Asianet Suvarna News Asianet Suvarna News

ಕಾಂಗ್ರೆಸ್‌ಗೆ ಮಿಷನ್‌, ವಿಷನ್‌ ಎರಡೂ ಇಲ್ಲ, ಇರೋದು ಬರೀ ಕರಪ್ಶನ್‌, ಬಿಜೆಪಿ ವಾಗ್ದಾಳಿ!

ಕಾಂಗ್ರೆಸ್ ಹಾಗೂ ಇಂಡಿ ಒಕ್ಕೂಟಕ್ಕಧ್ಯೇಯವೂ ಇಲ್ಲ, ದೂರದೃಷ್ಟಿಯೂ ಇಲ್ಲ ಎಂದು ಪೂನಾವಾಲಾ ಹೇಳಿದ್ದಾರೆ. ಅವರು ಕಮಿಷನ್, ಭ್ರಷ್ಟಾಚಾರ, ವಿಭಜನೆ ಮತ್ತು ಅಡ್ಡಿಪಡಿಸುವ ಕೆಲಸವನ್ನು ಮಾತ್ರ ಮಾಡುತ್ತಾರೆ ಎಂದು ಟೀಕಿಸಿದ್ದಾರೆ.
 

BJP spokesperson Shehzad Poonawala attacked Congress and INDIA they have neither mission nor vision only corruption san
Author
First Published Dec 16, 2023, 9:51 PM IST

ನವದೆಹಲಿ (ಡಿ.16): ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನಲ್ಲಿ ಸ್ಮೋಕ್‌ ಬಾಂಬ್‌ ಎಸೆದಿರುವುದಕ್ಕೆ ನಿರುದ್ಯೋಗ ಸಮಸ್ಯೆಯೇ ಕಾರಣ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ ಬೆನ್ನಲ್ಲಯೇ ಅವರು ಕಾಂಗ್ರೆಸ್‌ ನಾಯಕನ ವಿರುದ್ಧ ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ಸೇರಿದಂತೆ ಇಂಡಿ ಒಕ್ಕೂಟಕ್ಕೆ ಧ್ಯೇಯವೂ ಇಲ್ಲ, ದೂರದೃಷ್ಟಿಯೂ ಇಲ್ಲ ಎಂದು ಪೂನಾವಾಲಾ ಹೇಳಿದ್ದಾರೆ. ಅವರು ಕಮಿಷನ್, ಭ್ರಷ್ಟಾಚಾರ, ವಿಭಜನೆ ಮತ್ತು ಅಡ್ಡಿಪಡಿಸುವ ಕೆಲಸವನ್ನು ಮಾತ್ರ ಮಾಡುತ್ತಾರೆ. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ವ್ಯವಸ್ಥೆಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಂಸತ್ತಿನ ಭದ್ರತೆ ಭೇದಿಸಿದವರನ್ನು ನಿರಪರಾಧಿಗಳೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಜಾರ್ಖಂಡ್‌ನ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಮನೆಯಿಂದ 350 ಕೋಟಿ ರೂಪಾಯಿ ಹಣ ಸಿಕ್ಕಿರುವುದು, ಕಾಂಗ್ರೆಸ್‌ ತನ್ನ ದೇಣಿಗೆ ವಿಚಾರದೊಂದಿಗೆ ದೇಶದ ಜನರ ಗಮನ ಬೇರೆಡೆ ಸೆಳೆಯಲು ಬಳಸಿಕೊಳ್ಳಲಾಗುತ್ತಿದೆ.  ಬಿಹಾರದಲ್ಲಿ ಶಿಕ್ಷಣವನ್ನು ಕೋಮುವಾದಗೊಳಿಸಿದ ನಂತರ, ಇಂಡಿ ಒಕ್ಕೂಟ ಸರ್ಕಾರವು ಈಗ ಅದನ್ನು ರಾಜಕೀಯಗೊಳಿಸಲು ಮುಂದಾಗಿದೆ.

