ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ಕಾಂಗ್ರೆಸ್ ಪಕ್ಷದೊಳಗೆ ಪರ ವಿರೋಧ ಚಿತ್ರ ಹಾಗೂ ಬಿಜೆಪಿ ವಿರೋಧಿ ಕೇರಳ ಕಾಂಗ್ರೆಸ್ ಹೋರಾಟ ದೇಶಾದ್ಯಂತ ತೆರಿಗೆ ವಿನಾಯಿತಿ ನೀಡಲು ಕಾಂಗ್ರೆಸ್ ಸಿಎಂ ಭೂಪೇಶ್ ಆಗ್ರಹ
ಚತ್ತೀಸಘಡ(ಮಾ.16): ಕಾಶ್ಮೀರ ಪಂಡಿತರ ನರಮೇಧ ಆಧಾರಿತ ದಿ ಕಾಶ್ಮೀರ ಫೈಲ್ಸ್ ಬಾಲಿವುಡ್ ಚಿತ್ರ ಇಡೀದ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. 32 ವರ್ಷಗಳ ಹಿಂದೆ ನಡೆದ ಹತ್ಯಾಕಾಂಡವನ್ನು ಈ ಚಿತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಈ ಚಿತ್ರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಕಾಂಗ್ರೆಸ್ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಸಾಧ್ಯವಾಗದೆ ಇಕಟ್ಟಿಗೆ ಸಿಲುಕಿಗೆ. ಕಾರಣ ಕೇರಳ ಕಾಂಗ್ರೆಸ್ ಚಿತ್ರ ವಿರೋಧಿ ಸರಣಿ ಟ್ವೀಟ್ ಮಾಡಿದ್ದರೆ, ಇದೀಗ ಚತ್ತೀಸಘಡ ಕಾಂಗ್ರೆಸ್ ಸಿಎಂ ಭೂಪೇಶ್ ಬಾಘೆಲ್ ಚಿತ್ರದ ಪರ ಬ್ಯಾಟ್ ಬೀಸಿದ್ದಾರೆ.
ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಆಡಳಿತ ತೆರಿಗೆ ವಿನಾಯತಿ ನೀಡಲು ಮನವಿ ಮಾಡಿದೆ. ಇಷ್ಟೇ ಅಲ್ಲ ಎಲ್ಲರೂ ಕಾಶ್ಮೀರ ಫೈಲ್ಸ್ ಚಿತ್ರ ವೀಕ್ಷೆಗೆ ಮನವಿ ಮಾಡಲಾಗಿದೆ. ಚತ್ತೀಸಗಢದ ಸಿಎಂ ಭೂಪೇಶ್ ಬಾಘೆಲ್, ಚಿತ್ರಕ್ಕೆ ದೇಶಾದ್ಯಂತ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಾಶ್ಮೀರ್ ಫೈಲ್ಸ್‌ಗೆ ಕರ್ನಾಟಕದಲ್ಲಿಯೂ ತೆರಿಗೆ ವಿನಾಯಿತಿ
ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರು ಹಾಗೂ ಎಲ್ಲಾ ಪಕ್ಷದ ಶಾಸಕರು ದಿ ಕಾಶ್ಮೀರ ಫೈಲ್ಸ್ ಚಿತ್ರ ವೀಕ್ಷಿಸಬೇಕು ಎಂದು ಭೂಪೇಶ್ ಬಾಘೆಲ್ ಮನವಿ ಮಾಡಿದ್ದಾರೆ. ಬಾಘೆಲ್ ಮಾತು ಇದೀಗ ಕಾಂಗ್ರೆಸ್‌ಗೆ ತೀವ್ರ ಮುಜುಗರ ತಂದಿದೆ. ಕಾರಣ ಕಾಂಗ್ರೆಸ್ ಪಕ್ಷದಲ್ಲಿ ದಿ ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ಪರ ವಿರೋಧ ವ್ಯಕ್ತವಾಗಿದೆ.
