ಉಭಯ ರಾಜ್ಯಗಳಲ್ಲಿ ಸೋಲಿಗೆ ಕಾರಣರಾದವರನ್ನು ಹೊಣೆ ಮಾಡುವ ನಿರ್ಧಾರವನ್ನು ಸಭೆ ತೆಗೆದುಕೊಂಡಿತಾದರೂ, ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಮತಗಳ ಅಂತರ ಬಹಳ ಹೆಚ್ಚಿಲ್ಲ. ಬಹಳ ಕಡೆ ಅತ್ಯಂತ ಕಡಿಮೆ ಅಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸೋತಿದ್ದಾರೆ ಎಂಬ ಪರಾಮರ್ಶೆ ಮಾಡಲಾಗಿದೆ.

ನವದೆಹಲಿ (ಡಿಸೆಂಬರ್ 10, 2023): ಇತ್ತೀಚಿನ ಪಂಚರಾಜ್ಯಗಳ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಸೋಲನ್ನಪ್ಪಿದ್ದ ಕಾಂಗ್ರೆಸ್‌, ರಾಜಸ್ಥಾನ ಮತ್ತು ಮಿಜೋರಾಂ ರಾಜ್ಯಗಳ ಸೋಲಿನ ಕುರಿತು ಶನಿವಾರ ಪರಾಮರ್ಶೆ ನಡೆಸಿದೆ. ಈ ವೇಳೆ ಈ ರಾಜ್ಯಗಳಲ್ಲಿ ಸೋತರೂ, ಗೆದ್ದವರು ಮತ್ತು ಸೋತವರ ನಡುವಿನ ಮತಗಳ ಅಂತರ ಬಹಳವಿಲ್ಲ ಎಂಬುದನ್ನು ಪ್ರಮುಖವಾಗಿ ಗಮನಿಸಿರುವ ಪಕ್ಷ, ಲೋಕಸಭಾ ಚುನಾವಣೆಗೆ ಸಜ್ಜಾಗಲು ನಿರ್ಧರಿಸಿದೆ.

Add Asianetnews Kannada as a Preferred SourcegooglePreferred

ಶನಿವಾರ ಇಲ್ಲಿ ರಾಜಸ್ಥಾನ ಮತ್ತು ಮಿಜೋರಾಂ ರಾಜ್ಯಗಳ ಪಕ್ಷದ ಹಿರಿಯರ ನಾಯಕರ ಜೊತೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ಪಕ್ಷದ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಈ ರಾಜ್ಯಗಳಲ್ಲಿನ ಕಾಂಗ್ರೆಸ್‌ ಉಸ್ತುವಾರಿಗಳು ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ಇಂಥದ್ದೊಂದು ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನು ಓದಿ: ಚುನಾವಣೆ ಗೆಲ್ಲಲು ಜನರ ಹೃದಯ ಗೆಲ್ಲಬೇಕು: ಪ್ರಧಾನಿ ಮೋದಿ

ಉಭಯ ರಾಜ್ಯಗಳಲ್ಲಿ ಸೋಲಿಗೆ ಕಾರಣರಾದವರನ್ನು ಹೊಣೆ ಮಾಡುವ ನಿರ್ಧಾರವನ್ನು ಸಭೆ ತೆಗೆದುಕೊಂಡಿತಾದರೂ, ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಮತಗಳ ಅಂತರ ಬಹಳ ಹೆಚ್ಚಿಲ್ಲ. ಬಹಳ ಕಡೆ ಅತ್ಯಂತ ಕಡಿಮೆ ಅಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸೋತಿದ್ದಾರೆ. 

ಜೊತೆಗೆ ಅಧಿಕಾರದಲ್ಲಿದ್ದಾಗಲೇ ನಡೆದ ಚುನಾವಣೆಯಲ್ಲಿ ಹಿಂದೆ ಯಾವುದೇ ಸಮಯಕ್ಕಿಂತ ಹೆಚ್ಚಿನ ಸ್ಥಾನಗಳು ಈ ಬಾರಿ ಲಭಿಸಿವೆ ಎಂಬ ಅಂಶವನ್ನು ರಾಜ್ಯದ ಕಾಂಗ್ರೆಸ್‌ ನಾಯಕರು ಸಭೆಯ ಗಮನಕ್ಕೆ ತಂದರು. ಅಲ್ಲದೆ ಲೋಕಸಭಾ ಚುನಾವಣೆಗೆ ಈಗಿನಿಂದಲೂ ಸಜ್ಜಾಗಿ ಗೆಲುವಿಗೆ ಶ್ರಮಿಸುವ ಭರವಸೆಯನ್ನು ರಾಜ್ಯ ನಾಯಕರು ಸಭೆಗೆ ನೀಡಿದರು ಎಂದು ಎಂದು ಪಕ್ಷದ ರಾಜಸ್ಥಾನ ಪ್ರಭಾರಿ ಸುಖಜಿಂದರ್‌ ಸಿಂಗ್‌ ರಂಧಾವಾ ಹೇಳಿದ್ದಾರೆ.

ಕಂತೆ ಕಂತೆ ನೋಟು ಸಿಕ್ಕಿದ್ದೇ ತಡ, ಧೀರಜ್‌ ಸಾಹು ಬ್ಯುಸಿನೆಸ್‌ ಗೊತ್ತೇ ಇಲ್ಲ ಎಂದ ಕಾಂಗ್ರೆಸ್‌!

ಬಿಜೆಪಿಗಿಂತ 10 ಲಕ್ಷ ಮತ ಮಾತ್ರ ಕಮ್ಮಿ:
ಇತ್ತೀಚಿಗೆ ನಡೆದ ಪಂಚರಾಜ್ಯ ಚುನಾವಣೆಯ ವೇಳೆ 5 ರಾಜ್ಯಗಳಲ್ಲಿ ಬಿಜೆಪಿ ಒಟ್ಟು 4,92,15,575 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ 4,81,64,849 ಮತ ಪಡೆದಿತ್ತು. ಅಂದರೆ ಎರಡೂ ಪಕ್ಷಗಳು ಪಡೆದ ಮತಗಳ ನಡುವಿನ ಅಂತರ ಕೇವಲ 10 ಲಕ್ಷ. ರಾಜಸ್ಥಾನದಲ್ಲಿ ಬಿಜೆಪಿ ಶೇ. 41.69 ರಷ್ಟು ಮತ ಪಡೆದಿದ್ದರೆ, ಕಾಂಗ್ರೆಸ್‌ 39.53 ರಷ್ಟು ಮತ ಪಡೆದಿತ್ತು. ಮಿಜೋರಾಂನಲ್ಲಿ ಬಿಜೆಪಿ ಶೇ. 5.06 ರಷ್ಟು ಮತ ಪಡೆದಿದ್ದರೆ, ಕಾಂಗ್ರೆಸ್‌ ಶೇ. 20.82 ರಷ್ಟು ಮತ ಪಡೆದಿತ್ತು.

ರಾಹುಲ್‌ ಗಾಂಧಿ ವಿದೇಶ ಪ್ರವಾಸ ರದ್ದು: I.N.D.IA. ಮೈತ್ರಿಕೂಟ ನಾಯಕರ ಆಕ್ಷೇಪಕ್ಕೆ ಮಣಿದ ಕೈ ನಾಯಕ!