ದಿಸ್ಪುರ್(ಮಾ.05): ಅಸ್ಸಾಂ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್ ಪ್ರಚಾರ ಬಿರುಸಾಗಿದೆ. ಕಾಂಗ್ರೆಸ್ ಗೆದ್ದು ಬಂದರೆ ಉದ್ಯೋಗಕ್ಕಾಗಿಯೇ ಪ್ರತ್ಯೇಕ ಸಚಿವಾಲಯ ರಚಿಸುವ ಭರವಸೆ ನೀಡಿದೆ ಕಾಂಗ್ರೆಸ್.

ಪಬ್ಲಿಕ್ ಸೆಕ್ಟರ್ನಲ್ಲಿ 5 ಲಕ್ಷ ಉದ್ಯೋಗ ಮತ್ತು ಪ್ರೈವೇಟ್ ಸೆಕ್ಟರ್ನಲ್ಲಿ ಸುಮಾರು 25 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ನೀಡಿದೆ ಕಾಂಗ್ರೆಸ್.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರೈತರ ರಣಕಹಳೆ!

ಇತ್ತೀಚೆಗೆ ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಪಕ್ಷದ 5 ಭರವಸೆ ಅಭಿಯಾನವನ್ನು ಲಾಂಚ್ ಮಾಡಿದ್ದರು. ತೇಝ್ಪುರನಲ್ಲಿ ಚುನಾವಣೆ ಪ್ರಚಾರ ಸಂದರ್ಭ ಇದನ್ನು ಲಾಂಚ್ ಮಾಡಿದ್ದರು ಪ್ರಿಯಾಂಕ.

ಸಿಎಎ ರದ್ದು ಮಾಡುವ ಕಾನೂನು, 5 ಲಕ್ಷ ಸರ್ಕಾರಿ ಕೆಲಸ, ಚಹಾ ಕೆಲಸಗಾರರ ವೇತನ 365ಕ್ಕೆ ಏರಿಸುವುದು,  ಪ್ರತಿ ಮನೆಗೆ 200 ಯುನಿಟ್ ವಿದ್ಯುತ್, ಗೃಹಿಣಿಯರಿಗೆ 2 ಸಾವಿರ ಮಾಸಿಕ ವೇತನ ಇವು ಕಾಂಗ್ರೆಸ್ ನೀಡಿದ ಭರವಸೆಗಳು.

ಎಲೆಕ್ಷನ್ ಸಮೀಪಿಸ್ತಿದ್ದಂತೆ ಮಾ ಕ್ಯಾಂಟೀನ್ ಆರಂಭಿಸಿದ ದೀದಿ: 5 ರೂಪಾಯಿ ಊಟ

ಪ್ರಚಾರ ಅಭಿಯಾನದಲ್ಲಿ ಮತ್ತೊಮ್ಮೆ ಭರವಸೆಗಳ ಕುರಿತು ಮಾತನಾಡಿ ಇದು ಪ್ರಾಮಿಸ್ ಅಲ್ಲ, ಗ್ಯಾರಂಟಿ ಎಂದು ಹೇಳಿದ್ದಾರೆ. ಈ ಭರವಸೆಗಳಿಗೆ ಸಂಬಂಧಿಸಿದ ಎಲ್ಲಾ ಹೋಂವರ್ಕ್ಗಳೂ ಮುಗಿದಿವೆ. ಅನುಷ್ಠಾನಕ್ಕೆ ಬೇಕಾದ ಕಾರ್ಯಗಳನ್ನು ಮುಗಿಸುತ್ತಿದ್ದೇವೆ ಎಂದಿದ್ದಾರೆ.

ಯುವ ಜನರು ಉದ್ಯೋಗವಿಲ್ಲದೆ ಕಷ್ಟಪಡುತ್ತಿದ್ದಾರೆ. ಸಿಕ್ಕಿದವರಿಗೆ ಕನಿಷ್ಠ ವೇತನ ನೀಡಲಾಗುತ್ತಿದೆ. 25 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ಕೊಟ್ಟೋರು ಸಿಎಎ ಕೊಟ್ಟಿದ್ದಾರೆ ಎಂದಿದ್ದಾರೆ.

ಚಿನ್ನ ಸಾಲ ಮನ್ನಾ: ಚುನಾವಣೆ ಪ್ರಕಟಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಭರ್ಜರಿ ಗಿಫ್ಟ್!

ಇದೇ ಅಭಿಯಾನದಲ್ಲಿ ಕಾಂಗ್ರೆಸ್ ಆನ್ಲೈನ್ ಉದ್ಯೋಗ ನೋಂದಣಿ ವೆಬ್ಸೈಟ್ ಆರಂಭಿಸಿದೆ. www.congressor5guarantee.in. ನಲ್ಲಿ ನೋಂದಣಿ ಮಾಡಬಹುದಾಗಿದೆ.