ನವದೆಹಲಿ[ಫೆ.16]: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುವ ಸಾಧ್ಯತೆ ಇದೆ.

ಬರುವ ಏಪ್ರಿಲ್‌ನಲ್ಲಿ ರಾಜ್ಯಸಭೆಯ ಕೆಲವು ಸ್ಥಾನಗಳು ಖಾಲಿ ಆಗಲಿದ್ದು, ಚುನಾವಣೆ ನಡೆಯಲಿದೆ. ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದ ಸ್ಥಾನಗಳು ಕೂಡ ಖಾಲಿಯಾಗಲಿವೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಹಾಗೂ ಛತ್ತೀಸ್‌ಗಢದಲ್ಲಿ ಜೆಎಂಎಂ-ಕಾಂಗ್ರೆಸ್‌ ಮೈತ್ರಿಕೂಟ ಅಧಿಕಾರದಲ್ಲಿವೆ.

ಈ ಕಾರಣಕ್ಕಾಗಿ, ಈ ಎರಡೂ ರಾಜ್ಯಗಳ ಪೈಕಿ ಒಂದರಿಂದ ಪ್ರಿಯಾಂಕಾ ಅವರನ್ನು ಪಕ್ಷವು ನಾಮನಿರ್ದೇಶನ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಶನಿವಾರ ಹೇಳಿವೆ.

ಈಗ ಉತ್ತರಪ್ರದೇಶದ ಪ್ರಭಾರಿಯಾಗಿರುವ ಪ್ರಿಯಾಂಕಾರನ್ನು ರಾಜ್ಯಸಭೆಯಲ್ಲಿ ಪಕ್ಷದ ದನಿಯನ್ನಾಗಿ ಮಾಡುವುದು ಕಾಂಗ್ರೆಸ್‌ ಉದ್ದೇಶವಾಗಿದೆ ಎಂದು ಹೇಳಲಾಗಿದೆ.