ವಿರೋಧದ ನಡುವೆ ಆನ್‌ಲೈನ್ ಬುಕಿಂಗ್, ಮನೆಬಾಗಿಲಿಗೆ ಮದ್ಯ ಸೇವೆ ಆರಂಭ!
- ತುರ್ತು ಅಗತ್ಯಗಳ ಪಟ್ಟಿಯಲ್ಲಿ ಮದ್ಯವೂ ಇರ್ತದೆ
- ಅಂಗಡಿ ತೆರೆದರೆ ಒಂದು ಕಷ್ಟ, ಮುಚ್ಚಿದರೆ ಇನ್ನೊಂದು ಕಷ್ಟ
- ಸೋ, ಮನೆ ಬಾಗಿಲಿಗೇ ಮದ್ಯ ಪಾರ್ಸಲ್ ಬಂದಿದೆ, ತಗೋಳಿ!
ಚತ್ತೀಸಘಡ(ಮೇ.09): ಕೊರೋನಾ ವೈರಸ್ ದೇಶದ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ವೈದ್ಯಕೀಯ ಕ್ಷೇತ್ರ ಅತ್ಯಂತ ಸವಾಲು ಎದುರಿಸುತ್ತಿದೆ. ಇತ್ತ ಕೊರೋನಾ ನಿಯಂತ್ರಣಕ್ಕೆ ಚತ್ತೀಸಘಡದಲ್ಲಿ ಕಠಿಣ ನಿಯಮ ಜಾರಿಗೆ ತಂದಿದೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ಇದರ ನಡುವೆ ಚತ್ತೀಸಘಡ ಸರ್ಕಾರ ಮದ್ಯ ಮಾರಾಟಕ್ಕೆ ಆನ್‌ಲೈನ್ ಬುಕಿಂಗ್ ಹಾಗೂ ಹೋಮ್ ಡೆಲಿವರಿಗೆ ಅವಕಾಶ ನೀಡಿದೆ.
ಅರೆ ಇಸ್ಕಿ..ವಿಸ್ಕಿ ತಗೊಳ್ಳೋದು ಕೋವಿಡ್ ವ್ಯಾಕ್ಸಿನ್ ಇಮ್ಯುನಿಟಿಗೆ ನಾಟ್ ರಿಸ್ಕಿ!...
ಚತ್ತೀಸಘಟದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಾಗಿ ಮದ್ಯದ ಅಂಗಡಿಗಳು ಮುಚ್ಚಲಾಗಿದೆ. ಪರಿಣಾಮ ಕಳ್ಳ ಭಟ್ಟಿ, ಅಕ್ರಮವಾಗಿ ಮದ್ಯ ಸಾಗಾಣೆ, ಮಾರಾಟ ಹೆಚ್ಚಾಗುತ್ತಿದೆ. ಈ ಕುರಿತು ಕಳೆದ 24 ಗಂಟೆಯಲ್ಲಿ ಗರಿಷ್ಠ ಪ್ರಕರಣ ದಾಖಲಾಗಿದೆ. ಹೀಗಾಗಿ ಚತ್ತೀಸಘಡ ಸರ್ಕಾರ ಮೇ.10 ರಿಂದ ಆನ್‌ಲೈನ್ ಲಿಕ್ಕರ್ ಶಾಪಿಂಗ್ ಆರಂಭಗೊಳ್ಳಲಿದೆ.
ಬೆಳಗ್ಗೆ 9ರಿಂದ ರಾತ್ರಿ 8ರ ವರೆಗೆ ಡೆಲಿವರಿ:
ಹೋಮ್ ಡೆಲಿವರಿಗೆ ಸರ್ಕಾರ ಸಮಯ ನಿಗದಿ ಮಾಡಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಹೋಮ್ ಡೆಲಿವರಿಗೆ ಅವಕಾಶವಿದೆ. ಸ್ಥಳೀಯ ಜಿಲ್ಲಾಡಳಿತ ಈ ಸಮಯವನ್ನು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳಬಹುದು ಎಂದು ಚತ್ತೀಸಘಡ ಸರ್ಕಾರ ಆದೇಶ ನೀಡಿದೆ.
ಬೆಡ್ ಖಾಲಿಯಾಗ್ಬೇಕಂದ್ರೆ ಎಣ್ಣೆ ಅಂಗಡಿ ಓಪನ್ ಆಗ್ಬೇಕು ಅಂದ ಖಿಲಾಡಿ ಮಹಿಳೆ..!.
