Asianet Suvarna News Asianet Suvarna News

OTTಗಳಲ್ಲಿ ಪ್ರಸಾರವಾಗುತ್ತಿರುವ ವಿಷಯಗಳು ದೇಶಕ್ಕೆ ಮಾರಕ : ಮೋಹನ್‌ ಭಾಗವತ್‌

-ಮಕ್ಕಳು ಮೊಬೈಲ್‌ನಲ್ಲಿ ಏನನ್ನು ವೀಕ್ಷಿಸುತ್ತಿದ್ದಾರೆ ಎಂಬುದು ನಿಯಂತ್ರಣದಲ್ಲಿಲ್ಲ
-ಭಾರತದಲ್ಲಿ ಮಾದಕ ಸೇವನೆಯ ಪ್ರಕರಣಗಳು ಹೆಚ್ಚಾಗುತ್ತಿವೆ
-ಸರ್ಕಾರ ಇವುಗಳನ್ನು ನಿಯಂತ್ರಣದಲ್ಲಿರಿಸಿ, ಕ್ರಮ ಕೈಗೊಳ್ಳಬೇಕು
-ವಿಜಯದಶಮಿ ಕಾರ್ಯಕ್ರಮದಲ್ಲಿ ಮೋಹನ ಭಾಗವತ್‌ ಹೇಳಿಕೆ

Content on OTT platforms is threat to the country  RSS chief Mohan Bhagwat
Author
Bengaluru, First Published Oct 15, 2021, 11:56 AM IST
  • Facebook
  • Twitter
  • Whatsapp

ನಾಗಪುರ್ (ಅ. 15) : ಓಟಿಟಿ ಪ್ಲಾಟಫಾರ್ಮ್ಸ್‌ಗಳಲ್ಲಿ (OTT Platforms) ಪ್ರಸಾರ ಮಾಡಲಾಗುತ್ತಿರುವ ವಿಷಯಗಳು ದೇಶಕ್ಕೆ ಮಾರಕವಾಗಬಹುದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ʼಕೊರೊನಾ ವೈರಸ್‌ (Coronavirus) ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಬಹುತೇಕ ಎಲ್ಲ ಮಕ್ಕಳ ಬಳಿಯೂ ಮೊಬೈಲ್‌ ಫೋನ್‌ಗಳಿದ್ದೂ ಅವರು ಮೊಬೈಲ್‌ಗಳಲ್ಲಿ ಏನನ್ನು ವೀಕ್ಷಿಸುತ್ತಿದ್ದಾರೆ ಎಂಬುದು ನಿಯಂತ್ರಣದಲ್ಲಿಲ್ಲʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೊರೊನಾ ಲಾಕಡೌನ್‌ ನಂತರ  ನೆಟ್‌ಫ್ಲಿಕ್ಸ್, ಅಮೆಜಾನ್‌ ಪ್ರೈಮ್‌ನಂತಹ ಓಟಿಟಿ ಪ್ಲಾಟ್ ಫಾರ್ಮ್ಸ್‌ಗಳ ಬಳಕೆ ಹೆಚ್ಚಾಗಿದೆ.

'ಪಾಕ್‌ಗೆ ವಲಸೆ  ಹೋದ ಮುಸ್ಲಿಮರಿಗೆ ಗೌರವ-ಸ್ಥಾನ ಸಿಗಲೇ ಇಲ್ಲ'

