Asianet Suvarna News Asianet Suvarna News

Congress to TMC:ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸೇರಿದ ಕಾಂಗ್ರೆಸ್ ನಾಯಕ ಕೀರ್ತಿ ಅಜಾದ್!

  • ಸುಶ್ಮಿತಾ, ಫಲೈರೋ ಬೆನ್ನಲ್ಲೇ ಮತ್ತೊರ್ವ ಕಾಂಗ್ರೆಸ್ ನಾಯಕ ಟಿಎಂಸಿಗೆ
  • ಕೀರ್ತಿ ಅಜಾದ್‌ರನ್ನು ಪಕ್ಷಕ್ಕೆ ಸ್ವಾಗತಿಸಿದ ಮಮತಾ ಬ್ಯಾನರ್ಜಿ
  • ಬಿಜೆಪಿ ವಿರುದ್ಧ ಹೋರಾಟಕ್ಕೆ ಮಮತಾ ನಾಯಕತ್ವದ ಅಗತ್ಯವಿದೆ ಎಂದ ಕೀರ್ತಿ
Congress leader Kirti Azad JDU Expelled Pavan Varma joins Trinamool Congress presence of Mamata Banerjee ckm
Author
Bengaluru, First Published Nov 23, 2021, 9:30 PM IST

ನವೆದೆಹಲಿ(ನ.23): ಪಶ್ಚಿಮ ಬಂಗಾಳ  ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಮೂಲಕ ಮತ್ತೆ ಅಧಿಕಾರಕ್ಕೇರಿದ ಮಮತಾ ಬ್ಯಾನರ್ಜಿ(Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್(Trinamool Congress) ಪಕ್ಷದತ್ತ ಇತರ ಪಕ್ಷದ ನಾಯಕರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್(Congress) ನಾಯಕರು ಒಬ್ಬರ ಹಿಂದೊಬ್ಬರು ಟಿಎಂಸಿ ಸೇರಿಕೊಳ್ಳುತ್ತಿದ್ದಾರೆ. ಇದೀಗ ಕೀರ್ತಿ ಅಜಾದ್ ಸರದಿ. ಕಳೆದ ಹಲವು ತಿಂಗಳಿನಿಂದ ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದ ಕೀರ್ತಿ ಅಜಾದ್ ಇಂದು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ.

ನವದೆಹಲಿಯಲ್ಲಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಕೀರ್ತಿ ಅಜಾದ್(Kirti Azad) ಟಿಎಂಸಿ ಸೇರಿಕೊಂಡಿದ್ದಾರೆ. ಕೀರ್ತಿ ಅಜಾದ್ ಜೊತೆ ಜೆಡಿಯು ಪಕ್ಷದಿಂದ ಉಚ್ಚಾಟಿತ ನಾಯಕ ಪವನ್ ವರ್ಮಾ(Pavan Varma) ಕೂಡ ಟಿಎಂಸಿ ಸೇರಿಕೊಂಡಿದ್ದಾರೆ. 2019ರಲ್ಲಿ ಕಾಂಗ್ರೆಸ್ ತೊರೆದಿದ್ದ ಅಶೋಕ್ ತನ್ವರ್ ಕೂಜ ಇವರೊಂದಿಗೆ ಟಿಎಂಸಿ(TMC) ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮಮತಾ ಬ್ಯಾನರ್ಜಿ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ತೀವ್ರ ಸವಾಲೊಡ್ಡಲು ತಯಾರಿ ನಡೆಸುತ್ತಿದ್ದಾರೆ. 