ಕಾಂಗ್ರೆಸ್ ಉಗ್ರರನ್ನು ಬೆಂಬಲಿಸುತ್ತಿದೆ: ಕಾಂಗ್ರೆಸ್‌ಗೆ ಭಯೋತ್ಪಾದಕರನ್ನು ಬೆಂಬಲಿಸುವ ಹಳೆಯ ಅಭ್ಯಾಸವಿದೆ ಎಂದು ಆರೋಪಿಸಿದ ಪೂನಾವಾಲಾ, ಸಂಸತ್ ದಾಳಿಯ ಮಾಸ್ಟರ್‌ಮೈಂಡ್ ಉಗ್ರ ಅಫ್ಜಲ್ ಗುರುವನ್ನು ಸಮರ್ಥಿಸಿಕೊಂಡ ಪಕ್ಷ ಈಗ ಸಂಸತ್‌ ಮೇಲೆ ದಾಳಿ ಮಾಡಿದವರನ್ನು ಅಮಾಯಕರು ಎಂದು ಕರೆಯುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ. ಭಯೋತ್ಪಾದಕ ಯಾಕೂಬ್ ಮೆಮನ್ ಅವರನ್ನು ಬಡವನೆಂದು ಕರೆದು ಭಯೋತ್ಪಾದನೆಯನ್ನು ಸಮರ್ಥಿಸಿಕೊಂಡ ಪಕ್ಷ ಇದು. ಮುಂಬೈ ದಾಳಿ ಪಾಕಿಸ್ತಾನದ ಪಿತೂರಿಯಲ್ಲ, ಅದರೆ ಹಿಂದುಗಳ ಪಿತೂರಿ ಎಂದು ಕರೆದಿತ್ತು ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಪಡೆದ ದಿನದಿಂದಲೇ ಕಾಂಗ್ರೆಸ್‌ನಿಂದ ಭ್ರಷ್ಟಾಚಾರ: ಕಳೆದ 60 ವರ್ಷಗಳಿಂದ ದೇಶವನ್ನು ಲೂಟಿ ಮಾಡಿದ ಕಾಂಗ್ರೆಸ್ ಈಗ ದೇಶ ಉಳಿಸಲು ದೇಣಿಗೆ ಅಭಿಯಾನ ನಡೆಸುತ್ತಿದೆ. ಜೀಪ್ ಹಗರಣದಿಂದ ಅಗಸ್ಟಾವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣ, ನ್ಯಾಷನಲ್ ಹೆರಾಲ್ಡ್ ಹಗರಣದವರೆಗೆ 60 ವರ್ಷಗಳ ಕಾಲ ಕಾಂಗ್ರೆಸ್ ದೇಶದ ಜನರ ದುಡಿಮೆಯ ಹಣವನ್ನು ಲೂಟಿ ಮಾಡಿದೆ. "ದೇಶದಿಂದ ಲೂಟಿ" ಮಾಡುವ ಮೂಲಕ ಪ್ರಯಾಣಿಸುತ್ತಿರುವ ಕಾಂಗ್ರೆಸ್ ಪಕ್ಷವು ಈಗ ದೇಶದಿಂದ ದೇಣಿಗೆ ಕೇಳುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ಬೇಕಿದ್ದರೆ ಜಾರ್ಖಂಡ್‌ನ ಕಾಂಗ್ರೆಸ್ ಸಂಸದರ ಬಳಿ ಕೇಳಬೇಕಿತ್ತು. ಒಬ್ಬ ಸಂಸದನಿಂದ 350 ಕೋಟಿ ವಸೂಲಿ ಮಾಡಿರುವ ಕಾಂಗ್ರೆಸ್‌ ತನ್ನ 52 ಸಂಸದರಿಂದ ಎಷ್ಟು ಹಣವನ್ನು ವಸೂಲಿ ಮಾಡಿರಬಹುದು ಎಂದು ಕಾಂಗ್ರೆಸ್‌ ಮುಖಂಡ ಕೆಸಿ ವೇಣುಗೋಪಾಲ್‌ ಅವರೇ ಲೆಕ್ಕ ಹಾಕಬೇಕು ಎಂದಿದ್ದಾರೆ.

