ಕೊರೋನಾ ವೈರಸ್ ಪ್ರಕರಣ ಸಂಖ್ಯೆ ಇಳಿಕೆ ಪಾಸಿಟಿವಿಟಿ ರೇಟ್ ಗಣನೀಯ ಇಳಿಕೆ ಕಾರಣ ಅಲ್‌ಲಾಕ್ ಬಸ್ ಸೇವೆ ಆರಂಭಿಸಿದ ಬಿಇಎಸ್‌ಟಿ  

ಮುಂಬೈ(ಜೂ.06): ಕೊರೋನಾ ವೈರಸ್ 2ನೇ ಅಲೆ ನಿಯಂತ್ರಿಸುವಲ್ಲಿ ಮಹರಾಷ್ಟ್ರ ಸರ್ಕಾರ ಯಶಸ್ವಿಯಾಗಿದೆ. ಮುಂಬೈ ಮಹಾನಗರದಲ್ಲೂ ಕೊರೋನಾ ಪ್ರಕರಣ ಇಳಿಕೆಯಾಗಿದೆ. ಹೀಗಾಗಿ 5 ಹಂತದಲ್ಲಿ ಅನ್‌ಲಾಕ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದರ ಪರಿಣಾಣಮ ಸೋಮವಾರದಿಂದ(ಜೂ.07) ಮುಂಬೈನಲ್ಲಿ ಬಸ್ ಸೇವೆ ಆರಂಭಗೊಳ್ಳುತ್ತಿದೆ.

ಕೊರೋನಾ ಗೆದ್ದ ಧಾರಾವಿ, ಸೀಕ್ರೆಟ್‌ ರಿವೀಲ್!

ಮುಂಬೈನಲ್ಲಿ ಕಳೆದ 24 ಗಂಟೆಯಲ್ಲಿ 866 ಹೊಸ ಪ್ರಕರಣ ದಾಖಲಾಗಿದೆ. ಕೊರೋನಾ ಸಂಖ್ಯೆ ಇಳಿಕೆ ಕಾರಣ ಸರ್ಕಾರ ಅನ್‌ಲಾಕ್ ಪ್ರಕ್ರಿಯೆ ಆರಂಭಿಸಿದೆ. ಸೋಮವಾರದಿಂದ ನಿಯಮಿತ ಬಸ್ ಸೇವೆ ಆರಂಭಗೊಳ್ಳುತ್ತಿದೆ ಎಂದು ಮುಂಬೈ ಬಿಇಎಸ್‌ಟಿ ಹೇಳಿದೆ.

ಬಸ್‌ನಲ್ಲಿನ ಸೀಟಿಗಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವಂತಿಲ್ಲ. ಎಲ್ಲರೂ ಮಾಸ್ಕ್ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯಾವಾಗಿದೆ ಎಂದು ಬಿಇಎಸ್‌ಟಿ ಹೇಳಿದೆ.

ದೆಹಲಿ, ಮುಂಬೈನಲ್ಲಿ ಸೋಂಕು ಭಾರೀ ಇಳಿಕೆ!

ಮುಂಬೈನಲ್ಲಿ ಮತ್ತಷ್ಟು ಕಠಿಣ ನಿಯಮಗಳು ಅಗತ್ಯ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇತರ ರಾಜ್ಯಗಳಲ್ಲಿ ಕೊರೋನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಏಕಾಏಕಿ ಮುಂಬೈನಲ್ಲಿ ಅನ್‌ಲಾಕ್ ಸೂಕ್ತವಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.