ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೊಟ್ಟೆ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ನಂತರ ಆರೋಗ್ಯ ಸುಧಾರಿಸಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Sonia Gandhi discharged from Sir Ganga Ram Hospital: ಸೋನಿಯಾ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಹೊಟ್ಟೆ ಸಮಸ್ಯೆಯಿಂದಾಗಿ ಗುರುವಾರ ಬೆಳಿಗ್ಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆ ಆಡಳಿತ ಮಂಡಳಿ ಪ್ರಕಾರ, ಸೋನಿಯಾ ಗಾಂಧಿ ಅವರಿಗೆ ಲಘುವಾದ ಹೊಟ್ಟೆ ಸೋಂಕು ಇದ್ದು, ನಿಯಮಿತ ತಪಾಸಣೆ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ವೈದ್ಯರು ತಂಡದ ಮೇಲ್ವಿಚಾರಣೆಯಲ್ಲಿ ಅವರಿಗೆ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಸದ್ಯ ಸೋನಿಯಾ ಗಾಂಧಿ ಅವರ ಆರೋಗ್ಯ ಸುಧಾರಿಸಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಸೋನಿಯಾ ಗಾಂಧಿಗೆ ಅನಾರೋಗ್ಯ, ದೆಹಲಿ ಗಂಗಾ ರಾಮ್ ಆಸ್ಪತ್ರೆಗೆ ದಾಖಲು
ಸೋನಿಯಾ ಗಾಂಧಿಗೆ ಕಾಡುತ್ತಿದೆ ಹೊಟ್ಟೆ ನೋವಿನ ಸಮಸ್ಯೆ?
ಅನಾರೋಗ್ಯದ ಕಾರಣ, ಸೋನಿಯಾ ಗಾಂಧಿ ಡಿಸೆಂಬರ್ 2024 ರಲ್ಲಿ ಕರ್ನಾಟಕದ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ (ಸಿಡಬ್ಲ್ಯೂಸಿ) ಹಾಜರಾಗಿರಲಿಲ್ಲ. ಸೆಪ್ಟೆಂಬರ್ 2024 ರಲ್ಲಿ, ಸೌಮ್ಯ ಜ್ವರದಿಂದಾಗಿ ಸೋನಿಯಾ ಗಾಂಧಿ ಅವರನ್ನು ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಯಿತು. ಮಾರ್ಚ್ 2024 ರಲ್ಲಿಯೂ ಸಹ, ಅನಾರೋಗ್ಯದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದಾಗ್ಯೂ, ಒಂದು ದಿನದ ನಂತರ ಅವರು ಸಂಪೂರ್ಣವಾಗಿ ಗುಣಮುಖರಾದರು.
ಸೋನಿಯಾ ಗಾಂಧಿ ಕೊನೆಯ ಬಾರಿಗೆ ಫೆಬ್ರವರಿ 13, 2025 ರಂದು ರಾಜ್ಯಸಭೆಯಲ್ಲಿ ಸಂಸತ್ತಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಬಳಿಕ ಅವರು ಜನವರಿ 15, 2025 ರಂದು ಪಕ್ಷದ ಹೊಸ ಪ್ರಧಾನ ಕಚೇರಿ ಇಂದಿರಾ ಭವನವನ್ನು ಉದ್ಘಾಟಿಸಿದ್ದರು. ಈ ಕಟ್ಟಡದ ನಿರ್ಮಾಣವು ಪಕ್ಷದ ಅಧ್ಯಕ್ಷರಾಗಿದ್ದಾಗ ಪ್ರಾರಂಭವಾಯಿತು. ಸೋನಿಯಾ ಗಾಂಧಿ ಅವರಿಗೆ ಡಿಸೆಂಬರ್ 2024 ರಲ್ಲಿ 78 ವರ್ಷ ತುಂಬಿತು.
