ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಯ್ನಾಡ್‌ ಕಚೇರಿ ಧ್ವಂಸ ಮಾಡಿದ ಎಸ್ಎಫ್ಐ!

ರಾಹುಲ್ ಗಾಂಧಿ ಅವರ ವಯ್ನಾಡ್‌ ಕಚೇರಿಯ ಗೋಡೆಯನ್ನು ಹತ್ತಿ ಅದನ್ನು ಧ್ವಂಸಗೊಳಿಸಿದ ಗೂಂಡಾಗಳು ಎಸ್‌ಎಫ್‌ಐ ಧ್ವಜಗಳನ್ನು ಹಿಡಿದಿದ್ದರು ಎಂದು ಭಾರತೀಯ ಯುವ ಕಾಂಗ್ರೆಸ್ ಟ್ವೀಟ್‌ನಲ್ಲಿ ಆರೋಪಿಸಿದೆ.

Congress Leader Rahul Gandhis Wayanad office vandalised Party blames SFI Kerala san

ವಯ್ನಾಡ್ (ಜೂನ್ 24): ಕಲ್ಪೆಟ್ಟಾ ಬಳಿಯ ಕೈನಟ್ಟಿಯಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಕಚೇರಿಯನ್ನು ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಕಾರ್ಯಕರ್ತರು ಶುಕ್ರವಾರ ಧ್ವಂಸಗೊಳಿಸಿದ್ದಾರೆ. 

ಕಾಂಗ್ರೆಸ್ ನಾಯಕ (Congress Leader) ರಾಹುಲ್ ಗಾಂಧಿ (Rahul Gandhi) ಅವರ ವಯ್ನಾಡ್ (Wayanad ) ಕಚೇರಿಯ ಗೋಡೆಗಳನ್ನು ಹತ್ತಿ ಅದನ್ನು ಧ್ವಂಸಗೊಳಿಸಿದ ವ್ಯಕ್ತಿಗಳು ಗೂಂಡಾಗಳು, ಅವರು ಎಸ್‌ಎಫ್‌ಐ (SFI) ಧ್ವಜಗಳನ್ನು ಹಿಡಿದಿದ್ದರು ಎಂದು ಭಾರತೀಯ ಯುವ ಕಾಂಗ್ರೆಸ್ ( Indian Youth Congress) ಟ್ವೀಟ್‌ನಲ್ಲಿ ಆರೋಪಿಸಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿಗಳ ವಿಭಾಗವಾದ ಎಸ್‌ಎಫ್‌ಐ ನಡೆಸಿದ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರ ಗುಂಪೊಂದು ಲೋಕಸಭಾ ಸದಸ್ಯರ ಕಚೇರಿಗೆ ನುಗ್ಗಿ ಧ್ವಂಸಗೊಳಿಸಿದೆ. 

ಕೇರಳದ ಗುಡ್ಡಗಾಡು ಪ್ರದೇಶಗಳಲ್ಲಿ ಅರಣ್ಯದ ಸುತ್ತ ಬಫರ್ ವಲಯಗಳನ್ನು ರಚಿಸುವುದನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸುತ್ತಿತ್ತು. "ಇದು ಪೊಲೀಸರ ಸಮ್ಮುಖದಲ್ಲಿ ನಡೆದಿದೆ. ಇದು ಸಿಪಿಎಂ ನಾಯಕತ್ವದ ಸ್ಪಷ್ಟ ಪಿತೂರಿಯಾಗಿದೆ. ಕಳೆದ ಐದು ದಿನಗಳಿಂದ ಇಡಿ ಅವರನ್ನು (ರಾಹುಲ್ ಗಾಂಧಿ) ಪ್ರಶ್ನಿಸಿದೆ. ನರೇಂದ್ರ ಮೋದಿ ಅವರ ರೀತಿ ಕೇರಳದ ಸಿಪಿಐ (ಎಂ) ಕೂಡ ಅವರ ಮೇಲೆ ಯಾಕೆ ಮುಗಿಬಿದ್ದಿದೆ ಎನ್ನುವುದು ಅರ್ಥವಾಗುತ್ತಿಲ್ಲ.  ಈ ಕುರಿತಾಗಿ ಸೀತಾರಾಂ ಯೆಚೂರಿ  ಅವರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ ಪಕ್ಷದ ಕಚೇರಿ ಧ್ವಂಸಕ್ಕೆ ಪ್ರತಿಕ್ರಿಯಿಸಿದ್ದಾರೆ.
 

