Asianet Suvarna News Asianet Suvarna News

Constitution Day:ರಾಷ್ಟ್ರಪತಿ ಅಧ್ಯಕ್ಷತೆಯಲ್ಲಿ ಸಂವಿಧಾನ ದಿನಾಚರಣೆ, ಪ್ರಧಾನಿ ಸೇರಿ ಹಲವು ಗಣ್ಯರು ಭಾಗಿ!

  • ಸಂವಿಧಾನ ದಿನಾಚರಣೆ, ಬೆಳಗ್ಗೆ 11:00 ರಿಂದ  ನೇರ ಪ್ರಸಾರ 
  • ರಾಷ್ಟ್ರಪತಿ, ಪ್ರಧಾನಿ, ಉಪರಾಷ್ಟ್ರಪತಿ ಸೇರಿ ಹಲವರು ಭಾಗಿ
  • ವಿಶೇಷ ಕಾರ್ಯಕ್ರಮದಲ್ಲಿ  ಜನರ ಪಾಲ್ಗೊಳ್ಳುವಿಕೆಗೆ ಅವಕಾಶ
Constitution Day on 26th November to be celebrated in Central Hall of Parliament House ckm
Author
Bengaluru, First Published Nov 23, 2021, 7:47 PM IST

ನವದೆಹಲಿ(ನ.23): ಸ್ವಾತಂತ್ರ ಭಾರತದ 75 ವರ್ಷಗಳ ಸಾಧನೆ, ಸಂಸ್ಕೃತಿ, ಭವ್ಯ ಇತಿಹಾಸ ಸ್ಮರಿಸಲು ಕೇಂದ್ರ ಸರ್ಕಾರ ಆಜಾದಿ ಕಾ ಅಮೃತ ಮಹೋತ್ಸವ(Azadi ka Amrit Mahotsav) ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಆಗಸ್ಟ್ 15, 2021ರ ಸ್ವಾತಂತ್ರ್ಯ ದಿನಾಚರಣೆಯಂದು ಈ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇದರ ಅಂಗವಾಗಿ ನವೆಂಬರ್ 26ರಂದು ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಸಂವಿಧಾನ ದಿನವನ್ನು(Constitution Day ) ಭಾರತ ಆಚರಿಸುತ್ತಿದೆ.

ಸಂವಿದಾನ ದಿನಾಚರಣೆ ಕುರಿತು ಸುದ್ಧಿಗೋಷ್ಠಿ ನಡೆಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ  ಪ್ರಲ್ಹಾದ್ ಜೋಶಿ(Pralhad Joshi), ಕಾರ್ಯಕ್ರಮದ ಮಾಹಿತಿ ಹಂಚಿಕೊಂಡರು.  ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು 2021ರ ನವೆಂಬರ್ 26 ರಂದು ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ(Central Hall of Parliament) ನಡೆಯುವ ʻಸಂವಿಧಾನ ದಿನʼ ಆಚರಣೆಯ ಅಧ್ಯಕ್ಷತೆ ವಹಿಸಲಿದ್ದು, ಅಂದು ಬೆಳಗ್ಗೆ11:00 ಗಂಟೆಯಿಂದ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುವುದು ಎಂದರು.

ಸಂವಿಧಾನ ರೂಪಗೊಂಡ ಇ-ಫೋಟೋ , ಚಿತ್ರಾಂಜಲಿ@75 ಪ್ರದರ್ಶನಕ್ಕೆ ಅನುರಾಗ್ ಚಾಲನೆ!

