'ರಾಷ್ಟ್ರಪತಿಗಳೇ ನೀವು ಚಮಚಾಗಿರಿ ಮಾಡ್ಬೇಡಿ'.. ಕಾಂಗ್ರೆಸ್ ನಾಯಕನ ಹೇಳಿಕೆಗೆ ಬಿಜೆಪಿ ಕಿಡಿ!
ರಾಷ್ಟ್ರಪತಿ ದ್ರೌಪದಿ ಮುರ್ಮು ಇತ್ತೀಚೆಗೆ ಗುಜರಾತ್‌ಗೆ ಎರಡು ದಿನಗಳ ಭೇಟಿಗೆ ತೆರಳಿದ್ದರು. ಈ ವೇಳೆ ಅವರು ಸಬರಮತಿ ಆಶ್ರಮಕ್ಕೆ ಆಗಮಿಸಿದ್ದ ಅವರು, ಮಹಾತ್ಮ ಗಾಂಧೀಜಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಇದಾದ ಬಳಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದ ಶೇ.76ರಷ್ಟು ಉಪ್ಪನ್ನು ಗುಜರಾತ್‌ನಲ್ಲಿ ತಯಾರಿಸಲಾಗುತ್ತದೆ. ದೇಶವಾಸಿಗಳೆಲ್ಲ ಗುಜರಾತಿನ ಉಪ್ಪನ್ನು ತಿನ್ನುತ್ತಾರೆ ಎಂದಿದ್ದರು
ನವದೆಹಲಿ (ಅ.6): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಉಪ್ಪಿನ ಕುರಿತಾದ ಹೇಳಿಕೆಗೆ ವಿವಾದಿತವಾಗಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ಉದಿತ್ ರಾಜ್ ವಿರುದ್ಧ ಬಿಜೆಪಿ ಮುಗಿ ಬಿದ್ದಿದೆ. ರಾಷ್ಟ್ರಪತಿಯವರ ಕುರಿತಾಗಿ ಉದಿತ್ ರಾಜ್ ಹೇಳಿರುವ ಮಾತುಗಳು ದುರದೃಷ್ಟಕರ ಎಂದಿರುವ ಬಿಜೆಪಿ ಇದಕ್ಕಾಗಿ ಕಾಂಗ್ರೆಸ್ ಪಕ್ಷವನ್ನೂ ಗುರಿ ಮಾಡಿಕೊಂಡಿದೆ.ಉದಿತ್ ರಾಜ್ ಈ ರೀತಿಯ ಪದಗಳನ್ನು ಬಳಸುತ್ತಿರುವುದು ಇದೇ ಮೊದಲಲ್ಲ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ. ಇದು ಉದಿತ್ ರಾಜ್ ಹಾಗೂ ಕಾಂಗ್ರೆಸ್‌ನ ಬುಡಕಟ್ಟು ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಇತ್ತೀಚೆಗೆ ಎರಡು ದಿನಗಳ ಕಾಲ ಗುಜರಾತ್‌ಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಸಬರಮತಿ ಆಶ್ರಮಕ್ಕೆ ಆಗಮಿಸಿದ್ದಲ್ಲದೆ, ಮಹಾತ್ಮ ಗಾಂಧೀಜಿ ಅವರಿಗೆ ಪುಷ್ಪ ನಮನ ಸಲ್ಲಿದ್ದರು. ಈ ವೇಳೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದ ಶೇ.76ರಷ್ಟು ಉಪ್ಪನ್ನು ಗುಜರಾತ್ ರಾಜ್ಯದಲ್ಲಿಯೇ ತಯಾರಿಸಲಾಗುತ್ತದೆ. ದೇಶವಾಸಿಗಳೆಲ್ಲ ಗುಜರಾತಿನ ಉಪ್ಪನ್ನು ತಿನ್ನುತ್ತಾರೆ ಎಂದು ಹೇಳಬಹುದು ಎಂದಿದ್ದರು. ದ್ರೌಪದಿ ಮುರ್ಮು ಜಿ ಅವರಂತಹ ರಾಷ್ಟ್ರಪತಿಗಳು ಯಾವ ದೇಶಕ್ಕೂ ಸಿಗಬಾರದು ಎಂದು ಕಾಂಗ್ರೆಸ್ ನಾಯಕ ಉದಿತ್ ರಾಜ್ ಟ್ವೀಟ್ ಮಾಡಿದ್ದಾರೆ.
ಚಮಚಾಗಿರಿಗೂ ತನ್ನ ಮಿತಿಯಿದೆ. ಶೇ.70ರಷ್ಟು ಜನರು ಗುಜರಾತ್ ನ ಉಪ್ಪನ್ನು ತಿನ್ನುತ್ತಾರೆ ಎಂದು ಹೇಳಿದ್ದಾರೆ. ಉಪ್ಪು ತಿಂದು ಜೀವನ ನಡೆಸಿದರೆ ಜೀವನ ಏನು ಅನ್ನೋದು ಗೊತ್ತಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.ಇದಾದ ನಂತರ ಉದಿತ್ ರಾಜ್ ಮತ್ತೊಂದು ಟ್ವೀಟ್ ಮಾಡಿದ್ದು, ನನ್ನ ಹೇಳಿಕೆ ದ್ರೌಪದಿ ಮುರ್ಮು ಅವರಿಗೆ ವೈಯಕ್ತಿಕವಾಗಿ ಮಾಡಿದ್ದು, ಇದು ಕಾಂಗ್ರೆಸ್ ಪಕ್ಷದದ್ದಲ್ಲ ಎಂದು ಹೇಳಿದರು. ದ್ರೌಪದಿ ಮುರ್ಮು (Droupadi Murmu) ಅವರನ್ನು ಅಭ್ಯರ್ಥಿಯನ್ನಾಗಿಸಿ ಆದಿವಾಸಿಗಳ ಹೆಸರಿನಲ್ಲಿ ಬಿಜೆಪಿ ಮತ ಕೇಳಿತು. ರಾಷ್ಟ್ರಪತಿಯಾದ (president) ನಂತರ ಆಕೆ ಆದಿವಾಸಿಯಾಗಿಯೇ ಉಳಿಯಲಿಲ್ಲವೇ? ದೇಶದ ರಾಷ್ಟ್ರಪತಿ ಆಗಿದ್ದರೆ, ಅವರು ಆದಿವಾಸಿಗಳ ಪ್ರತಿನಿಧಿಯೂ ಹೌದು. ಎಸ್‌ಸಿ/ಎಸ್‌ಟಿ ಹೆಸರಿನಲ್ಲಿ ಹುದ್ದೆಗೆ ಹೋದಾಗ ಅಳು ಬರುತ್ತದೆ ಮತ್ತು ನಂತರ ಅವರು ಮೌನವಾಗುತ್ತಾರೆ ಎಂದು ಬರೆದಿದ್ದಾರೆ.
