ವಿಧಾನಸಭಾ ಚುನಾವಣೆಯ ಸೋಲಿನ ನಂತರ ಕಮಲ್ ನಾಥ್ ಅವರನ್ನು ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯಸ್ಥ ಸ್ಥಾನದಿಂದ ಕಾಂಗ್ರೆಸ್ ತೆಗೆದುಹಾಕಿದೆ. ಜಿತು ಪತ್ವಾರಿ ಮಧ್ಯಪ್ರದೇಶ ಕಾಂಗ್ರೆಸ್‌ನ ಹೊಸ ಮುಖ್ಯಸ್ಥರಾಗಿದ್ದಾರೆ.
ಭೋಪಾಲ್ (ಡಿ.16): ವಿಧಾನಸಭಾ ಚುನಾವಣೆ ಸೋಲಿನ ಬೆನ್ನಲ್ಲಿಯೇ ಕಾಂಗ್ರೆಸ್ ಶನಿವಾರ ಕಮಲ್ ನಾಥ್ ಅವರನ್ನು ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಿದೆ. ಜಿತು ಪತ್ವಾರಿ ಅವರನ್ನು ಮಧ್ಯಪ್ರದೇಶ ಪಿಸಿಸಿ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. “ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷರು, ಜಿತು ಪತ್ವಾರಿ ಅವರನ್ನು ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಿದ್ದಾರೆ. ನಿರ್ಗಮಿತ ಪಿಸಿಸಿ ಅಧ್ಯಕ್ಷ ಕಮಲ್ ನಾಥ್ ಅವರ ಕೊಡುಗೆಯನ್ನು ಪಕ್ಷವು ಶ್ಲಾಘಿಸುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸಂಸದ ಉಮಾಗ್ ಸಿಂಘರ್ ಅವರನ್ನು ಮಧ್ಯಪ್ರದೇಶ ವಿಧಾನನ ಸಭೆಯ ಪ್ರತಿಪಕ್ಷ ನಾಯಕರನ್ನಾಗಿ ಮತ್ತು ಹೇಮಂತ್ ಕಟಾರೆ ಅವರನ್ನು ಉಪನಾಯಕರನ್ನಾಗಿ ನೇಮಿಸಿದೆ. ರಾಜ್ಯದಲ್ಲಿ ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋಲು ಕಂಡ ಬಳಿಕ ಕಾಂಗ್ರೆಸ್‌ನಲ್ಲಿ ಆಗಿರುವ ಮಹಾದೊಡ್ಡ ಬದಲಾವಣೆ ಇದಾಗಿದೆ.
ಎರಡು ದಶಕದ ಆಡಳಿತ ವಿರೋಧಿ ಅಲೆಗಳನ್ನು ಸರ್ಮಥವಾಗಿ ನಿಭಾಯಿಸಿದ ಬಿಜೆಪಿ, ಮಧ್ಯಪ್ರದೇಶ ಚುನಾವಣೆಯಲ್ಲಿ 230 ಸೀಟ್‌ಗಳ ಪೈಕಿ 163 ಸೀಟ್‌ಗಳಲ್ಲಿ ಗೆಲುವು ಕಂಡಿದೆ. ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೇವಲ 66 ಸೀಟ್‌ಗಳಲ್ಲಿ ಗೆಲುವು ಕಂಡಿತು. 2018ರಲ್ಲಿ ಕಾಂಗ್ರೆಸ್ 114 ಸೀಟ್‌ಗಳಲ್ಲಿ ಗೆಲುವು ಕಂಡು ಸರ್ಕಾರವನ್ನು ರಚನೆ ಮಾಡಿತ್ತು. ಆದರೆ, ಬಳಿಕ ಸರ್ಕಾರವನ್ನು ಉಳಿಸಿಕೊಳ್ಳಲು ವಿಫಲವಾಯಿತು.
“ನಾವು ಲೋಪದೋಷಗಳನ್ನು ವಿಶ್ಲೇಷಿಸುತ್ತೇವೆ ಮತ್ತು ನಮ್ಮ ವಿಷಯವನ್ನು ಮತದಾರರಿಗೆ ಏಕೆ ಅರ್ಥಮಾಡಿಸಲು ಸಾಧ್ಯವಾಗಲಿಲ್ಲ. ನಾವು ಗೆಲ್ಲುವ ಅಥವಾ ಸೋತ ಅಭ್ಯರ್ಥಿಯಾಗಿರಲಿ ಎಲ್ಲರೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಕಮಲ್‌ನಾಥ್ ಫಲಿತಾಂಶದ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. 23 ಶಾಸಕರ ಬಂಡಾಯದಿಂದಾಗಿ ಕಮಲ್‌ನಾಥ್ ಅವರು 15 ತಿಂಗಳುಗಳ ಕಾಲ ಮುಖ್ಯಮಂತ್ರಿಯಾಗಿ ಬಳಿಕ ಕೆಳಗಿಳಿದಿದ್ದರು. ವಿಧಾನಸಭೆಯಲ್ಲಿ ಅವರ ಸರ್ಕಾರವನ್ನು ಅಲ್ಪಸಂಖ್ಯಾತರಿಗೆ ಇಳಿಸಲಾಗಿತ್ತು. ಈ ಚುನಾವಣೆಯಲ್ಲಿ ಅವರು ಚಿಂದ್ವಾರದಿಂದ 35,000 ಮತಗಳ ಅಂತರದಿಂದ ಗೆದ್ದಿದ್ದಾರೆ.
ರಾಮಮಂದಿರ ಉದ್ಘಾಟನೆಗೆ 'ಕಾಂತಾರ' ರಿಷಬ್ ಶೆಟ್ಟಿಗೆ ಆಹ್ವಾನ
ಜಿತೇಂದ್ರ ಅಲಿಯಾಸ್ ಜಿತು ಪಟ್ವಾರಿ ಅವರು ಕಮಲ್‌ನಾಥ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು 2018 ರಲ್ಲಿ ರಾವುದಿಂದ ಗೆದ್ದಿದ್ದರು ಆದರೆ ಈ ಬಾರಿ 35,000 ಕ್ಕೂ ಹೆಚ್ಚು ಮತಗಳಿಂದ ಸೋಲು ಕಂಡಿದ್ದಾರೆ.
ಕಾಂಗ್ರೆಸ್‌ಗೆ ಮಿಷನ್, ವಿಷನ್ ಎರಡೂ ಇಲ್ಲ, ಇರೋದು ಬರೀ ಕರಪ್ಶನ್, ಬಿಜೆಪಿ ವಾಗ್ದಾಳಿ!