 ಉಪರಾಷ್ಟ್ರಪತಿಗಳು,  ಪ್ರಧಾನಮಂತ್ರಿಗಳು,  ಸಭಾಪತಿಗಳು, ಸಚಿವರು, ಸಂಸತ್ ಸದಸ್ಯರು ಮತ್ತು ಇತರ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಕಾರ್ಯವನ್ನು ಸಂಸತ್‌ ಟಿವಿ ಡಿಡಿ ಹಾಗೂ ಟಿವಿ ವಾಹಿನಿಗಳು ಮತ್ತು ಆನ್‌ಲೈನ್ ಪೋರ್ಟಲ್‌ಗಳ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ. ರಾಷ್ಟ್ರಪತಿಗಳ ಭಾಷಣದ ನಂತರ, ಸಂವಿಧಾನದ ಪೀಠಿಕೆಯ ವಾಚನ ಕಾರ್ಯಕ್ರಮವಿದ್ದು, ಇದರಲ್ಲಿ ರಾಷ್ಟ್ರಪತಿಗಳೊಂದಿಗೆ ನೇರವಾಗಿ ಪಾಲ್ಗೊಳ್ಳಲು ಇಡೀ ರಾಷ್ಟ್ರವನ್ನು ಆಹ್ವಾನಿಸಲಾಗಿದೆ.

ಇದನ್ನು ಸಾರ್ವಜನಿಕ ಅಭಿಯಾನವನ್ನಾಗಿ ಮಾಡಲು ಮತ್ತು ಜನರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಲು ಈ ಸಚಿವಾಲಯವು ಎರಡು ಪೋರ್ಟಲ್‌ಗಳನ್ನು ಅಭಿವೃದ್ಧಿಪಡಿಸಿದೆ, ಈ ಪೈಕಿ ಒಂದೆಂದರೆ - "ಸಂವಿಧಾನದ ಪೀಠಿಕೆಯ ಆನ್‌ಲೈನ್ ವಾಚನ" – ಇದು 23 ಭಾಷೆಗಳಲ್ಲಿರಲಿದೆ. ಮತ್ತೊಂದು ಪೋರ್ಟಲ್‌ -"ಸಾಂವಿಧಾನಿಕ ಪ್ರಜಾಪ್ರಭುತ್ವದ ಆನ್‌ಲೈನ್ ರಸಪ್ರಶ್ನೆ ಇದರಲ್ಲಿ ಯಾರು ಬೇಕಾದರೂ ಎಲ್ಲಿಂದಬೇಕಾದರೂ ಭಾಗವಹಿಸಬಹುದು ಮತ್ತು ಪ್ರಮಾಣಪತ್ರಗಳನ್ನು ಪಡೆಯಬಹುದು.

"ಸಾಂವಿಧಾನಿಕ ಪ್ರಜಾಪ್ರಭುತ್ವದ ಬಗ್ಗೆ ಆನ್‌ಲೈನ್ ರಸಪ್ರಶ್ನೆ ಪೋರ್ಟಲ್‌ಗೆ  ಗೌರವಾನ್ವಿತ ರಾಷ್ಟ್ರಪತಿಗಳು 2021ರ ನವೆಂಬರ್‌ 26ರಂದು ಸೆಂಟ್ರಲ್‌ ಹಾಲ್‌ನಲ್ಲಿ ಚಾಲನೆ ನೀಡಲಿದ್ದಾರೆ. ಇದು ಭಾರತೀಯ ಸಂವಿಧಾನ ಮತ್ತು ಅದರ ಪ್ರಜಾಪ್ರಭುತ್ವದ ಬಗ್ಗೆ ಅತ್ಯಂತ ಸರಳ ಮತ್ತು ಮೂಲಭೂತ ಪ್ರಶ್ನೆಗಳನ್ನು ಹೊಂದಿರುವ, "ಜನ ಭಾಗಿದಾರಿ" ಉದ್ದೇಶದೊಂದಿಗೆ ರೂಪಿಸಿದ ಸರಳ ಡಿಜಿಟಲ್ ರಸಪ್ರಶ್ನೆಯಾಗಿದೆ. ಇದರಲ್ಲಿ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾದ ಮೂಲಭೂತ ಕರ್ತವ್ಯಗಳ ಬಗ್ಗೆ ವಿಶೇಷ ಉಲ್ಲೇಖವಿದೆ. ತಮ್ಮ ಹೆಸರು, ದೂರವಾಣಿ ಸಂಖ್ಯೆ ಮತ್ತು ವಯಸ್ಸಿನ ವಿವರಗಳೊಂದಿಗೆ ನೋಂದಣಿಯಾಗಿ ಯಾರು ಬೇಕಾದರೂ ಈ ರಸಪ್ರಶ್ನೆಯಲ್ಲಿ ಭಾಗವಹಿಸಬಹುದು ಹಾಗೂ ಇದರಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಮಾಣಪತ್ರವನ್ನು ಪಡೆಯಬಹುದು. ಒಂದೇ ಮೊಬೈಲ್ ಸಂಖ್ಯೆಯನ್ನು ಬಳಸಿ ಅನೇಕ ನೋಂದಣಿಗಳಿಗೂ ಅವಕಾಶವಿದೆ. ಇದರಲ್ಲಿ ಸುಮಾರು 1000 ಪ್ರಶ್ನೆಗಳ ಪ್ರಶ್ನೆಗಳ ಭಂಡಾರವಿದ್ದು, ಮತ್ತು ಪ್ರತಿ ಬಾರಿ 5 ಪ್ರಶ್ನೆಗಳು ಯಾದೃಚ್ಛಿಕವಾಗಿ ಪ್ರತ್ಯಕ್ಷವಾಗುತ್ತವೆ.

