ನವದೆಹಲಿ(ಡಿ.12): ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಸ್ಸಾಂನಲ್ಲಿ ಭಾರೀ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದೆ. 

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳ ಜನರೊಂದಿಗಿದ್ದು, ಪ್ರತಿಭಟನೆಯನ್ನು ಕೈ ಬಿಡುವಂತೆ ಪ್ರಧಾನಿ ಮೋದಿ ಮನವಿ ಮಾಡಿ ಟ್ವಿಟ್ ಮಾಡಿದ್ದಾರೆ.

CAB: ಕೇಂದ್ರ ಸಚಿವರ ಮನೆ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು!

ಆದರೆ ಪ್ರಧಾನಿ ಮೋದಿ ಟ್ವಿಟ್’ಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಇಂಟರ್’ನೆಟ್ ಸ್ಥಗಿತಗೊಂಡಿರುವ ಅಸ್ಸಾಂನಲ್ಲಿ ಮೋದಿ ಟ್ವಿಟ್ ಓದಲು ಸಾಧ್ಯವಿಲ್ಲ ಎಂದು ಕಿಚಾಯಿಸಿದೆ.

ಅಸ್ಸಾಂನಲ್ಲಿ ಸರ್ಕಾರ ಇಂಟರ್’ನೆಟ್ ಸ್ಥಗಿತಗೊಳಿಸಿದ್ದು, ಪ್ರತಿಭಟನಾಕಾರರು ಮೋದಿ ಮಾಡಿದ ಮನವಿಯ ಟ್ವಿಟ್ ಓದಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಕಾಲೆಳೆದಿದೆ.

ನೀವ್ಯಾರೂ ಹೆದರಬೇಕಿಲ್ಲ: ಈಶಾನ್ಯ ಜನತೆಗೆ ಮೋದಿ ಭರವಸೆ!

ಅಸ್ಸಾಂನ ನಮ್ಮ ಸಹೋದರ ಸಹೋದರಿಯರು ನಿಮ್ಮ ಟ್ವಿಟ್ ಓದಲು ಸಾಧ್ಯವಿಲ್ಲ. ಅಲ್ಲಿ ಇಂಟರ್’ನೆಟ್ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ನಮ್ಮ ಪ್ರಧಾನಿ ಮರೆತಂತಿದೆ..’ಎಂದು ಕಾಂಗ್ರೆಸ್ ಟ್ವಟ್ ಮಾಡಿದೆ.

ಸರಣಿ ಟ್ವೀಟ್’ಗಳ ಮೂಲಕ ಈಶಾನ್ಯ ರಾಜ್ಯಗಳ ಜನತೆಯನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ಪ್ರತಿಭಟನೆಯನ್ನು ಕೈಬಿಬಿಟ್ಟು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಪೌರತ್ವ ತಿದ್ದುಪಡಿ ಕಾಯ್ದೆ: ಈಶಾನ್ಯ ಧಗಧಗ