ಅಹಮದಾಬಾದ್(ಏ.15)‌: ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ನಡೆಸಿದ ಸಭೆಯಲ್ಲಿ ಬಾಗಿಯಾದ ಬೆನ್ನಲ್ಲೇ, ಕಾಂಗ್ರೆಸ್‌ ಶಾಸಕರೊಬ್ಬರು ಕೊರೋನಾಕ್ಕೆ ತುತ್ತಾದ ಘಟನೆ ಮಂಗಳವಾರ ನಡೆದಿದೆ.

ಈಶಾನ್ಯ ರಾಜ್ಯಗಳ ಜನರಿಗೆ ಸುಲಭಕ್ಕೆ ಕೊರೋನಾ ಬರೋದಿಲ್ಲ!

ಕೊರೋನಾಕ್ಕೆ ತುತ್ತಾಗಿರುವ ಕಾಂಗ್ರೆಸ್‌ ಶಾಸಕ ಇಮ್ರಾನ್‌ ಖೇಡಾವಾಲ ಅವರು ಶೀಘ್ರವೇ ಕೊರೋನಾ ವ್ಯಾಧಿಗೆ ಚಿಕಿತ್ಸೆ ನೀಡುವ ನಿರ್ದಿಷ್ಟ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಂಧಿನಗರದಲ್ಲಿರುವ ಸಿಎಂ ಅಧಿಕೃತ ನಿವಾಸದಲ್ಲಿ ಮಂಗಳವಾರ ನಡೆದ ಮುಖ್ಯಮಂತ್ರಿ ರೂಪಾನಿ ನಡೆಸಿದ ಸಭೆಯಲ್ಲಿ ಕೆಲ ಕಾಂಗ್ರೆಸ್‌ ಶಾಸಕರ ಜೊತೆ ಖೇಡಾವಾಲ ಅವರು ಸಹ ಭಾಗಿಯಾಗಿದ್ದರು.