ಎಕ್ಸಿಟ್ ಪೋಲ್ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮೊದಲ ಪ್ರತಿಕ್ರಿಯೆ
Sonia Gandhi: ನಾವು 295ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಸೋನಿಯಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಕ್ಸಿಟ್ ಪೋಲ್ ಕುರಿತು ಪ್ರಶ್ನೆಗೆ ಉತ್ತರಿಸಿದ ಸೋನಿಯಾ ಗಾಂಧಿ, ಜೂನ್ 4ರಂದು ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎಂದು ಹೇಳಿದ್ದರು.
ನವದೆಹಲಿ: ಚುನಾವಣೋತ್ತರ ಸಮೀಕ್ಷೆ (Exit Poll) ಬಗ್ಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ (Congress Leader Sonia Gandhi) ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸೋನಿಯಾ ಗಾಂಧಿ, ಜೂನ್ 4ರಂದು ಅಚ್ಚರಿಯ ಫಲಿತಾಂಶಗಳಿಗೆ (Lok sabha Election Results) ಸಿದ್ಧರಾಗಿರಿ ಎಂದು ಹೇಳಿಕೆಯನ್ನು ನೀಡಿದ್ದಾರೆ. ಎಕ್ಸಿಟ್ ಪೋಲ್‌ಗಳು ಸುಳ್ಳು. ನಾವು 295ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಸೋನಿಯಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಕ್ಸಿಟ್ ಪೋಲ್ ಕುರಿತು ಪ್ರಶ್ನೆಗೆ ಉತ್ತರಿಸಿದ ಸೋನಿಯಾ ಗಾಂಧಿ, ಜೂನ್ 4ರಂದು ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎಂದು ಹೇಳಿದ್ದರು.
ಭಾನುವಾರ ರಾಹುಲ್ ಗಾಂಧಿ, ಇದೆಲ್ಲಾ ಬೋಗಸ್. ಇದು ಮೋದಿ ಮೀಡಿಯಾ ಪೋಲ್’ 295ಕ್ಕೂ ಹೆಚ್ಚು ಸ್ಥಾನಗಳಲ್ಲಿ ಐಎನ್‌ಡಿಐಎ ಕೂಟ ಗೆಲುವು ಕಾಣಲಿದೆ ಎಂದು ಹೇಳಿದ್ದರು. ನಿಮಗೆಲ್ಲಾ ಸಿಧು ಮೂಸೇವಾಲಾರ 295 ಹಾಡು ಗೊತ್ತಲ್ವಾ? ನಾವು ಕೂಡಾ ಈ ಬಾರಿ 295 ಸ್ಥಾನ ಗೆಲ್ಲುತ್ತೇವೆ. ಎಲ್ಲಾ ಎಕ್ಸಿಟ್ ಪೋಲ್‌ಗಳು ಮೋದಿ ಅವರದ್ದು ಎಂದು ವಾಗ್ದಾಳಿ ನಡೆಸಿದ್ದರು. ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಮೂರನೇ ಬಾರಿಯೂ ಎನ್‌ಡಿಎ ಸರ್ಕಾರ ರಚನೆ ಮಾಡಲಿದೆ ಎಂದು ಭವಿಷ್ಯ ನುಡಿದಿವೆ.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರತಿಕ್ರಿಯೆ
ಎಕ್ಸಿಟ್ ಪೋಲ್ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಎಕ್ಸಿಟ್ ಪೋಲ್ ಒಂದು ಸೈಕಾಲಜಿಕಲ್ ಮೆಥೆಡ್ ಮೇಲೆ ಅಂದಾಜು ಲೆಕ್ಕ ಹಾಕುವುದಾಗಿದೆ. ಜೂನ್ 4ರ ಫಲಿತಾಂಶ ಮತ್ತು ಎಕ್ಸಿಟ್ ಪೋಲ್ ಅಂಕಿ ಅಂಶಗಳಲ್ಲಿ ಹೆಚ್ಚು ವ್ಯತ್ಯಾಸ ಇರಲಿದೆ ಎಂದು ಹೇಳಿದ್ದಾರೆ.
ತಮ್ಮ ಮಾತು ಮುಂದುವರಿಸಿದ ಜೈರಾಮ್ ರಮೇಶ್, ಎಲ್ಲಾ ಎಕ್ಸಿಟ್ ಪೋಲ್ ಒಂದು ಪಕ್ಷಕ್ಕೆ ಸೀಮಿತವಾಗಿ ಕೆಲಸ ಮಾಡಿವೆ ಎಂದು ಆರೋಪಿಸಿದ್ದರು. ಜೂನ್ 4ರಂದು ನಿಶ್ಚಿತ ಫಲಿತಾಂಶವೇ ಹೊರ ಬೀಳಲಿದೆ. ಐಎನ್‌ಡಿಐಎ ಒಕ್ಕೂಟ ನಾಯಕರ ಸಭೆ ನಡೆದಿದ್ದು, ಇಲ್ಲಿ ಗೆಲ್ಲುವ ಕ್ಷೇತ್ರಗಳ ಕುರಿತು ಸುದೀರ್ಘವಾದ ಚರ್ಚೆ ನಡೆದಿವೆ. ಐಎನ್‌ಡಿಐಎ ಬ್ಲಾಕ್ 295ಕ್ಕಿಂತ ಕಡಿಮೆ ಬರಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷಿಣ ಭಾರತದಿಂದ ಬಿಜೆಪಿಗೆ ಸಿಗಲಿದೆ ಹೆಚ್ಚಿನ ಸ್ಥಾನ, ಮತಗಟ್ಟೆ ಸಮೀಕ್ಷೆಗೆ ಕಾಂಗ್ರೆಸ್ ಅಸಮಾಧಾನ!
ಕರ್ನಾಟಕದಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್
ಇತ್ತ ಕರ್ನಾಟಕದಲ್ಲಿ ಕಾಂಗ್ರೆಸ್ ಕೇವಲ ಒಂದಂಕಿಗೆ ಸೀಮಿತವಾಗಲಿದೆ ಎಂಬ ಎಕ್ಸಿಟ್ ಪೋಲ್ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್, ನಾವು ಡಬಲ್ ಡಿಜಿಟ್ ಬರುತ್ತೇವೆ ಎಂದು ಹೇಳಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ 70-80 ಸ್ಥಾನ ಮಾತ್ರ ಗಳಿಸಲಿವೆ ಎಂದಿದ್ದವು. ಆ ಸಮೀಕ್ಷೆಗಳು ಸುಳ್ಳಾದಂತೆ ಈಗಿನ ಸಮೀಕ್ಷೆಗಳೂ ಸುಳ್ಳಾಗಲಿವೆ. ನಾನು ಸ್ವಂತ ಮಾಡಿಸಿರುವ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಖಚಿತವಾಗಿ ಎರಡಂಕಿ ಫಲಿತಾಂಶ ದಾಖಲಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.