Congress Plenary Session: 52 ವರ್ಷವಾಯ್ತು ನಮಗಿನ್ನೂ ಸ್ವಂತ ಮನೆಯಿಲ್ಲ ಎಂದ ರಾಹುಲ್ ಗಾಂಧಿ!
ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ ಮುಕ್ತಾಯಗೊಂಡ 85ನೇ ಕಾಂಗ್ರೆಸ್ ಮಹಾಧಿವೇಶನದಲ್ಲಿ ರಾಹುಲ್ ಗಾಂಧಿ ಮಾತನಾಡಿದರು. ಈ ವೇಳೆ, ಕಳೆದ 50 ವರ್ಷಗಳಿಂದ ನಮಗೆ ಸ್ವಂತ ಮನೆಯಿಲ್ಲ ಎಂದು ಹೇಳಿದ್ದಾರೆ. ಇದನ್ನು ಕೇಳಿದ ತಕ್ಷಣ ಸೋನಿಯಾ ಗಾಂಧಿ ಕೂಡ ಭಾವುಕರಾಗಿದ್ದಾರೆ.
ನವದೆಹಲಿ (ಫೆ.26): ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ನ 85ನೇ ಅಧಿವೇಶನದ ಮೂರನೇ ಮತ್ತು ಕೊನೆಯ ದಿನದಂದು ರಾಹುಲ್ ಗಾಂಧಿ 32 ನಿಮಿಷಗಳ ಕಾಲ ಭಾಷಣ ಮಾಡಿದರು. ಭಾಷಣದಲ್ಲಿ ರಾಹುಲ್ ಭಾರತ್ ಜೋಡೋ ಯಾತ್ರೆ, ಅದಾನಿ ಹಿಂಡೆನ್‌ಬರ್ಗ್ ಪ್ರಕರಣ, ಚೀನಾ ವಿಚಾರದಲ್ಲಿ ಜೈಶಂಕರ್ ಹೇಳಿಕೆ ಮತ್ತು 2024 ರ ಲೋಕಸಭೆ ಚುನಾವಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ರಾಹುಲ್ ತಮ್ಮ ಭಾಷಣದಲ್ಲಿ 1977 ರ ಘಟನೆಯ ಬಗ್ಗೆ ಮಾತನಾಡಿದರು. ಅದೇ ವರ್ಷ ಅವರು ತಮಗೆ ಸ್ವಂತ ಮನೆ ಇಲ್ಲ ಎನ್ನುವುದು ಮೊದಲ ಬಾರಿಗೆ ಗೊತ್ತಾಗಿತ್ತು. ಇದಾಗಿ 52 ವರ್ಷ ಕಳೆದಿದೆ. ಈಗಲೂ ಕೂಡ ತಮಗೆ ಸ್ವಂತ ಮನೆ ಇಲ್ಲ ಎಂದು ಹೇಳಿದರೆ, ಇದನ್ನು ಕೇಳುತ್ತಿದ್ದ ಸೋನಿಯಾ ಗಾಂಧಿ ಕೂಡ ಭಾವುಕರಾದರು.