ಟೆನ್ನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಹಾಗೂ ನಟಿ ಟಿಎಂಸಿ ಸೇರ್ಪಡೆ

ಅಸ್ಸಾಂ ಕಾಂಗ್ರೆಸ್ ನಾಯಕ ಸುಶ್ಮಿತಾ ದೇವ್ ಇತ್ತೀಚಿಗೆ ಟಿಎಂಸಿ ಸೇರಿಕೊಂಡಿದ್ದರು. ಗೋವಾದ ಕಾಂಗ್ರೆಸ್ ಮಾಡಿ ನಾಯಕ ಲಯಿಝ್ಹಿನೋ ಫಲೈರೋ ಟಿಎಂಸಿ ಸೇರಿಕೊಂಡಿದ್ದರು. ಇದೀಗ ಕೀರ್ತಿ ಅಜಾದ್ ಕೂಡ ಟಿಎಂಸಿ ಸೇರಿಕೊಂಡಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರು ಒಬ್ಬೊಬ್ಬರಾಗಿ ಟಿಎಂಸಿ ಸೇರಿಕೊಳ್ಳುತ್ತಿದ್ದಾರೆ.  

ಪಶ್ಚಿಮ ಬಂಗಾಳ(West Bengal) ಸೇರಿದಂತೆ ಅಂತಾರಾಷ್ಟ್ರೀಯ ಗಡಿ ಹಾದುಹೋಗುವ ರಾಜ್ಯಗಳಲ್ಲಿ BSF ಪಡೆಯನ್ನು ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ. ಈ ನಿರ್ಧಾರ ಹಾಗೂ ತ್ರಿಪುರಾ ಹಿಂಸಾಚಾರ ಕುರಿತು ಕೆಲ ಮಹತ್ವದ ಮಾತುಕತೆಗಾಗಿ ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಚಳಿಗಾಲದ ಅಧಿವೇಶನಕ್ಕೂ ಮುನ್ನ  ಪ್ರಧಾನಿ ನರೇಂದ್ರ ಮೋದಿಯನ್ನು(Narendra Modi) ಭೇಟಿಯಾಗಿ ಮಹತ್ವದ ಮಾತುಕತೆ ನಡಡೆಸಲಿದ್ದಾರೆ. ಹೀಗಾಗಿ ದೆಹಲಿಯಲ್ಲಿರುವ ಮಮತಾ ಬ್ಯಾನರ್ಜಿ ಕೀರ್ತಿ ಅಜಾದ್ ಸೇರಿದಂತೆ ಮೂವರು ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ತೃಣಮೂಲ ಕಾಂಗ್ರೆಸ್‌ನಿಂದ ಗೋವಾ ಚುನಾವಣೆಯಲ್ಲಿ ಸ್ಪರ್ಧೆ ಇಂಗಿತ

ಬಿಹಾರ(Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ ಆಪ್ತ ಸಲಹೆಗಾರಾಗಿದ್ದ ಪವನ್ ಪರ್ಮಾರನ್ನು ಜೆಡಿಯು ಪಕ್ಷ ವಿರೋಧಿ ಚಟುವಟಿಕೆ ಕಾರಣದಿಂದ ಉಚ್ಚಾಟನೆ ಮಾಡಿತ್ತು. ಸದ್ಯದ ರಾಜಕೀಯ ಪರಿಸ್ಥಿತಿ ಹಾಗೂ ದೇಶದಲ್ಲಿ ಮಮತಾ ಬ್ಯಾನರ್ಜಿ ಹೊಸ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಮಮತಾ ಬ್ಯಾನರ್ಜಿ ನಾಯಕತ್ವ ಪಶ್ಚಿಮ ಬಂಗಾಳಕ್ಕೆ ಮಾತ್ರ ಸೀಮಿತವಾಗಿಲ್ಲ. 2024ರ ಲೋಕಸಭಾ ಚುನಾವಣೆ ಬಳಿಕ ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಸರ್ಕಾರ ರಚಿಸಲಿದ್ದಾರೆ ಎಂದು ಪವನ್ ವರ್ಮಾ ಹೇಳಿದ್ದಾರೆ.