ಆನ್‌ಲೈಕ್ ಲಿಕ್ಕರ್ ಶಾಂಪಿಂಗ್ ಕುರಿತು ಚತ್ತೀಸಘಡ ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್ (CSMCL) ಶೀಘ್ರದಲ್ಲಿ ಪ್ರಕಣೆ ಹೊರಡಿಸಲಿದೆ. ಯಾವ ವೈನ್ ಶಾಪ್ ಹೋಮ್ ಡೆಲಿವರಿ ಮಾಡಬೇಕು ಅನ್ನೋದನ್ನು CSMCL ನಿರ್ಧರಿಸಲಿದೆ. ಕ್ಯಾಶ್ ಆನ್ ಡೆಲಿವರಿ ಸೇವೆ ಇರುವುದಿಲ್ಲ. ಮುಂಚಿತವಾಗಿ ಪಾವತಿಸಿದರೆ ಮಾತ್ರ ಡೆಲಿವರಿ ಸಿಗಲಿದೆ.
ಗರಿಷ್ಠ 5 ಲೀಟರ್ ಮದ್ಯ ಬುಕಿಂಗ್ ಅವಕಾಶ:
ಪ್ರತಿ ವ್ಯಕ್ತಿಗೆ 24ಗಂಟೆಯಲ್ಲಿ ಗರಿಷ್ಠ 5 ಲೀಟರ್ ಮದ್ಯ ಬುಕ್ ಮಾಡಬಹುದು. ಹೋಮ್ ಡೆಲಿವರಿಗೆ 100 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ಆದರೆ 15 ಕೀ.ಮೀಗಿಂತ ದೂರವಿದ್ದರೆ ಹೆಚ್ಚುವರಿ ಶುಲ್ಕ ತೆರಬೇಕಾಗುತ್ತದೆ.
ಕರ್ನಾಟಕದಲ್ಲಿ ರಾತ್ರಿವರೆಗೂ ಮದ್ಯ ಮಾರಲು ಸಿಗಲಿದೆಯಾ ಅವಕಾಶ ?...
ಸರ್ಕಾರದ ನಿರ್ಧಾರಕ್ಕೆ ಭಾರಿ ವಿರೋಧ:
ಚತ್ತೀಸಘಡ ಸರ್ಕಾರದ ಈ ನಿರ್ಧಾರಕ್ಕೆ ಬಾರಿ ವಿರೋಧ ವ್ಯಕ್ತವಾಗಿದೆ. ಚತ್ತೀಸಘಡ ಬಿಜೆಪಿ, ಜನತಾ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ವೈದ್ಯಕೀಯ ಸಲಕರಣೆ ಸೇರಿದಂತೆ ರಾಜ್ಯದಲ್ಲಿ ಅಭಾವವಿರುವ ತುರ್ತು ಅಗತ್ಯತೆ ಕುರಿತು ಸರ್ಕಾರ ಗಮನಹರಿಸಬೇಕು. ಕೊರೋನಾ ವೈರಸ್ ನಿಯಂತ್ರಿಸಲು ಕ್ರಮ ಕೈಗೊಳ್ಳುವದನ್ನು ಬಿಟ್ಟು, ಸರ್ಕಾರ ಜೇಬು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ.
ಕುಡುಕರ ಸಂಭ್ರಮ ಡಬಲ್:
ಮದ್ಯ ಮರಾಟ ಬಂದ್ ಮಾಡಿರುವ ಕಾರಣ ಕುಡುಕರು ಅಕ್ರಮ ಮದ್ಯ ಮಾರಾಟ, ಅಕ್ರಮ ಸಾಗಾಣೆಗಳ ಮೊರೆ ಹೋಗಿದ್ದರು. ಇದೀಗ ಸರ್ಕಾರ ಆನ್‌ಲೈನ್ ಬುಕಿಂಗ್ ಹಾಗೂ ಹೋಮ್ ಡೆಲಿವರಿಗೆ ಗ್ರೀನ್ ಸಿಗ್ನಲ್ ನೀಡಿದ್ದೆ ತಡ ಕುಡುಕರಲ್ಲಿ ಸಂತಸ ಮನೆ ಮಾಡಿದೆ.