500 ರೂ. ಕೊಟ್ಟು ನೋಂದಣಿ ಮಾಡಿಸಿಕೊಲ್ಳಬೇಕಂತೆ, ಫೋನ್ ಮಾಡಿ ಸುಲಿಗೆ, ಮಧ್ಯ ಪ್ರದೇಶದಲ್ಲಿ ಮೊದಲ ಪ್ರಕರಣ ದಾಖಲು.
ಭೋಪಾಲ್(ಡಿ.26): ದೇಶದಲ್ಲಿ ಕೊರೋನಾ ವೈರಸ್ ಲಸಿಕೆ ಅಭಿಯಾನಕ್ಕೆ ಕ್ಷಣಗಣನೆ ಆರಂಭವಾಗಿರುವಾಗಿರುವಾಗಲೇ, ಮಧ್ಯಪ್ರದೇಶದಲ್ಲಿ ಕೊರೋನಾ ಲಸಿಕೆಗೆ ಸಂಬಂಧಿಸಿದ ದಂಧೆಯೊಂದು ಸದ್ದಿಲ್ಲದೆ ಹಬ್ಬುತ್ತಿದೆ.
ಮೊದಲ ಹಂತದಲ್ಲೇ ಕೊರೋನಾ ಲಸಿಕೆ ಪಡೆಯಲು 500 ರು. ಪಾವತಿಸಿ ನೋಂದಣಿ ಮಾಡಿಕೊಳ್ಳಿ ಎಂಬ ಕರೆಗಳು ಬರುತ್ತಿವೆ. ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಮಧ್ಯಪ್ರದೇಶದ ಪೊಲೀಸ್ ಇಲಾಖೆಯ ಸೈಬರ್ ಘಟಕ ಸಲಹೆ ನೀಡಿದೆ. ಇಂಥ ವಂಚನೆ ಕುರಿತಾಗಿ ಭೋಪಾಲ್‌ನಲ್ಲಿ ಮೊದಲ ಕೇಸ್ ದಾಖಲಾಗಿದೆ.
ಗ್ರಾಪಂ 2ನೇ ಹಂತದ ಸಮರ: ಇಂದು ಮನೆಮನೆ ಪ್ರಚಾರ ಕಸರತ್ತು
ಜನರಿಗೆ ಕರೆ ಮಾಡುವ ದಂಧೆಕೋರರು ತಮ್ಮನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಎಂದು ಪರಿಚಯಿಸಿಕೊಳ್ಳುತ್ತಾರೆ. ಆ ನಂತರ ಮೊದಲ ಹಂತದಲ್ಲಿ ಲಸಿಕೆ ಪಡೆದು ಕೊರೋನಾದಿಂದ ಪಾರಾಗಲು ಆ್ಯಪ್ ಡೌನ್‌ಲೋಡ್ ಅಥವಾ ಒಟಿಪಿ ಮೂಲಕ ನೋಂದಾಯಿಸಿಕೊಳ್ಳಿ ಎಂದು ಜನರಿಗೆ ಪುಸಲಾಯಿಸುತ್ತಾರೆ.
ಹರಾರಯಣ, ಹೈದರಾಬಾದ್ ಮತ್ತು ತೆಲಂಗಾಣ ಸೇರಿದಂತೆ ಇನ್ನಿತರ ಕಡೆಗಳಿಂದಲೂ ಈ ದಂಧೆಕೋರರು ಜನರಿಗೆ ಲಸಿಕೆ ಆಮಿಷವೊಡ್ಡಿ, ವಂಚನೆ ಎಸಗುತ್ತಿದ್ದಾರೆ. ಹೀಗಾಗಿ ಇಂಥ ಬಣ್ಣದ ಮಾತುಗಳಿಗೆ ಮರಳಾಗಿ ಮೋಸದ ಜಾಲಕ್ಕೆ ಸಿಲುಕದಿರಿ ಎಂದು ಪೊಲೀಸ್ ಅಧಿಕಾರಿ ಕೋರಿಕೊಂಡಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 26, 2020, 10:53 AM IST