ಕೇರಳ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಸತ್ಯ ಮರೆ ಮಾಚುವ ಯತ್ನ ಮಾಡಿತ್ತು. ಇಷ್ಟೇ ಅಲ್ಲ ಕಾಶ್ಮೀರ ಪಂಡಿತರ ಹತ್ಯೆಗೆ ಬಿಜೆಪಿ ಕಾರಣ ಎಂದಿತ್ತು. ಇದು ಬಿಜೆಪಿ ರಾಜಕೀಯ ಎಂದಿತ್ತು. ಇದೀಗ ಬಾಘೆಲ್ ಚಿತ್ರದ ಮೇಲೆ ಕೇಂದ್ರದ ಜಿಎಸ್‌ಟಿ ತೆರಿಗೆಯನ್ನು ಮುಕ್ತಗೊಳಿಸಬೇಕು ಎಂದಿದ್ದಾರೆ. ರಾಜ್ಯ ಕಾಂಗ್ರೆಸ್ ಪಕ್ಷಗಳು ಒಂದೊಂದು ನಿಲುವ ವ್ಯಕ್ತಪಡಿಸುತ್ತಿರುವುದು ಇದೀಗ ಕೇಂದ್ರದ ಕಾಂಗ್ರೆಸ್‌ಗೆ ಇನ್ನಿಲ್ಲದ ಸಂಕಷ್ಟ ತಂದಿದೆ.
ಜೀವಂತವಿರುಗಾಲೇ ಪಂಡಿತ್ ಸಹೋದರಿಯನ್ನು ಕತ್ತರಿಸಿ ಕೊಂದರು, ಕರಾಳ ಸತ್ಯ ಬಿಚ್ಚಿಟ್ಟ ಪಿಡಿಪಿ ನಾಯಕ!
ಪರಿಷತ್‌ನಲ್ಲಿ ಬಿಜೆಪಿ - ಕಾಂಗ್ರೆಸ್ ಕಾಶ್ಮೀರ್ ಫೈಲ್ಸ್ ಜಟಾಪಟಿ
ಹಿಂದಿ ಚಲನಚಿತ್ರ ‘ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಣೆಗೆ ಪರಿಷತ್ ಸದಸ್ಯರಿಗೆ ಆಹ್ವಾನಿಸುವ ಸರ್ಕಾರದ ಪ್ರಕಟಣೆಯನ್ನು ಸದನದಲ್ಲಿ ಉಲ್ಲೇಖಿಸಿದ ಸಭಾಪತಿ ಬಸವರಾಜ ಹೊರಟ್ಟಿಅವರ ಕ್ರಮಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ,ಸರ್ಕಾರದ ವಿರುದ್ಧ ಹರಿಹಾಯ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ತೀವ್ರ ವಾಗ್ವಾದ ನಡೆಸಿದ ಘಟನೆ ನಡೆಯಿತು.
ಎಲ್ಲರೂ ಕಾಶ್ಮೀರ್ ಫೈಲ್ಸ್‌ಸಿನಿಮಾ ನೋಡಿ: ಮೋದಿ
ಕಾಶ್ಮೀರದಲ್ಲಿ ದಶಕಗಳ ಕಾಲ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಮೇಲೆ ಬೆಳಕು ಚೆಲ್ಲುವ ‘ದ ಕಾಶ್ಮೀರಿ ಫೈಲ್ಸ್’ ಅತ್ಯುತ್ತಮ ಚಿತ್ರವಾಗಿದ್ದು, ಇನ್ನಷ್ಟುಇಂಥ ಚಿತ್ರಗಳು ನಿರ್ಮಾಣವಾಗಬೇಕು. ಬಹಳ ಸಮಯದಿಂದ ಮರೆಮಾಚಲಾಗಿದ್ದ ಸತ್ಯ ಕೊನೆಗೂ ಹೊರಬಂದಿದೆ. ಇದನ್ನು ಪ್ರತಿಯೊಬ್ಬ ಬಿಜೆಪಿ ಸಂಸದರೂ ವೀಕ್ಷಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯ್ತಿ
ಕಾಶ್ಮೀರಿ ಪಂಡಿತರ ನೋವು, ಉಗ್ರರ ಕೃತ್ಯಗಳಿಂದ ತೊಂದರೆಗೆ ಒಳಗಾದ ಜನರ ಕುರಿತು ಚಿತ್ರಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಹಿಂದಿ ಚಲನಚಿತ್ರಕ್ಕೆ ಗುಜರಾತ್, ಹರಿಯಾಣ ಬಳಿಕ ಇದೀಗ ಕರ್ನಾಟಕದಲ್ಲೂ ಶೇ.100ರಷ್ಟುತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಭಾನುವಾರ ನಗರದ ಒರಾಯನ್ ಮಾಲ್‌ನ ಪಿವಿಆರ್‌ನಲ್ಲಿ ಈ ಚಿತ್ರ ವೀಕ್ಷಿಸಿದ ಬಳಿಕ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ತೆರಿಗೆ ವಿನಾಯಿತಿ ಘೋಷಿಸಿದರು.
