ಭಾರತದಲ್ಲಿ ಕೆಲವರಿಗೆ ಒಂದು ಅಭ್ಯಾಸ ಇದೆ ಫ್ರಿ ಅಂದ್ರೆ ಸಾಕು, ಮುಗಿ ಬೀಳುವುದು. ಯಾರೂ ಇಲ್ಲ ಅಂದ್ರೆ ಎಗರಿಸುವುದು. ಯಾಕೆಂದರೆ ಇವರೆಡಕ್ಕೂ ಕಾಸು ಕೊಡಬೇಕಿಲ್ಲ. ದುಡ್ಡು ತೆಗೆಯಲು ಹೋಗಿ, ದುಡ್ಡಿನ ಜೊತೆ ಸ್ಯಾನಿಟೈಸರ್ ಕದ್ದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.

ಬೆಂಗಳೂರು(ಮೇ.01): ಕೊರೋನಾ ವೈರಸ್ ಕಾರಣ ಎಲ್ಲೋ ಹೋದರೂ ಸ್ಯಾನಿಟೈಸರ್ ಇದ್ದೇ ಇರುತ್ತೆ. ಈ ಮೂಲಕ ಕೊರೋನಾ ವೈರಸ್ ಹರಡದಂತೆ ತಡೆಯಲು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಸಾರ್ವಜನಿಕರಿಗೆ ಸಮಸ್ಯೆಯಾಗಬಾರದು ಎಂದು ಇಟ್ಟಿದ್ದ ಸ್ಯಾನಿಟೈಸರನ್ನೇ ಎಗರಿಸಿದ್ದಾರೆ ಅಂದರೆ ಇದಕ್ಕೇನು ಹೇಳುವುದು? ಘಟನೆ ವಿಡಿಯೋ ವೈರಲ್ ಆಗಿದೆ.

ತ್ರಿಬಲ್ ರೈಡಿಂಗ್ ಟ್ರೋಲ್ ಮಾಡಿದ ಪೊಲೀಸರು: ವಿಡಿಯೋ ವೈರಲ್

ಕೊರೋನಾ ಕಷ್ಟಕಾಲದಲ್ಲಿ ಎಟಿಂಗೆ ತೆರಳಿದ ವ್ಯಕ್ತಿ ಹಣ ತೆಗೆಯುವ ಮೊದಲ ಅಲ್ಲಿದ್ದ ಸ್ಯಾನಿಟೈಸರ್ ಮೂಲಕ ಕೈಗಳನ್ನು ಶುಚಿಗೊಳಿಸಿದ್ದಾನೆ. ಈ ಮೂಲಕ ತಾನೊಬ್ಬ ಕೊರೋನಾ ವೈರಸ್ ಕುರಿತು ಎಚ್ಚರಿಕೆಯಿಂದ ಹಾಗೂ ಮುಂಜಾಗ್ರತೆ ವಹಿಸೋ ವ್ಯಕ್ತಿ ಅನ್ನೋ ಇಮೇಜ್ ಕ್ರಿಯೆಟ್ ಮಾಡಿದ್ದಾನೆ. ಬಳಿಕ ಎಟಿಂನಿಂದ ಹಣ ತೆಗೆದು, ಪರ್ಸ್‌ನೊಳಗೆ ಇಟ್ಟಿದ್ದಾನೆ.

Scroll to load tweet…

ಬಿಗ್‌ಬಾಸ್ ವಿನ್ನರ್ ಸಿದ್ಧಾರ್ಥ್ ಹಾಟ್ ಲಿಪ್‌ಲಾಕ್ ವೈರಲ್

ಹಣ ಪಡೆದ ಬಳಿಕ ಪಕ್ಕದಲ್ಲಿದ್ದ ಸ್ಯಾನಿಟೈಸರ್ ಬಾಟಲ್ ಎಗರಿಸಿ ತನ್ನ ಬ್ಯಾಗಿನೊಳಗೆ ಹಾಕಿದ್ದಾನೆ. ಬಳಿಕ ಏನೂ ಆಗಿಲ್ಲ ಎಂಬಂತೆ ಹೊರನಡೆದಿದ್ದಾರೆ. ಈತನ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರಿಗೆ ಉಪಯೋಗವಾಗಲಿ, ಸಮಸ್ಯೆ ಆಗದಿರಲಿ ಎಂದು ಬ್ಯಾಂಕ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಿತ್ತು. ಆದರೆ ಸ್ಯಾನಿಟೈಸರ್ ಕದ್ದು ಇತರರಿಗೆ ಸಂಕಷ್ಟ ತಂದಿರುವ ಈತನಿಗೆ ಶಿಕ್ಷೆಯಾಗಲಿ ಎಂದು ಹಲವರು ಆಗ್ರಹಿಸಿದ್ದಾರೆ.

ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಹಂಚಿಕೊಂಡಿದ್ದಾರೆ. ಈ ವ್ಯಕ್ತಿ ಯಾರು, ಎಲ್ಲಿ ನಡೆದಿದೆ ಅನ್ನೋ ಮಾಹಿತಿಗಳು ಬಹಿರಂಗವಾಗಿಲ್ಲ.