ನವದೆಹಲಿ(ಜ.25): ದ್ವಿರಾಷ್ಟ್ರ ಸಿದ್ಧಾಂತವನ್ನು ಮೊದಲ ಬಾರಿಗೆ ಪ್ರತಿಪಾದಿಸಿದ್ದು ವೀರ ಸಾವರ್ಕರ್ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಜೈಪುರ್ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಶಶಿ ತರೂರ್, ಹಿಂದೂಗಳು ಹಾಗೂ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಮೊದಲು ಮಂಡಿಸಿದ್ದು ವೀರ ಸಾವರ್ಕರ್  ಎಂದು ಅಭಿಪ್ರಾಯಪಟ್ಟರು.

ಭಾರತದಲ್ಲಿ ಹಿಂದೂಗಳು ಹಾಗೂ ಮುಸ್ಲಿಮರು ಒಟ್ಟಾಗಿ ಬಾಳಲು ಸಾಧ್ಯವಿಲ್ಲ. ಹೀಗಾಗಿ ಎರಡೂ ಸಮುದಾಯಗಳಿಗೆ ಪ್ರತ್ಯೇಕ ರಾಷ್ಟ್ರ ನಿರ್ಮಿಸುವುದು ಉತ್ತಮ ಮಾರ್ಗ ಎಂದು ಸಾವರ್ಕರ್ ವಾದಿಸಿದ್ದರು ಎಂದು ತರೂರ್ ಹೇಳಿದ್ದಾರೆ.

ಟುಕ್ಡೆ ಟುಕ್ಡೆ ಗ್ಯಾಂಗ್ ಇರೋದು ಸತ್ಯ ಎಂದ ತರೂರ್: ಆದರೆ....!

ಮುಸ್ಲಿಂ ಲೀಗ್ ತನ್ನ ಲಾಹೋರ್ ಸಮಾವೇಶದಲ್ಲಿ ಪ್ರತ್ಯೇಕ ಪಾಕಿಸ್ತಾನಕ್ಕೆ ಕರೆ ಕೊಟ್ಟ ಮೂರು ವರ್ಷಗಳ ಹಿಂದೆಯೇ ಸಾವರ್ಕರ್ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು ಎಂದು ತರೂರ್ ಹೇಳಿದ್ದಾರೆ.

ಸಾವರ್ಕರ್ ಹಾಗೂ ಜಿನ್ನಾ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಧರ್ಮದ ಆಧಾರದ ಮೇಲೆ ರಾಷ್ಟ್ರ ನಿರ್ಮಾಣದ ಗುರಿ ಹೊಂದಿದ್ದ ಅವರು, ಅಂತಿಮವಾಗಿ ದೇಶ ವಿಭಜನೆಗೆ ಕಾರಣವಾದರು ಎಂದು ತರೂರ್ ಆರೋಪಿಸಿದ್ದಾರೆ.