ಪ್ರಧಾನಿ ಮೋದಿಯವರು ಚುನಾವಣೆಗಳನ್ನು ಕೊನೆಗೊಳಿಸುತ್ತಾರೆ, ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತಾರೆ ಮತ್ತು ಅವರ ಆಡಳಿತದಲ್ಲಿ ದಲಿತರು ದೊಡ್ಡ ಆತಂಕವನ್ನು ಎದುರಿಸುತ್ತಾರೆ ಎಂದೂ ಮಧ್ಯಪ್ರದೇಶದ ಮಾಜಿ ಸಚಿವರು ಹೇಳುವುದನ್ನು ಕೇಳಬಹುದು.

ಮಧ್ಯಪ್ರದೇಶದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ರಾಜಾ ಪಟೇರಿಯಾ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮೋದಿಯನ್ನು ಕೊಲ್ಲಿ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋ ವೈರಲ್ ಆಗಿದೆ. ಸಮಾಜದಿಂದ ದುಷ್ಟತನವನ್ನು ತೆಗೆದುಹಾಕಲು ಮತ್ತು ಸಂವಿಧಾನವನ್ನು ರಕ್ಷಿಸಲು ಮೋದಿಯನ್ನು ಕೊಲ್ಲಲು ರಾಜಾ ಪಟೇರಿಯಾ ಜನರಿಗೆ ಹೇಳುವುದನ್ನು ಈ ವಿಡಿಯೋದಲ್ಲಿ ಕೇಳಬಹುದು. ಹಾಗೂ, ಪ್ರಧಾನಿ ಮೋದಿ ಸಮಾಜವನ್ನು ಒಡೆಯುತ್ತಿದ್ದಾರೆ ಎಂದೂ ವಿಡಿಯೋದಲ್ಲಿ ಅವರು ಆರೋಪಿಸಿದ್ದಾರೆ.

ಪ್ರಧಾನಿ ಮೋದಿಯವರು ಚುನಾವಣೆಗಳನ್ನು ಕೊನೆಗೊಳಿಸುತ್ತಾರೆ, ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತಾರೆ ಮತ್ತು ಅವರ ಆಡಳಿತದಲ್ಲಿ ದಲಿತರು ದೊಡ್ಡ ಆತಂಕವನ್ನು ಎದುರಿಸುತ್ತಾರೆ ಎಂದೂ ಮಧ್ಯಪ್ರದೇಶದ ಮಾಜಿ ಸಚಿವರು ಹೇಳುವುದನ್ನು ಕೇಳಬಹುದು. ಅಲ್ಲದೆ, ನೀವು ಮೋದಿಯನ್ನು ಕೊಲ್ಲಲು ಸಿದ್ಧರಾಗಿರಬೇಕು ಎಂದೂ ಹೇಳಿದ್ದಾರೆ.

ಇದನ್ನು ಓದಿ: ಪ್ರಧಾನಿ ಮೋದಿಯನ್ನು ರಾವಣನಿಗೆ ಹೋಲಿಸಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ: ಬಿಜೆಪಿ ತಿರುಗೇಟು

Scroll to load tweet…

ಆದರೆ, ಅವರ ಹೇಳಿಕೆಯ ವಿಡಿಯೋ ವೈರಲ್‌ ಆಗಿದ್ದು, ವಿವಾದ ಸೃಷ್ಟಿಯಾದ ನಂತರ, ಕಾಂಗ್ರೆಸ್ ನಾಯಕ ತಮ್ಮ ಕಾಮೆಂಟ್‌ಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮರ್ಥನೆ ನೀಡಿದ್ದಾರೆ. ಅವರನ್ನು ಸೋಲಿಸುವ ಅರ್ಥದಲ್ಲಿ ಕೊಲ್ಲಿ ಎಂದು ಹೇಳಿದ್ದೆ ಎಂದೂ ಹೇಳಿಕೊಂಡಿದ್ದಾರೆ. 

