯ ಉಳಿಸೋದೆ ದೊಡ್ಡ ಕೆಲಸ ಅಂದೆ

ಆಗ ಅವರು ಹೇಳಿದ್ರು ಅಣ್ಣಾ ಅವರೇ, ನಾವು ಹಳ್ಳಿ ಮಂದಿ. ನಮಗೆ ಹಸು,ಎಮ್ಮೆ ಇವೆ. ಬೆಣ್ಣೆ, ತುಪ್ಪ ತಿಂದು ಚೆನ್ನಾಗಿದ್ದೇವೆ. ಕೊರೋನಾ ನಮಗೆ ಏನು ಮಾಡಲ್ಲ ಅಂದ್ರು. ಬಹುಶ: ಅವರು ಹೇಳಿದ್ದು ಸರಿ ಎನ್ನಿಸ್ತು. ಸ್ವಾಭಾವಿಕವಾಗಿ ಅವರಿಗೆ ರೋಗ ನಿರೋಧಕ ಜಾಸ್ತಿ ಇರುತ್ತೆ ಅಂಥ.