ಇಲ್ಲಿಯವರೆಗೂ ಸ್ವಂತ ಮನೆಯಿಲ್ಲ: ಅಧಿವೇಶನದಲ್ಲಿ ವಿವರವಾಗಿ ಮಾತನಾಡಿದ ರಾಹುಲ್ ಗಾಂಧಿ, ಈವರೆಗೂ ತಮಗೆ ಸ್ವಂತ ಮನೆ ಇಲ್ಲ ಎನ್ನುವ ವಿಚಾರವನ್ನು ತಿಳಿಸಿದರು. ಬಹುಶಃ 1977ರ ವರ್ಷ. ನನಗೆ 6 ವರ್ಷವಿರಬೇಕು. ಚುನಾವಣೆ ನಡೆಯುತ್ತಿತ್ತು. ಅಂದು ಇದರ ಮಹತ್ವದ ಬಗ್ಗೆ ಯಾವುದೇ ಅರಿವಿರಲಿಲ್ಲ. ಆದರೆ, ಮನೆಯಲ್ಲಿ ಒಂಥರಾ ಭಿನ್ನ ವಾತಾವರಣ ನಿರ್ಮಾಣವಾಗಿತ್ತು. ನಾನು ನನ್ನ ತಾಯಿಯ ಬಳಿ, 'ಏನಾಯ್ತು ಅಮ್ಮ' ಎಂದು ಕೇಳಿದ್ದೆ. ನಾವು ಈ ಮನೆಯನ್ನು ಖಾಲಿ ಮಾಡಬೇಕು ಎಂದು ಹೇಳಿದ್ದರು. ಅಲ್ಲಿಯವರೆಗೂ, ಆ ಮನೆಯನ್ನು ನಮ್ಮದೇ ಎಂದು ಭಾವಿಸಿಕೊಂಡಿದ್ದೆ. ನಾವೇಕೆ ಈ ಮನೆಯನ್ನು ಖಾಲಿ ಮಾಡಬೇಕು ಎಂದು ತಾಯಿಗೆ ಕೇಳಿದ್ದೆ. ಅದೇ ಮೊದಲ ಬಾರಿಗೆ ನನ್ನ ತಾಯಿ ಇದು ನಮ್ಮ ಮನೆಯಲ್ಲ ಎಂದು ಹೇಳಿದ್ದರು. ಇದು ಸರ್ಕಾರಿ ಮನೆ ಎಂದಿದ್ದರು. ಈಗ ನಾವು ಈ ಮನೆಯನ್ನು ಖಾಲಿ ಮಾಡಬೇಕು ಎಂದಿದ್ದರು. ನಾವು ಎಲ್ಲಿಗೆ ಹೋಗೋದು ಎಂದು ಕೇಳಿದಾಗ, ಎಲ್ಲಿಗೆ ಹೋಗೋದು ಎನ್ನುವುದು ನಮಗೂ ಕೂಡ ತಿಳಿದಿಲ್ಲ ಎಂದಿದ್ದರು. ನನಗೆ ಇದರಿಂದ ಅಚ್ಚರಿಯಾಗಿತ್ತು. ಯಾಕೆಂದರೆ, ನನ್ನ ಮನೆ ಎಂದುಕೊಂಡಿದ್ದ ಸ್ಥಳವನ್ನು ನಾವು ಖಾಲಿ ಮಾಡುತ್ತಿದ್ದೆವು. ಇದಾಗಿ 52 ವರ್ಷವಾಗಿದೆ ಇಂದಿಗೂ ಕೂಡ ನನಗೆ ಸ್ವಂತ ಮನೆಯಿಲ್ಲ ಎಂದು ತಿಳಿಸಿದ್ದಾರೆ.
'ಎಲ್‌ಎಸಿಗೆ ಸೇನೆಯನ್ನು ಕಳಿಸಿದ್ದು ಮೋದಿ, ರಾಹುಲ್ ಗಾಂಧಿ ಅಲ್ವಲ್ಲ..' ಕಾಂಗ್ರೆಸ್ ನಾಯಕನಿಗೆ ಜೈಶಂಕರ್ ತಿರುಗೇಟು!
ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ 4 ತಿಂಗಳು ಭಾರತ್ ಜೋಡೋ ಯಾತ್ರೆ ಮಾಡಿದೆವು. ನೀವು ವಿಡಿಯೋದಲ್ಲಿ ನನ್ನ ಮುಖವನ್ನು ನೋಡಿದ್ದೀರಿ, ಆದರೆ ಲಕ್ಷಾಂತರ ಜನರು ನಮ್ಮೊಂದಿಗೆ ನಡೆದರು. ನಾವು ಮಳೆ, ಬಿಸಲು ಮತ್ತು ಹಿಮದಲ್ಲಿ ಒಟ್ಟಿಗೆ ನಡೆದಿದ್ದೇವೆ. ಬಹಳಷ್ಟು ಕಲಿತಿದ್ದೇವೆ. ಪಂಜಾಬಿನಲ್ಲಿ ಒಬ್ಬ ಮೆಕ್ಯಾನಿಕ್ ಬಂದು ನನ್ನನ್ನು ಭೇಟಿಯಾಗಿದ್ದನ್ನು ನೀವು ನೋಡಿರಬೇಕು. ನಾನು ಅವನ ಕೈಯನ್ನು ಹಿಡಿದುಕೊಂಡೆ ಮತ್ತು ಅವನ ವರ್ಷಗಳ ತಪಸ್ಸು, ಅವನ ನೋವು ಮತ್ತು ದುಃಖವನ್ನು ನಾನು ಗುರುತಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಲಕ್ಷಗಟ್ಟಲೆ ಜನರೊಂದಿಗೆ ತ್ರಿವರ್ಣ ಧ್ವಜ ಹಾರಿಸಿದ್ದೇವೆ: ಪ್ರಧಾನಿ ನರೇಂದ್ರ ಮೋದಿ ಕೇವಲ 15-20 ಜನರೊಂದಿಗೆ ಶ್ರೀಮಗರದ ಲಾಲ್‌ಚೌಕದಲ್ಲಿ ತ್ರಿವರಣ ಧ್ವಜ ಹಾರಿಸಿದ್ದರು. ನಾವು ಹಾರಿಸುವ ವೇಳೆ ಲಕ್ಷಗಟ್ಟಲೆ ಜನರಿದ್ದರು ಎಂದು ರಾಹುಲ್ ಹೇಳಿದ್ದಾರೆ.
ರಾಹುಲ್ ಗಾಂಧಿ ವಿಮಾನ ಲ್ಯಾಂಡಿಂಗ್ ಅನುಮತಿ ನಿರಾಕರಣೆ, ಮತ್ತೊಮ್ಮೆ ಕಥೆ ಕಟ್ಟಿದ ಕಾಂಗ್ರೆಸ್!
ನಾನು ಸಂಸತ್ತಿನಲ್ಲಿ ಒಂದು ಫೋಟೋ ತೋರಿಸಿದ್ದೆ, ಅದರಲ್ಲಿ ಮೋದಿ ಅದಾನಿ ಜೊತೆ ವಿಮಾನದಲ್ಲಿ ಪ್ರಯಾಣ ಮಾಡಿದ್ದರು. ನಿಮ್ಮಿಬ್ಬರ ಸಂಬಂಧ ಏನು ಎಂದು ನಾನು ಕೇಳಿದೆ. ಇಡೀ ಸರ್ಕಾರ, ಎಲ್ಲಾ ಮಂತ್ರಿಗಳು ಅದಾನಿಯನ್ನು ಉಳಿಸುವಲ್ಲಿ ತೊಡಗಿದರು. ಅದಾನಿ ಮೇಲೆ ದಾಳಿ ಮಾಡಿದವನು ದೇಶದ್ರೋಹಿ, ಅದಾನಿ ದೇಶಭಕ್ತನಾದ. ಬಿಜೆಪಿ ಮತ್ತು ಸಂಘ ಆ ವ್ಯಕ್ತಿಯನ್ನು ರಕ್ಷಿಸುತ್ತಿದೆ. ನೀವು ಯಾಕೆ ರಕ್ಷಿಸುತ್ತಿದ್ದೀರಿ ಎಂಬುದು ನನ್ನ ಪ್ರಶ್ನೆ. ಸಾವಿರಾರು ಕೋಟಿ ರೂಪಾಯಿಗಳನ್ನು ಭಾರತಕ್ಕೆ ಕಳುಹಿಸುತ್ತಿರುವ ಈ ಶೆಲ್ ಕಂಪನಿಗಳು ಯಾರಿಗೆ ಸೇರಿದ್ದು? ಇದರಲ್ಲಿ ಯಾರ ಹಣವಿದೆ? ತನಿಖೆ ಏಕೆ ನಡೆಯುತ್ತಿಲ್ಲ? ಜೆಪಿಸಿ ಏಕೆ ರಚನೆಯಾಗುತ್ತಿಲ್ಲ ಎಂದು ರಾಹುಲ್ ಪ್ರಶ್ನೆ ಮಾಡಿದ್ದಾರೆ.