Assembly election: ದೇಶದಲ್ಲಿ ಕಾಂಗ್ರೆಸ್ ರೌಡಿಸಂ ಜನಕವಾಗಿದೆ ರವಿಕುಮಾರ್ ವಾಗ್ದಾಳಿ
ಕಾಂಗ್ರೆಸ್ ರಾವಣನ ಪಕ್ಷವಾಗಿದ್ದು, ರೌಡಿಸಂ ಜನಕವಾಗಿದೆ. ಉಗ್ರ ಕಸಬ್ ಗೆ ಬಿರಿಯಾನಿ ತಿನ್ನಿಸಿದ ಪಾರ್ಟಿಯಾಗಿದೆ. ಕಾಂಗ್ರೆಸ್ ತನ್ನ ಇತಿಹಾಸ ಓದಿಕೊಳ್ಳಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ನ.30): ನಮ್ಮದು ಶ್ರೀರಾಮ ಪಾರ್ಟಿಯಾಗಿದೆ. ಚಂದ್ರಶೇಖರ್ ಆಜಾದ್, ವಾಜಪೇಯಿ ಅವರ ಪಕ್ಷವಾಗಿದೆ. ಇನ್ನು ಕಾಂಗ್ರೆಸ್ ರಾವಣನ ಪಕ್ಷವಾಗಿದೆ. ಕಾಂಗ್ರೆಸ್ ರೌಡಿಸಂ ಜನಕವಾಗಿದೆ. ರಾಜ್ಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ನಲಪಾಡ್ ಯಾರು ? ಕಾಂಗ್ರೆಸ್ ಪಕ್ಷ ಸದ್ದಾಂ ಹುಸೇನ್, ಟ್ಟಿಪ್ಪುವಿನ ಪಕ್ಷವಾಗಿದೆ. ಉಗ್ರ ಕಸಬ್ ಗೆ ಬಿರಿಯಾನಿ ತಿನ್ನಿಸಿದ ಪಾರ್ಟಿಯಾಗಿದೆ. ಕಾಂಗ್ರೆಸ್ ತನ್ನ ಇತಿಹಾಸ ಓದಿಕೊಳ್ಳಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿ ಸಂಸದರನ್ನು ಕರೆಸಿ ಉದ್ಘಾಟಿಸಿದ್ದ ರೌಡಿಶೀಟರ್ ಸೈಲೆಂಟ್ ಸುನೀಲ್ ಬಿಜೆಪಿ ಸೇರಿಲ್ಲ. ಆದರೆ, ಮಂಡ್ಯದ ಫೈಟರ್ ರವಿ ಸೇರಿದ್ದಾರೆ. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವರದಿ ಕೇಳಿದ್ದಾರೆ. ಜೊತೆಗೆ, ಕ್ರಿಮಿನಲ್ ಹಿನ್ನಲೆಯುಳ್ಳವರನ್ನು ಪಾರ್ಟಿಗೆ ಸೇರಿಸಲ್ಲ ಎಂದಿದ್ದಾರೆ. ಹೀಗಾಗಿ, ನಾವು ಇಂತವರನ್ನು ಬೆಂಬಲಿಸುವುದಿಲ್ಲ.
ಕೊತ್ವಾಲ್‌ನ ನೆಚ್ಚಿನ ಶಿಷ್ಯ! ಕಾಂಗ್ರೆಸ್ ರಾಜ್ಯಾಧ್ಯಕ್ಷರ 'ಆ ದಿನಗಳು' ಮರೆತಿದೆಯಾ?
ಕಾಂಗ್ರೆಸ್ ಬಿಜೆಪಿ ಹತ್ತಿರ ಬರೋದಕ್ಕೂ ಸಾಧ್ಯವಿಲ್ಲ. ಬಿಜೆಪಿ ಪವಿತ್ರ ಧ್ಯೇಯ ಹೊಂದಿರುವ ಪಕ್ಷವಾಗಿದ್ದು, ಜನಸಂಘದ ಕಾಲದಿಂದ ಇಲ್ಲಿತನಕ ದೇಶಕ್ಕಾಗಿ ಗಂಧದಂತೆ ತೇಯುತ್ತಿದೆ. ಪಂಜಾಬ್ ನಲ್ಲಿ ಭಯೋತ್ಪಾದನೆ ಶುರು ಮಾಡಿದ್ದು ಯಾರು? ಕಾಗ್ರೆಸ್ ಒಂದು ಕಾಲದಲ್ಲಿ ರೌಡಿಸಂ ನಿಂದ ಭೂತ್ ಕ್ಯಾಪ್ಚರ್ ಮಾಡುತ್ತಿತ್ತು. ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ಭೂತ್ ಕ್ಯಾಪ್ಚರ್ ಮಾಡುತ್ತಿದ್ದರು. ಇಂತವರು ನಮ್ಮ ಪಾರ್ಟಿಗೆ ರೌಡಿಸಂ ಪಾರ್ಟಿ ಎನ್ನುತ್ತಾರಾ? ಎಂದು ವಾಗ್ದಾಳಿ ನಡೆಸಿದರು.
ಮಲ್ಲಿಕಾರ್ಜುನ ಖರ್ಗೆ ದೃತರಾಷ್ಟ್ರ: ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಮಗನ ಮೇಲಿನ ಪ್ರೀತಿಗಾಗಿ ಕಲಬುರಗಿ ಜಿಲ್ಲೆಯನ್ನು ಹಾಳು ಮಾಡಿದ್ದಾರೆ. ಅವರು ದೃತರಾಷ್ಟ್ರನಂತೆ ಆಗಿದ್ದಾರೆ. ಮಗನ ಮೇಲಿನ ಪ್ರೀತಿಗಾಗಿ ಬೇರೆಯವರನ್ನು ಕೂಡ ಮಂತ್ರಿ ಮಾಡಲಿಲ್ಲ. ಇವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ರಾವಣ ಎನ್ನುತ್ತಾರೆ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಹೇಗೆ ಮಾತಾಡಬೇಕು ಗೊತ್ತಿಲ್ಲವೇ? ಈ ಬಗ್ಗೆ ಕೂಡಲೇ ಮಲ್ಲಿಕಾರ್ಜುನ ಖರ್ಗೆ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.