ಅಧ್ಯಕ್ಷ ಮುರ್ಮು ಅವರಿಗೆ ಕಾಂಗ್ರೆಸ್ ನಾಯಕ ಉದಿತ್ ರಾಜ್ ಬಳಸಿರುವ ಪದಗಳು ಆತಂಕಕಾರಿ, ದುರದೃಷ್ಟಕರ ಎಂದು ಸಂಬಿತ್ ಪಾತ್ರ ಹೇಳಿದ್ದಾರೆ. ಅವರು ಇಂತಹ ಪದಗಳನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಕೂಡ ಇದೇ ರೀತಿ ಮಾಡಿದ್ದರು. ಇದು ಅವರ ಬುಡಕಟ್ಟು ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ. ಈ ಕುರಿತಾಗಿ ಕಾಂಗ್ರೆಸ್ ಪಕ್ಷ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. ಬಿಜೆಪಿಯ ಮಾಜಿ ಸಂಸದರಾಗಿರುವ ಉದಿತ್ ರಾಜ್ (Udit Raj), 2019ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದರು.
ಅಮ್ಮನ ಶೂ ಲೇಸ್ ಕಟ್ಟಿ ಟ್ರೋಲ್‌ಗೆ ಗುರಿಯಾದ ರಾಹುಲ್
ಇಂಥ ಮನಸ್ಥಿತಿಯನ್ನು ಕಾಂಗ್ರೆಸ್ ಒಪ್ಪಿಕೊಳ್ಳಲಿದೆಯೇ: ಬಿಜೆಪಿ ವಕ್ತಾರ ಶೆಹಜಾದ್ ಪೊನ್‌ವಾಲಾ ಕೂಡ ಈ ಕುರಿತಾಗಿ ಟ್ವೀಟ್ ಮಾಡಿದ್ದು, ದೇಶದ ಮೊದಲ ಮಹಿಳಾ ಆದಿವಾಸಿ ರಾಷ್ಟ್ರಪತಿಗೆ ಉದಿತ್ ರಾಜ್ ಈ ರೀತಿಯ ಭಾಷೆ ಬಳಕೆ ಮಾಡಿರುವುದು ತಪ್ಪು. ಆದಿವಾಸಿ ಸಮುದಾಯಕ್ಕೆ ಮಾಡಿರುವ ಅವಮಾವನ್ನು ಕಾಂಗ್ರೆಸ್ ಬೆಂಬಲಿಸುತ್ತದೆಯೇ ಎನ್ನುವುದು ನನ್ನ ಪ್ರಶ್ನೆ ಎಂದು ಟ್ವೀಟ್ ಮಾಡಿದ್ದಾರೆ.
ಅಮೆರಿಕಾದಲ್ಲಿ ಕಿಡ್ನ್ಯಾಪ್ ಆಗಿದ್ದ ಭಾರತೀಯರ ಶವಪತ್ತೆ: ಜನಾಂಗೀಯ ದ್ವೇಷಕ್ಕೆ ಬಲಿ?
ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಕಾಂಗ್ರೆಸ್ (Congress Leader) ನಾಯಕ ಉದಿತ್ ರಾಜ್ ವಿವಾದಾತ್ಮಕ ಹೇಳಿಕೆ ನೀಡಿದ ನಂತರ, ಈ ವಿಷಯ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಇದನ್ನು ಆದಿವಾಸಿ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಬಿಂಬಿಸುವ ಯತ್ನ ಮಾಡಿದೆ. ಭಾರತೀಯ ಜನತಾ ಪಕ್ಷವು (BJP) ಉದಿತ್ ರಾಜ್‌ಗೆ ತಿರುಗೇಟು ನೀಡಿ ಅವರನ್ನು ತುಕ್ಡೆ-ತುಕ್ಡೆ ಗ್ಯಾಂಗ್‌ನ ಸದಸ್ಯ ಎಂದು ಕರೆದರೆ, ಮತ್ತೊಂದೆಡೆ ರಾಷ್ಟ್ರೀಯ ಮಹಿಳಾ ಆಯೋಗವೂ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಉದಿತ್ ರಾಜ್ ಅವರ ವಿವಾದಾತ್ಮಕ ಹೇಳಿಕೆಗೆ ಉತ್ತರ ನೀಡುವಂತೆ ಮಹಿಳಾ ಆಯೋಗದ ಪರವಾಗಿ ನೋಟಿಸ್ ಕೂಡ ಕಳುಹಿಸಲಾಗಿದೆ.