 

"ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ವೇಣುಗೋಪಾಲ್ ಸೇರಿಸಿದ್ದಾರೆ. ಈ ನಡುವೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಯ್ನಾಡ್‌ನಲ್ಲಿರುವ ರಾಹುಲ್ ಗಾಂಧಿ ಕಚೇರಿ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ. ನಮ್ಮ ನಾಡಿನಲ್ಲಿ ಪ್ರಜಾಸತ್ತಾತ್ಮಕ ಪ್ರತಿಭಟನೆ, ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ.ಆದರೆ ದಾಳಿಯ ಹಾದಿ ತುಳಿದಿರುವುದು ತಪ್ಪು, ಆರೋಪಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ವಿಜಯನ್ ಹೇಳಿದ್ದಾರೆ.

'ರಾಹುಲ್ ಗಾಂಧಿಗೆ ವಿನಾಕಾರಣ ಕಿರುಕುಳ, ಬಿಜೆಪಿಯವ್ರ ವಿರುದ್ಧ ತನಿಖೆ ಯಾಕಿಲ್ಲ?'

ಕಾಂಗ್ರೆಸ್ ಸಂಸದರ ಕಚೇರಿಯಲ್ಲಿ ನಡೆದ ಧ್ವಂಸ ಘಟನೆಯ ವಿಡಿಯೋ ಕೂಡ ಹೊರಬಿದ್ದಿದೆ. ವಯನಾಡ್‌ನಲ್ಲಿರುವ ಕಾಂಗ್ರೆಸ್ ಸಂಸದರ ಕಚೇರಿಯ ಕಿಟಕಿಗಳನ್ನು ಶುಕ್ರವಾರ ಮಧ್ಯಾಹ್ನ ಕೆಲವರು ಹತ್ತಿ ಧ್ವಂಸಗೈದಿರುವುದು ಕಂಡುಬಂದಿದೆ. ಕೆಲವರು ಕೈಯಲ್ಲಿ ಎಸ್‌ಎಫ್‌ಐ ಬಾವುಟ ಹಿಡಿದು ಕಚೇರಿಯೊಳಗೆ ತಲುಪಿದರು. ಅಲ್ಲಿ ಈ ಜನರು ಘೋಷಣೆಗಳನ್ನು ಕೂಗಿದರು ಮತ್ತು ವಸ್ತುಗಳನ್ನು ಪಡೆದುಹಾಕಿದ್ದಾರೆ. ರಾಹುಲ್ ಗಾಂಧಿ ಕಚೇರಿ ಮೇಲಿನ ದಾಳಿಗೆ ಕೇರಳ ಮುಖ್ಯಮಂತ್ರಿಯೇ ಹೊಣೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕೇರಳದಲ್ಲಿ ಅರಾಜಕತೆ ಹಬ್ಬಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಬೀವಿ ಆರೋಪಿಸಿದರು. ಇಂತಹ ಕಿಡಿಗೇಡಿಗಳಿಗೆ ಕೇರಳದ ಮುಖ್ಯಮಂತ್ರಿ ಏಕೆ ರಕ್ಷಣೆ ನೀಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ರಾಹುಲ್ ವಿಚಾರಣೆಗೆ ಪ್ರತಿಭಟನೆ, ಪೊಲೀಸರ ಮೇಲೆ ಉಗುಳಿದ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ!

ಇದು ರಾಹುಲ್ ಗಾಂಧಿ ಕಚೇರಿ ಮೇಲೆ ಪೂರ್ವ ಯೋಜಿತ ದಾಳಿ ಎಂದು ಕೇರಳ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಟಿ ಸಿದ್ದಿಕಿ ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಮುಖ್ಯಮಂತ್ರಿ ಪಿ ವಿಜಯನ್ ಅವರನ್ನು ಪ್ರಶ್ನೆ ಮಾಡಿದರು. ಕೇರಳದ ವಯ್ನಾಡ್‌ ಸಂಸರಾಗಿರುವ ರಾಹುಲ್ ಗಾಂಧಿ, ಇತ್ತೀಚೆಗೆ, ಸುಪ್ರೀಂ ಕೋರ್ಟ್ ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳ ಸುತ್ತಲಿನ ಒಂದು ಕಿಲೋಮೀಟರ್ ಪ್ರದೇಶವನ್ನು ಪರಿಸರ-ಸೂಕ್ಷ್ಮ ವಲಯ (ESZ) ಎಂದು ಘೋಷಿಸಿದೆ. ಈ ನಿರ್ಧಾರದಿಂದ ಕುಪಿತಗೊಂಡಿರುವ ಈ ಜನರು ಈ ಬಗ್ಗೆ ರಾಹುಲ್ ಗಾಂಧಿ ಮೌನ ಮುರಿಯಬೇಕು ಎಂದು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios