Asianet Suvarna News Asianet Suvarna News

ಯುಪಿಯಲ್ಲಿ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾದ ಕಾಂಗ್ರೆಸ್: ಮಹತ್ವದ ಘೋಷಣೆ!

* ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಮಹತ್ವದ ಘೋಷಣೆ

* ಬಿಜೆಪಿಗೆ ಮುಳುವಾಗುತ್ತಾ ಕಾಂಗ್ರೆಸ್‌ ರಣತಂತ್ರ

* ರಾಜಕೀಯದಲ್ಲಿ ಸಂಚಲನ ಮೂಡಿಸಿದೆ ಕಾಂಗ್ರೆಸ್‌ ನಡೆ

Congress to give 40pc tickets to women in UP polls Says Priyanka Gandhi pod
Author
Bangalore, First Published Oct 19, 2021, 4:12 PM IST
  • Facebook
  • Twitter
  • Whatsapp

ಲಕ್ನೋ(ಅ.19): ಯುಪಿಯಲ್ಲಿ ವಿಧಾನಸಭಾ ಚುನಾವಣೆಗೂ(Uttar Pradesh Assembly Elections) ಮುನ್ನ ಕಾಂಗ್ರೆಸ್(Congress) ದೊಡ್ಡ ಪಣತೊಟ್ಟಿದೆ. ಉತ್ತರ ಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ(Priyanka Gandhi) ಅವರು ಮಂಗಳವಾರ ಲಕ್ನೋದಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿ ಪ್ರಮುಖ ಘೋಷಣೆಯನ್ನು ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ 40% ಟಿಕೆಟ್ ನೀಡುತ್ತದೆ ಎಂದು ತಿಳಿಸಿದ್ದಾರೆ. ಯುಪಿಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು, ಅವರನ್ನು ಮುಂದೆ ತರಬೇಕು ಎಂದಿರುವ ಪ್ರಿಯಾಂಕಾ, ಇಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾದರೆ, ರಾಷ್ಟ್ರೀಯ ಮಟ್ಟದಲ್ಲಿ ಕೂಡ ಹೆಚ್ಚಾಗುತ್ತದೆ ಎಂದಿದ್ದಾರೆ. ನಾನು ಮಹಿಳೆಯರನ್ನು ರಾಜಕೀಯಕ್ಕೆ ಬರಲು ವಿನಂತಿಸುತ್ತೇನೆ, ನನ್ನೊಂದಿಗೆ ಹೆಗಲಿಗೆ ಹೆಗಲು ಕೊಡಿ ಎಂದಿದ್ದಾರೆ. ಇವೇ ವೇಳೆ ನಾನು ಇನ್ನೂ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ, ಮುಂದೆ ಯೋಚಿಸುತ್ತೇನೆ ಎಂದಿದ್ದಾರೆ.

ಈ ನಿರ್ಧಾರ ನೊಂದ ಎಲ್ಲಾ ಮಹಿಳೆಯರಿಗೆ ನ್ಯಾಯ ನೀಡುತ್ತದೆ ಎಂದು ಪ್ರಿಯಾಂಕಾ(Priyanka Gandhi) ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಬದಲಾವಣೆ ಬಯಸುವ ಹಾಗೂ ರಾಜ್ಯವು ಮುಂದುವರಿಯಬೇಕು ಎನ್ನುವ ಎಲ್ಲಾ ಮಹಿಳೆಯರಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಇದೇ ವೇಳೆ 'ಲಡ್‌ಕೀ ಹೂಂ, ಲಡ್‌ ಸಕ್‌ತೀ ಹೂಂ(ಹುಡುಗಿ ನಾನು, ಹೋರಾಡುವೆ ನಾನು)' ಎಂಬ ಘೋಷವಾಕ್ಯವನ್ನೂ ಕೂಗಿದ್ದಾರೆ. ಅಲ್ಲದೇ ನಾನು 2019 ರ ಚುನಾವಣೆಯಲ್ಲಿ ಯುಪಿಗೆ ಬಂದಾಗ, ವಿಶ್ವವಿದ್ಯಾನಿಲಯದ ಕೆಲವು ಹುಡುಗಿಯರು ಪ್ರಯಾಗರಾಜ್ ನಲ್ಲಿ ನನ್ನನ್ನು ಭೇಟಿಯಾದರು. ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ನಿಯಮಗಳಿವೆ ಎಂದು ಅವರು ಹೇಳಿದರು. ಅದರ ನಂತರ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ತೀರ್ಪು ಸುಟ್ಟು ಕರಕಲಾಗಿಸಿದ ಉನ್ನಾವ್‌ನ ಹುಡುಗಿಗಾಗಿ, ಈ ನಿರ್ಧಾರವು ನ್ಯಾಯ ಸಿಗದ ಹತ್ರಾಸ್ ಹೆಣ್ಮಗುವಿಗಾಗಿ ಎಂದು ಗುಡುಗಿದ್ದಾರೆ.

ಪ್ರಭಾವಿ ನಾಯಕರ ಪತ್ನಿಯರಿಗೆ ಸಿಗುತ್ತಾ ಟಿಕೆಟ್?

ಇದೇ ವೇಳೆ ಪ್ರಿಯಾಂಕಾ ಕುಟುಂಬ ರಾಜಕೀಯವನ್ನು ಬೆಂಬಲಿಸಿದ್ದಾರೆ. ಹೌದು 40% ಮಹಿಳೆಯರಿಗೆ ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ. ಹೀಗಿರುವಾಗ ಎಲ್ಲಾ ಪ್ರಭಾವಿ ನಾಯಕರು ತಮ್ಮ ಕುಟುಂಬದ ಮಹಿಳೆಯರಿಗೆ ಟಿಕೆಟ್ ಕೊಡಿಸಲು ಲಾಬಿ ಮಾಡುವುದಿಲ್ಲವೇ? ಎಂಬ ಪ್ರಶ್ನೆ ಕೆಳಲಾಗಿತ್ತು. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ಇದರಲ್ಲಿ ಯಾವುದೇ ಹಾನಿ ಇಲ್ಲ. ಆದರೆ ಮಹಿಳೆಯರಿಗೆ ಮೆರಿಟ್ ಆಧಾರದ ಮೇಲೆ ಟಿಕೆಟ್ ನೀಡಲಾಗುವುದು ಎಂದಿದ್ದಾರೆ.

ಶೀಘ್ರದಲ್ಲೇ 50-60 ಸ್ಥಾನಗಳಿಗೆ ಟಿಕೆಟ್ ಘೋಷಿಸಲಿದೆ ಕಾಂಗ್ರೆಸ್ 

ಪ್ರಿಯಾಂಕಾ ವಿಧಾನಸಭಾ ಚುನಾವಣೆಗೆ ನೀಡಲಾಗುವ ಟಿಕೆಟ್‌ಗಳಲ್ಲಿ ಮಹಿಳೆಯರಿಗೆ ಶೇ. 40ರಷ್ಟು ಮೀಸಲಾತಿಯನ್ನು ಘೋಷಿಸುವ ಮೂಲಕ ದೊಡ್ಡ ಸವಾಲೆಸೆದಿದ್ದಾರೆ. ಪಕ್ಷವು ಒಂದೆರಡು ದಿನಗಳಲ್ಲಿ 50 ರಿಂದ 60 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಬಹುದು. ಇದರೊಂದಿಗೆ, ಕಾಂಗ್ರೆಸ್ ನ ಪ್ರತಿಜ್ಞಾ ಭೇಟಿಯ ಬಗ್ಗೆಯೂ ಕಾರ್ಯಕ್ರಮವನ್ನು ನೀಡಬಹುದು.

ಪ್ರಿಯಾಂಕಾ ಆಕ್ರಮಣಕಾರಿ ನಡೆ, ಕಾಂಗ್ರೆಸ್ ಕಾರ್ಯಕರ್ತರ ಮುಖದಲ್ಲಿ ಹೊಳಪು

ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಯುಪಿಯಲ್ಲಿ ಸತತ ಎರಡು ವರ್ಷಗಳಿಂದ ಕಾಲ ಸಕ್ರಿಯರಾಗಿದ್ದಾರೆ. ಅವರು ಲಖೀಂಪುರ್ ಹಿಂಸಾಚಾರ ಪ್ರಕರಣದಲ್ಲಿ ಆಕ್ರಮಣಕಾರಿ ವರ್ತನೆ ತೋರಿಸುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಶಕ್ತಿ ತುಂಬಿದ್ದಾರೆ. ಪ್ರಿಯಾಂಕ ಮತ್ತೊಮ್ಮೆ ಲಕ್ನೋ ತಲುಪಿದ್ದಾರೆ. ಇಲ್ಲಿ ಮಧ್ಯಾಹ್ನ 1 ಗಂಟೆಗೆ ರಾಜ್ಯ ಕಚೇರಿಯಲ್ಲಿ ಚುನಾವಣಾ ಕಾರ್ಯತಂತ್ರದ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಯುಪಿಯಲ್ಲಿ ರೈತರ ಮೇಲೆ ಎನ್‌ಎಸ್‌ಎ ಹೇರುವ ಬೆದರಿಕೆ ಹಾಕುತ್ತಿದೆ ಸರ್ಕಾರ

ಈ ಹಿಂದೆ ಪ್ರಿಯಾಂಕಾ ಕೂಡ ಯೋಗಿ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಪ್ರಿಯಾಂಕಾ - ಬಿಜೆಪಿ ಸರ್ಕಾರವು ರೈತರ ಮೇಲೆ NSA (ರಾಷ್ಟ್ರೀಯ ಭದ್ರತಾ ಕಾಯಿದೆ) ಹೇರುವುದಾಗಿ ಬೆದರಿಕೆ ಹಾಕುತ್ತದೆ, ಆದರೆ ರೈತರಿಗೆ MSP ನೀಡುವುದಿಲ್ಲ. ಯುಪಿಯ ಹಲವು ಜಿಲ್ಲೆಗಳಲ್ಲಿ ರೈತರು ಪ್ರತಿ ಕ್ವಿಂಟಾಲ್‌ಗೆ 900-1000 ರೂ.ಗಳ ನಷ್ಟದಲ್ಲಿ ಭತ್ತವನ್ನು ಮಾರಾಟ ಮಾಡಲು ಒತ್ತಾಯಿಸಲಾಗುತ್ತದೆ. ಇದು ಅನ್ಯಾಯ. ಎಂಎಸ್‌ಪಿ ರೈತರ ಹಕ್ಕು. ಇದಕ್ಕಾಗಿ ಕಾಂಗ್ರೆಸ್ ಸಂಪೂರ್ಣ ಬಲದಿಂದ ಹೋರಾಡುತ್ತದೆ ಎಂದಿದ್ದಾರೆ.

ಇನ್ನು ಲಖೀಂಪುರ್ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ರೈತರು ಸೋಮವಾರ ರೈಲ್ ರೊಕೊ ಆಂದೋಲನವನ್ನು ಆಯೋಜಿಸಿದ್ದರು ಎಂಬುವುದು ಉಲ್ಲೃಖನೀಯ. ಈ ಕುರಿತು ಉತ್ತರಪ್ರದೇಶದ ಎಡಿಜಿ ಪ್ರಶಾಂತ್ ಕುಮಾರ್ ಅವರು ಯಾರಾದರೂ ಕಾನೂನು ಮತ್ತು ಸುವ್ಯವಸ್ಥೆಯನ್ನು ತನ್ನ ಕೈಯಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. NSA ಕೂಡ ವಿಧಿಸಲಾಗುವುದು ಎಂದಿದ್ದರು.

Follow Us:
Download App:
  • android
  • ios