ಧೀರಜ್ ಸಾಹು ಅವರ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಮೌನವನ್ನು ಪ್ರಶ್ನಿಸಿದ ಪೂನಾವಾಲಾ, ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡರೂ ಅವರನ್ನು ರಾಜ್ಯಸಭೆಗೆ ಕಳಿಸಿದ್ದರ ಹಿಂದ ಉದ್ದೇಶ ಈಗ ಅರ್ಥವಾಗುತ್ತಿದೆ ಎಂದಿದ್ದಾರೆ. ಧೀರಜ್ ಸಾಹು ಅವರ ಐವರು ಸಹೋದರರಲ್ಲಿ ಕಾಂಗ್ರೆಸ್ ಪಕ್ಷವು ಹಿರಿಯ ಸಹೋದರನನ್ನು ಲೋಕಸಭೆಗೆ ಕಳುಹಿಸಿತು ಮತ್ತು ಇನ್ನೊಬ್ಬ ಸಹೋದರನನ್ನು ಕಾಂಗ್ರೆಸ್ ಪಕ್ಷವು ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿತು ಎಂದಿದ್ದಾರೆ.

ವಿವಾದಿತ ಹೇಳಿಕೆ ನೀಡಿ ಕೋರ್ಟ್ ವಿಚಾರಣೆಯಿಂದ ಗೈರಾದ ರಾಹುಲ್ ಗಾಂಧಿಗೆ ಯುಪಿ ಕೋರ್ಟ್ ಸಮನ್ಸ್!

ಕರ್ನಾಟಕದಲ್ಲಿ ಮಹಿಳಾ ಸುರಕ್ಷತೆಯ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಬೆಳಗಾವಿ ಘಟನೆ ನಮ್ಮ ಆತ್ಮಸಾಕ್ಷಿಯನ್ನು ಅಲ್ಲಾಡಿಸಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಬೇಕಿರುವ ಸ್ಥಿತಿ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರರು ಹೇಳಿದ್ದಾರೆ. ಈ ಘಟನೆಯು ದ್ರೌಪದಿಯ ವಸ್ತ್ರಾಪಹರಣಕ್ಕಿಂತಲೂ ನಾಚಿಕೆಗೇಡಿನ ಸಂಗತಿಯಾಗಿದೆ. ದಲಿತ ಮಹಿಳೆಯೊಬ್ಬಳನ್ನು ವಿವಸ್ತ್ರಗೊಳಿಸಿ ಲೈಂಗಿಕ ಕಿರುಕುಳ ನೀಡಿ ನಂತರ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಸಂತ್ರಸ್ತ ಮಹಿಳೆಯನ್ನು ಭೇಟಿ ಮಾಡಲು ಬಿಜೆಪಿಯ ಸತ್ಯಶೋಧನಾ ತಂಡ ಬೆಳಗಾವಿಗೆ ತಲುಪಿದೆ ಎಂದ ಪೂನಾವಾಲಾ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಬೆಳಗಾವಿಗೆ ಹೋಗಿ ಸಂತ್ರಸ್ತ ಮಹಿಳೆಯನ್ನು ಭೇಟಿ ಮಾಡುವುದು ಯಾವಾಗ? ಎಂದು ಪ್ರಶ್ನೆ ಮಾಡಿದರು.

ಭಾರತ್ ಜೋಡೋ ಮಾಡಿದ ಕಾಂಗ್ರೆಸ್‌ನಿಂದಲೇ ಇದೀಗ ಉತ್ತರ-ದಕ್ಷಿಣ ವಿಭಜನೆ ಕಿಡಿ!

 

Latest Videos
Follow Us:
Download App:
  • android
  • ios