ತಕ್ಷಣವೇ ದಾಳಿ ನಿಲ್ಲಿಸಿ, ದಾಳಿ ಪ್ರತಿದಾಳಿ ಪರಿಹಾರವಲ್ಲ. ಮಾತುಕತೆ ನಡೆಯಲಿ: ಕಾಂಗ್ರೆಸ್ ನಾಯಕ ಜೈರಾಂ ರಮೇಶ್
ಪ್ಯಾಲೆಸ್ತಿನ್ ಹಕ್ಕುಗಳ, ಅವರ ಬೇಡಿಕೆಗಳನ್ನು ಮಾತುಕತೆ ಮೂಲಕ ಬಗೆಹರಿಸಬೇಕು. ದಾಳಿ ಪ್ರತಿದಾಳಿಗಳು ಪರಿಹಾರವಲ್ಲ. ತಕ್ಷಣವೇ ದಾಳಿ ನಿಲ್ಲಿಸಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಂ ರಮೇಶ್ ಹೇಳಿದ್ದಾರೆ.

ನವದೆಹಲಿ(ಅ.08) ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ಸಂಘರ್ಷ ಹಲವು ವರ್ಷಗಳ ಇತಿಹಾಸವಿದೆ. ಆದರೆ ಶನಿವಾರ ಪ್ಯಾಲೆಸ್ತಿನ್ ಬೆಂಬಲಿತ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಏಕಾಏಕಿ 5000 ರಾಕೆಟ್ ದಾಳಿ ನಡೆಸಿದ್ದರು. ಬಳಿಕ ಗಾಜಾ ಸ್ಟ್ರಿಪ್‌ನಿಂದ ವಾಯು ಮಾರ್ಗ, ಜಲಮಾರ್ಗ ಹಾಗೂ ರಸ್ತೆ ಮಾರ್ಗದ ಮೂಲಕ ಇಸ್ರೇಲ್‌ಗೆ ನುಗ್ಗಿದ ಹಮಾಸ್ ಉಗ್ರರು ಬಾಂಬ್, ಗುಂಡಿನ ದಾಳಿ ನಡೆಸಿದ್ದಾರೆ. ಅಮಾಯಕರನ್ನು ಸಿಕ್ಕ ಸಿಕ್ಕ ಕಡೆ ಹತ್ಯೆ ಮಾಡಿದ್ದಾರೆ. ಮಹಿಳೆಯರನ್ನು ಬೆತ್ತಲೇ ಮೆರವಣಿಗೆ, ಮಹಿಳೆಯ ಶವಗಳ ಮೆರವಣಿಗೆ ಸೇರಿದಂತೆ ಪೈಶಾಚಿಕ ಕೃತ್ಯ ನಡೆಸಿದ್ದಾರೆ. ಈ ಘಟನೆ ಬೆನ್ನಲ್ಲೇ ಭಾರತ ಸರ್ಕಾರ, ಉಗ್ರ ದಾಳಿಯನ್ನು ಖಂಡಿಸಿ ಇಸ್ರೇಲ್‌ಗೆ ಬೆಂಬಲ ಸೂಚಿಸಿತ್ತು. ಆದರೆ ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಪ್ಯಾಲೆಸ್ತಿನ್‌ಗೆ ಬೆಂಬಲ ಸೂಚಿಸಿದೆ.
ಪ್ಯಾಲೆಸ್ತಿನ್ ಬೆಂಬಲಿತ ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿಗೆ ಇಡೀ ವಿಶ್ವವೇ ಖಂಡಿಸುತ್ತಿದೆ. ಆದರೆ ಹಮಾಸ್ ದಾಳಿಯನ್ನು ಪ್ಯಾಲೆಸ್ತಿನ್‌ನಲ್ಲಿ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ಇಸ್ರೇಲ್ ನಾಗರೀಕರ ಶವಗಳ ಮೆರವಣಿಗೆಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಒತ್ತೆಯಾಳಾಗಿಟ್ಟುಕೊಂಡಿರುವ ಇಸ್ರೇಲಿಗರ ಮೇಲೆ ತೀವ್ರ ಹಲ್ಲೆ, ಅತ್ಯಾಚಾರ ನಡೆಯುತ್ತಿದೆ. ಇದನ್ನು ಪ್ಯಾಲೆಸ್ತಿನ್ ಸೇರಿದಂತೆ ಕೆಲ ರಾಷ್ಟ್ರಗಳು ಸಂಭ್ರಮಪಡುತ್ತಿದೆ. ಇದೇ ಪ್ಯಾಲೆಸ್ತಿನ್ ಹಕ್ಕುಗಳಿಗೆ ಕಾಂಗ್ರೆಸ್ ಕಣ್ಣೀರು ಸುರಿಸಿದೆ.
ಪತಿ ಜೊತೆ ವಿಡಿಯೋ ಕಾಲ್‌ನಲ್ಲಿರುವಾಗಲೇ ಭಾರತೀಯ ಮಹಿಳೆ ಮೇಲೆ ಹಮಾಸ್ ಉಗ್ರರ ದಾಳಿ!
ಪ್ಯಾಲೆಸ್ತಿನ್ ಹಕ್ಕುಗಳ, ಅವರ ಬೇಡಿಕೆಗಳನ್ನು ಮಾತುಕತೆ ಮೂಲಕ ಬಗೆಹರಿಸಬೇಕು. ದಾಳಿ ಪ್ರತಿದಾಳಿಗಳು ಪರಿಹಾರವಲ್ಲ. ತಕ್ಷಣವೇ ದಾಳಿ ನಿಲ್ಲಿಸಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಂ ರಮೇಶ್ ಹೇಳಿದ್ದಾರೆ. ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಎಲ್ಲಾ ಸಮಸ್ಯೆಗಳನ್ನು ಕುಳಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಪ್ಯಾಲೆಸ್ತಿನ್ ಅಮಾಯಕರ ಜೀವಹಾನಿ ಎಂದಿಗೂ ಉತ್ತರವಲ್ಲ ಎಂದಿದ್ದಾರೆ.
ಇದೇ ವೇಳೆ ಹಮಾಸ್ ಉಗ್ರರ ದಾಳಿಯನ್ನು ಖಂಡಿಸಿರುವ ಕಾಂಗ್ರೆಸ್. ತಕ್ಷಣವೇ ಕದನ ವಿಮಾರ ಘೋಷಿಸುವಂತೆ ಸಲಹೆ ನೀಡಿದೆ. ಕಾಂಗ್ರೆಸ್ ಸಭೆಯಲ್ಲಿ ಪ್ಯಾಲೆಸ್ತಿನ್ ನಾಗರೀಕರ ಹಕ್ಕುಗಳ ಸಂರಕ್ಷಣೆಗೆ ಕಾಂಗ್ರೆಸ್ ಆದ್ಯತೆ ನೀಡಲಿದೆ ಎಂದಿದೆ.
ಹಮಾಸ್ ವಿರುದ್ಧ ಯುದ್ಧದಲ್ಲಿ ಭಾಗಿಯಾದ ಇಸ್ರೇಲ್ ಮಾಜಿ ಪ್ರಧಾನಿ: ಸೈನಿಕರ ಜತೆ ಯುದ್ಧಭೂಮಿಗಿಳಿದ ರಾಜಕಾರಣಿ!