ಪವನ್ ವರ್ಮಾರನ್ನು ಪಕ್ಷಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ. ಪವನ್ ವರ್ಮಾ ಅನುಭವ, ದೇಶವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ನೆರವಾಗಲಿದೆ ಎಂದು ಟಿಎಂಸಿ ಹೇಳಿದೆ. ಇತ್ತ ಬಿಹಾರದಿಂದ ಮೂರು ಬಾರಿ ಸಂಸದನಾಗಿ ಆಯ್ಕೆಯಾಗಿರುವ ಕೀರ್ತಿ ಅಜಾದ್ ಇದೀಗ ಟಿಎಂಸಿಯಲ್ಲಿ ನೆಲೆ ಕಂಡುಕೊಂಡಿದ್ದಾರೆ.ನಾನು ಕ್ರೀಡಾಪಟು, ನನಗೆ ಧರ್ಮ ಮುಖ್ಯವಲ್ಲ. ಉತ್ತಮ ಸಮಾಜಕ್ಕಾಗಿ ಹೋರಾಟುತ್ತೇನೆ ಎಂದು  ಮಾಜಿ ಕ್ರಿಕೆಟಿಗ ಕೀರ್ತಿ ಅಜಾದ್ ಹೇಳಿದ್ದಾರೆ.

ಕಾಂಗ್ರೆಸ್‌ನಿಂದಾಗಿ ಮೋದಿ ಬಲಶಾಲಿ: ದೀದಿ ಭವಿಷ್ಯ

ದೇಶಕ್ಕೆ ಮಮತಾ ಬ್ಯಾನರ್ಜಿ ನಾಯಕತ್ವ ಅವಶ್ಯಕತೆ ಇದೆ ಎಂದು ಕೀರ್ತಿ ಅಜಾದ್ ಹೇಳಿದ್ದಾರೆ. 1983ರ ವಿಶ್ವಕಪ್ ವಿಜೇತ ತಂಡದ  ಸದಸ್ಯ ಕೀರ್ತಿ ಅಜಾದ್ ಕ್ರಿಕೆಟ್‌ಗೆ ವಿದಾಯ ಹೇಳಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿಕೊಂಡಿದ್ದರು. ಅಂದು ರಾಹುಲ್ ಗಾಂಧಿ ನಾಯಕತ್ವ ದೇಶಕ್ಕೆ ಅಗತ್ಯವಿದೆ. ನನ್ನ ಸಿದ್ಧಾಂತ ಹಾಗೂ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಉತ್ತಮ ಎಂದಿದ್ದರು. ಇದೀಗ ಹೇಳಿಕೆಯನ್ನು ಕೊಂಚ ಬದಲಾಯಿಸಿದ್ದಾರೆ. ರಾಹುಲ್ ಹೆಸರಿನ ಬಳಿ ಮಮತಾ ಬ್ಯಾನರ್ಜಿ ಹೆಸರು ಹೇಳಿದ್ದಾರೆ. ಇನ್ನುಳಿದ ಹೇಳಿಕೆಗಳ ಅರ್ಥ ಒಂದೇ ಆಗಿದೆ. ಪದಗಳು ಮಾತ್ರ ಬದಲಾಗಿದೆ.

ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿನ ಭ್ರಷ್ಟಾಚಾರ ವಿಚಾರದಲ್ಲಿ  ಅರುಣ್ ಜೇಟ್ಲಿ ಟಾರ್ಗೆಟ್ ಮಾಡಿದ ಕಾರಣಕ್ಕೆ ಬಿಜೆಪಿ ಕೀರ್ತಿ ಅಜಾದ್‌ರನ್ನು ಉಚ್ಚಾಟಿಸಿತ್ತು. ಇದೀಗ ಕಾಂಗ್ರೆಸ್‌ ತೊರೆದಿರು ಕೀರ್ತಿ ಅಜಾದ್ ವಿರುದ್ಧ ಕಾಂಗ್ರೆಸ್ ಟೀಕಿಸಿದೆ. ಅವಕಾಶವಾದಿಗಳು, ಚುನಾವಣೆ ಹಾಗೂ ಸ್ಥಾನಮಾನಕ್ಕೆ ಕಾಯುತ್ತಿರುತ್ತಾರೆ. ಸಂದರ್ಭ ಬಳಸಿಕೊಂಡು ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ ಎಂದಿದೆ.
 

Follow Us:
Download App:
  • android
  • ios