ಅಮ್ಮನ ಶೂ ಲೇಸ್ ಕಟ್ಟಿ ಟ್ರೋಲ್‌ಗೆ ಗುರಿಯಾದ ರಾಹುಲ್
ಕಾಂಗ್ರೆಸ್‌ನ ಭಾರತ ಜೋಡೋ ಯಾತ್ರೆ ರಾಜ್ಯದಲ್ಲಿ ಸಂಚರಿಸುತ್ತಿದ್ದು, ಈ ಯಾತ್ರೆಯಲ್ಲಿ ಇಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕೂಡ ಭಾಗವಹಿಸಿದ್ದಾರೆ. ಯಾತ್ರೆಗೂ ಮೊದಲು ರಾಹುಲ್ ಗಾಂಧಿ ತಾಯಿ ಸೋನಿಯಾರ ಶೂ ಲೇಸ್ ಕಟ್ಟಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಟ್ರೋಲ್ ಆಗುತ್ತಿದೆ.
ಕಾಂಗ್ರೆಸ್‌ನ ಭಾರತ ಜೋಡೋ ಯಾತ್ರೆ ರಾಜ್ಯದಲ್ಲಿ ಸಂಚರಿಸುತ್ತಿದ್ದು, ಈ ಯಾತ್ರೆಯಲ್ಲಿ ಇಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕೂಡ ಭಾಗವಹಿಸಿದ್ದಾರೆ.
ಯಾತ್ರೆಗೂ ಮೊದಲು ರಾಹುಲ್ ಗಾಂಧಿ ತಾಯಿ ಸೋನಿಯಾರ ಶೂ ಲೇಸ್ ಕಟ್ಟಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಟ್ರೋಲ್ ಆಗುತ್ತಿದೆ.
ರಾಹುಲ್ ಗಾಂಧಿ ತಾಯಿ ಸೋನಿಯಾರ ಶೂ ಲೇಸ್ ಕಟ್ಟಿದ್ದ ಫೋಟೋವನ್ನು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾ ಎಂದು ಬರೆದು ಪ್ರೀತಿಯ ಚಿಹ್ನೆಯೊಂದಿಗೆ ಪೋಸ್ಟ್ ಮಾಡಿತ್ತು
ಆದರೆ ಹೀಗೆ ಕಾಂಗ್ರೆಸ್ ಫೋಟೊ ಶೇರ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಸಾಕಷ್ಟು ಟ್ರೋಲ್‌ನೊಂದಿಗೆ ಫೋಟೋ ವೈರಲ್ ಆಗಿದೆ. ಈ ಫೋಟೊ ಹಾಗೂ ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿಯ ಕಾಲನ್ನು ತೊಳೆಯುತ್ತಿರುವ ಫೋಟೋ ಇವೆರಡನ್ನು ಕೊಲಾಜ್ ಮಾಡಿ ಹೋಲಿಕೆ ಮಾಡಲಾಗುತ್ತಿದೆ.
ಪ್ರಧಾನಿ ತಮ್ಮ ತಾಯಿ ಕಾಲು ತೊಳೆದಾಗ ಕಾಂಗ್ರೆಸ್‌ನವರು ಅದನ್ನು ಪಬ್ಲಿಸಿಟಿ ಗಿಮಿಕ್ ಎಂದು ಹೇಳಿದ್ದರು. ಆದರೆ ಈಗ ಇದೇನು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಇನ್ನು ಈ ರಾಹುಲ್ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಮಂಡ್ಯದ ಬೆಳ್ಳಾಳುವಿನಿಂದ ಇಂದು ಆರಂಭವಾಗಿದ್ದು, ಈ ಯಾತ್ರೆಯಲ್ಲಿ ಇಂದು ಮಗ ರಾಹುಲ್ ಜೊತೆ ಸ್ವಲ್ಪ ದೂರದವರೆಗೆ ಸೋನಿಯಾ ಕೂಡ ಹೆಜ್ಜೆ ಹಾಕಿದ್ದಾರೆ.
ನಾಳೆ ಸಹೋದರಿ ಪ್ರಿಯಾಂಕಾ ಗಾಂಧಿ ಕೂಡ ಆಗಮಿಸಿ ಈ ಯಾತ್ರೆಯಲ್ಲಿ ಭಾಗವಹಿಸಲಿದ್ದು, ಈ ಮೂಲಕ ರಾಜ್ಯದಲ್ಲಿ ಇಡೀ ಗಾಂಧಿ ಕುಟುಂಬವೇ ಈ ಭಾರತ್ ಜೋಡೋ ಯಾತ್ರೆಗಾಗಿ ರಸ್ತೆಗಿಳಿದಂತಾಗಲಿದೆ. ಕಾಂಗ್ರೆಸ್‌ನ ರಾಷ್ಟ್ರಮಟ್ಟದ ಈ ಅಭಿಯಾನ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿದ್ದು, ಸೆಪ್ಟೆಂಬರ್ 30 ರಂದು ರಾಜ್ಯ ಪ್ರವೇಶಿಸಿತ್ತು. ಸೋನಿಯಾ ಗಾಂಧಿ ಈ ಸಮಾವೇಶದಲ್ಲಿ ಭಾಗವಹಿಸಿದ್ದು, ನಮ್ಮ ಹೆಮ್ಮೆ ಎಂದು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿಯರಾದ ಮೋಟಮ್ಮ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಹಲವರು ಸೋನಿಯಾ ಗಾಂಧಿಗೆ ರೇಶ್ಮೆ ಶಾಲು ಹೊದಿಸಿ, ಭಾರತ್ ಜೋಡೋ ಯಾತ್ರೆಗೆ ಶುಭ ಕೋರಿದರು.