ಸಂಸತ್ ವಿಶೇಷ ಕಲಾಪಕ್ಕೆ ಸೋನಿಯಾ 9 ಅಜೆಂಡಾ : ಪ್ರಧಾನಿಗೆ ಪತ್ರ
ಯಾವುದೇ ಅಜೆಂಡಾ ಸೂಚಿಸದೆ ಸೆ.18ರಿಂದ ಐದು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಟೀಕಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬುಧವಾರ ಪತ್ರ ಬರೆದಿದ್ದಾರೆ.

ನವದೆಹಲಿ: ಯಾವುದೇ ಅಜೆಂಡಾ ಸೂಚಿಸದೆ ಸೆ.18ರಿಂದ ಐದು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಟೀಕಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬುಧವಾರ ಪತ್ರ ಬರೆದಿದ್ದಾರೆ. ಇದೇ ವೇಳೆ, ಈ ವಿಶೇಷ ಅಧಿವೇಶನದಲ್ಲಿ ಮಣಿಪುರ (Manipur) ಸೇರಿ 9 ವಿಷಯಗಳ ಕುರಿತು ಚರ್ಚೆ ನಡೆಸುವಂತೆ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಯಾವುದೇ ರಾಜಕೀಯ ಪಕ್ಷಗಳ ಜತೆ ಚರ್ಚಿಸದೆ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಆ ಅಧಿವೇಶನದಲ್ಲಿನ ಅಜೆಂಡಾ ಕುರಿತು ನಮಗ್ಯಾರಿಗೂ (ಪ್ರತಿಪಕ್ಷಗಳು) ಮಾಹಿತಿಯೇ ಇಲ್ಲ. ಸರ್ಕಾರಕ್ಕೆ ಸಂಬಂಧಿಸಿದ ಕಲಾಪ ವ್ಯವಹಾರವನ್ನು ನಡೆಸಲು ವಿಶೇಷ ಅಧಿವೇಶನವನ್ನು ಆಯೋಜಿಸಲಾಗುತ್ತಿದೆ ಎಂದಷ್ಟೇ ಗೊತ್ತಾಗಿದೆ. ಈ ಅಧಿವೇಶನದಲ್ಲಿ ನಾವು ಖಂಡಿತವಾಗಿಯೂ ಭಾಗವಹಿಸುತ್ತೇವೆ. ಸಾರ್ವಜನಿಕವಾಗಿ ಮಹತ್ವವಾದ ವಿಷಯಗಳನ್ನು ಪ್ರಸ್ತಾಪಿಸಲು ನಮಗೆ ಈ ಅಧಿವೇಶನ ಮೂಲಕ ಸಮಯಾವಕಾಶ ಸಿಗುತ್ತದೆ. ಹೀಗಾಗಿ 9 ವಿಷಯಗಳ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಬೆನ್ನಲ್ಲೇ ತುರ್ತು ಕಾಂಗ್ರೆಸ್ ಸಭೆ ಕರೆದ ಸೋನಿಯಾ ಗಾಂಧಿ!
ಮಣಿಪುರ ಹಿಂಸಾಚಾರ, ಬೆಲೆ ಏರಿಕೆ, ಕೇಂದ್ರ- ರಾಜ್ಯಗಳ ಸಂಬಂಧ, ಕೋಮು ದಳ್ಳುರಿ, ಚೀನಾದ ಗಡಿ ಅತಿಕ್ರಮಣ, ಅದಾನಿ ಉದ್ದಿಮೆ ವ್ಯವಹಾರದ ವಹಿವಾಟು ಕುರಿತು ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚನೆ, ಕನಿಷ್ಠ ಬೆಂಬಲ ಬೆಲೆ, ನಿರುದ್ಯೋಗ, ಎಂಎಸ್‌ಎಂಇ ಬಿಕ್ಕಟ್ಟು ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಸೋನಿಯಾ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ಗುಸುಗುಸು ಬೆನ್ನಲ್ಲೇ ಸೋನಿಯಾ ಜತೆ ಶರ್ಮಿಳಾ ಭೇಟಿ