'ಸಂವಿಧಾನವನ್ನು ರದ್ದು ಮಾಡಲು ಕೈ ಹಾಕಿದ್ರೆ ರಕ್ತಪಾತ ಆಗುತ್ತೆ, ಹುಷಾರ್

ರಸಪ್ರಶ್ನೆಯಲ್ಲಿ ಭಾಗವಹಿಸುವ ಯಾವುದೇ ಸ್ಪರ್ಧಿಯು ಇವುಗಳಿಗೆ ಉತ್ತರಿಸಲು ಪ್ರಯತ್ನಿಸಬೇಕು. ಸ್ಪರ್ಧಿಯು ಅವನ/ ಅವಳ ಉತ್ತರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಬಹುದು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರಮಾಣಪತ್ರವನ್ನು ನೀಡಲಾಗುವುದು. ಏಕೆಂದರೆ ಈ ರಸಪ್ರಶ್ನೆ ಕಾರ್ಯಕ್ರಮದ ಮೂಲ ಉದ್ದೇಶ ಭಾರತೀಯ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳನ್ನು ಜನಪ್ರಿಯಗೊಳಿಸುವುದೇ ಹೊರತು ಸ್ಪರ್ಧಿಗಳ ಜ್ಞಾನವನ್ನು ಪರೀಕ್ಷಿಸುವುದಿಲ್ಲ. ಪ್ರಶ್ನೆಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಇರುತ್ತವೆ. ಇದರಿಂದ ಹಿರಿಯ ನಾಗರಿಕರು ಸೇರಿದಂತೆ ಹೆಚ್ಚು ಹೆಚ್ಚು ಜನರು ವಿಶ್ವದಾದ್ಯಂತ ಭಾಗವಹಿಸಬಹುದು.ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆಯುವ ಸಂವಿಧಾನ ದಿನಾಚರಣೆಯಲ್ಲಿ ಗೌರವಾನ್ವಿತ ರಾಷ್ಟ್ರಪತಿ ಮತ್ತು ಗೌರವಾನ್ವಿತ ಪ್ರಧಾನಿಯೊಂದಿಗೆ ತಾವಿರುವ ಸ್ಥಳಗಳಿಂದಲೇ ಹೆಚ್ಚು ಹೆಚ್ಚು ಜನರು ಭಾಗವಹಿಸಬೇಕು ಎಂದು ಜೋಶಿ ಮನವಿ ಮಾಡಿದರು.

Follow Us:
Download App:
  • android
  • ios