ಮಹಾರಾಷ್ಟ್ರದ ನಾಗಪುರದಲ್ಲಿ ವಿಜಯದಶಮಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್‌ ಭಾಗವತ್‌, ಭಾರತದಲ್ಲಿ ಮಾದಕವಸ್ತು (Narcotics) ಸೇವನೆಯ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ.  ಪಾಕಿಸ್ತಾನದ ಬಗ್ಗೆ ಮಾತನಾಡುತ್ತ,  ಕೆಲವು ನೆರೆಯ ರಾಷ್ಟ್ರಗಳು ಇಂಥಹ ಕೃತ್ಯಗಳನ್ನು ಪ್ರಚೋದಿಸುತ್ತಿವೆ, ಇದರಿಂದ ಗಳಿಸಿದ ಹಣವನ್ನು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಜತೆಗೆ ಕ್ರಿಪ್ಟೋಕರೆನ್ಸಿಯ (Cruptocurrency) ಬಗ್ಗೆ ಮಾತನಾಡುತ್ತಾ ʼBITCOIN ನಂತಹ ಗುಪ್ತ ಹಾಗೂ ನಿಯಂತ್ರಣದಲ್ಲಿರದ ಹಣ (Currencies) ಎಲ್ಲ ದೇಶಗಳಿಗೂ ಮಾರಕವಾಗಿದ್ದು, ದೇಶಗಳ ಅರ್ಥವ್ಯವಸ್ಥೆಯನ್ನು(Economy) ಹದಗೆಡಿಸುವ ಕೆಲಸ ಮಾಡುತ್ತವೆ.  ಸರ್ಕಾರ ಇಂಥಹ ವ್ಯವಸ್ಥೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಭಾಗವತ್ ಆಗ್ರಹಿಸಿದರು. ಇಸ್ರೇಲ್‌ನ ರಾಯಭಾರಿ Kobbi Shoshani ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸರ್ಕಾರಗಳು ಕ್ರಮ ಕೈಗೊಳ್ಳುವವರೆಗೂ ಜನರು ಕಾಯಬಾರದು. ಮನೆಯಲ್ಲಿಯೇ ಮಕ್ಕಳಿಗೆ ಮೌಲ್ಯಶಿಕ್ಷಣವನ್ನು ನೀಡಬೇಕು. ಮಕ್ಕಳಿಗೆ ‌ʼಮನ್‌ ಕಾ ಬ್ರೆಕ್‌ ಉತ್ತಮ್ ಬ್ರೆಕ್ʼ(ಮನಸ್ಸಿನ ಮೇಲಿನ ಹಿಡಿತ, ಉತ್ತಮವಾದ ಹಿಡಿತ ) ಎಂಬುದನ್ನು ಕಲಿಸಬೇಕು. ಭಾರತೀಯ ಸಂಸ್ಕೃತಿಯ ಮೇಲೆ ನಡೆಯುತ್ತಿರುವ ವಿವಿಧ ಬಗೆಯ ದಾಳಿಗಳಿಗೆ ಪರಿಹಾರ ಎಂದು ಭಾಗವತ್ ತಿಳಿಸಿದರು.

'ಭಾರತ ಎಂದೆಂದಿಗೂ ಹಿಂದು ರಾಷ್ಟ್ರವಾಗಿಯೇ ಇರಲಿದೆ'

ಈ ವರ್ಷ ಶ್ರೀ ಅರವಿಂದರ ( Sri Aurobindo) 150ನೇ ಜನ್ಮ ವಾರ್ಷಿಕೋತ್ಸವ. 'ನಮ್ಮತನದಿಂದ' ಭಾರತವನ್ನು ನಿರ್ಮಿಸುವ ಬಗ್ಗೆ ಅರವಿಂದರು ಸಾಕಷ್ಟು ಬರೆದಿದ್ದಾರೆ. ಈ ವರ್ಷ ಧರ್ಮಪಾಲರ (Dhramapal) ಜನ್ಮ ಶತಮಾನೋತ್ಸವ ಕೂಡ ಹೌದು. ಧರ್ಮಪಾಲರು ಗಾಂಧೀಜಿಯವರಿಂದ ಪ್ರೇರಿತರಾಗಿ, ಬ್ರಿಟಿಷರ ಆಳ್ವಿಕೆಯ ಮುಂಚಿನ ಇತಿಹಾಸದ ಪುರಾವೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ʼಸನಾತನ ಸಂಸ್ಕೃತಿಯನ್ನು ಅನುಸರಿಸುವ ಧರ್ಮವನ್ನು ಭಾರತದಲ್ಲಿ ಪಾಲಿಸಿದಲ್ಲಿ, ಈ ದೇಶದಲ್ಲಿ ಸ್ವಾರ್ಥಿಗಳಿಂದಾಗುವ ವಂಚನೆ ತಡೆಯಬಹುದ ಎಂದರು.

 

Follow Us:
Download App:
  • android
  • ios