ಅಲ್ಲದೆ, ನಾನು ಗಾಂಧಿಯನ್ನು ನಂಬುವ ಮನುಷ್ಯ, ನಾನು ಈ ರೀತಿ ಮಾತನಾಡಲಾರೆ, ಸಂವಿಧಾನವನ್ನು ಉಳಿಸಲು ಮೋದಿಯನ್ನು ಸೋಲಿಸಬೇಕಾದ ರಾಜಕೀಯ ವಾತಾವರಣವನ್ನು ನಾನು ತಿಳಿದುಕೊಂಡಿದ್ದೇನೆ. ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳ ರಕ್ಷಣೆ ಮತ್ತು ನಿರುದ್ಯೋಗವನ್ನು ತೊಡೆದುಹಾಕಲು ಮೋದಿಯನ್ನು ಸೋಲಿಸುವುದು ಅವಶ್ಯಕ. ‘ಮೋದಿ ಹತ್ಯೆ’ಗೆ ಸಂಬಂಧಿಸಿದಂತೆ ನನ್ನ ಉದ್ದೇಶವನ್ನು ಸಂಪೂರ್ಣವಾಗಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. 

ಇದನ್ನೂ ಓದಿ: Assembly election: ದೇಶದಲ್ಲಿ ಕಾಂಗ್ರೆಸ್‌ ರೌಡಿಸಂ ಜನಕವಾಗಿದೆ ರವಿಕುಮಾರ್ ವಾಗ್ದಾಳಿ

ಕಾಂಗ್ರೆಸ್‌ ನಾಯಕನ ವಿರುದ್ಧ ಎಫ್‌ಐಆರ್‌..!
ಈ ಮಧ್ಯೆ, ಬಿಜೆಪಿ ನಾಯಕರು ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರನ್ನು ಮನವಿ ಮಾಡಿದರು ಮತ್ತು ನರೋತ್ತಮ್ ಮಿಶ್ರಾ ಅವರು ಈ ಸಂಬಂಧ ಎಫ್‌ಐಆರ್‌ ದಾಖಲಿಸಲು ಪನ್ನಾ ಪೊಲೀಸ್ ಠಾಣೆಗೆ ಆದೇಶಿಸಿದ್ದಾರೆ. ಹಾಗೂ, ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನರೋತ್ತಮ್‌ ಮಿಶ್ರಾ, ನಾನು ಪಟೇರಿಯಾ ಅವರ ಹೇಳಿಕೆಗಳನ್ನು ಕೇಳಿದ್ದೇನೆ, ಇದು ಮಹಾತ್ಮ ಗಾಂಧಿಯವರ ಕಾಂಗ್ರೆಸ್ ಅಲ್ಲ, ಇದು ಇಟಲಿಯ ಕಾಂಗ್ರೆಸ್ ಮತ್ತು ಇಟಲಿಯ ಮನಸ್ಥಿತಿ ಮುಸೊಲಿನಿಯದ್ದು ಎಂದು ಅವರಿಂದ ಸ್ಪಷ್ಟವಾಗಿದೆ. ಸ್ವರಾ ಭಾಸ್ಕರ್, ಕನ್ಹಯ್ಯ ಕುಮಾರ್, ರಾಹುಲ್ ಗಾಂಧಿಯವರ ಹಾದಿಯಲ್ಲಿ ನಡೆಯುತ್ತಿದ್ದಾರೆ. ರಾಜಾ ಪಟೇರಿಯಾ ವಿರುದ್ಧ ಕೂಡಲೇ ಎಫ್‌ಐಆರ್‌ ದಾಖಲಿಸುವಂತೆ ಎಸ್‌ಪಿಗೆ ಸೂಚನೆ ನೀಡುತ್ತಿದ್ದೇನೆ ಎಂದು ಅವರು ಹೇಳಿದರು. 

ಹಾಗೂ, ಇದು ಕಾಂಗ್ರೆಸ್‌ನ ಹತಾಶೆಯನ್ನು ಬಿಟ್ಟು ಬೇರೇನೂ ಅಲ್ಲ. ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ವಿರುದ್ಧ ಕೆಳಮಟ್ಟದ ಟೀಕೆಗಳನ್ನು ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯನ್ನು ರಾವಣನಿಗೆ ಹೋಲಿಸಿದ್ದರು. ಸೋನಿಯಾ ಗಾಂಧಿ ಅವರನ್ನು 'ಮೌತ್ ಕಾ ಸೌದಾಗರ್' ಎಂದು ಕರೆದಿದ್ದರು ಎಂದೂ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದರು. 

ಇದನ್ನೂ ಓದಿ: PM Modi Reply Ravana Jibe: ಕಾಂಗ್ರೆಸ್‌ ಎಂದಿಗೂ ರಾಮನನ್ನು ನಂಬಿಲ್ಲ, ನನ್ನ ನಿಂದನೆಗೆ ರಾವಣನ ತಂದಿದ್ದಾರೆ!