Asianet Suvarna News Asianet Suvarna News

ಜೈ ಶ್ರೀರಾಮ್ ಘೋಷಣೆ ಕೂಗಿದ ಕಾಂಗ್ರೆಸ್ ಮಾಜಿ ಸಿಎಂ ಕಮಲ್ ನಾಥ್, ಮತ್ತೆ ಗೊಂದಲ ಸೃಷ್ಟಿಸಿದ ನಡೆ!

ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಇದರ ನಡುವೆ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಕಾಂಗ್ರೆಸ್ ರ್‍ಯಾಲಿಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
 

Congress Former CM Kamal Nath chants Jai Shree Ram slogan at Madhya pradesh Rally ckm
Author
First Published Apr 20, 2024, 4:09 PM IST

ಇಂದೋರ್(ಏ.20) ಇಂಡಿಯಾ ಒಕ್ಕೂಟ ಮೂಲಕ ಮತ್ತೆ ಅಧಿಕಾರಕ್ಕೇರಲು ಹವಣಿಸುತ್ತಿರುವ ಕಾಂಗ್ರೆಸ್ ಚುನಾವಣೆ ಗೆಲ್ಲಲು ಕಸರತ್ತು ನಡೆಸುತ್ತಿದೆ. ಇದರ ನಡುವೆ ಮಧ್ಯಪ್ರದೇಶ ಮಾಜಿ ಸಿಎಂ, ಕಾಂಗ್ರೆಸ್ ಆಪ್ತ ಕಮಲ್ ನಾಥ್ ನಡೆ ಕಾಂಗ್ರೆಸ್‌ಗೆ ಆತಂಕ ತರುತ್ತಿದೆ. ಕಳೆದ ಫೆಬ್ರವರಿಯಲ್ಲಿ ಕಮಲ್ ನಾಥ್ ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಬಳಿಕ ತಮ್ಮ ಮನೆಯ ಮೇಲ್ಬಾಗದಲ್ಲಿ ಜೈ ಶ್ರೀರಾಮ್ ಧ್ವಜ ಹಾರಿಸಿದ್ದರು. ಇದೀಗ ಕಾಂಗ್ರೆಸ್ ರ್‍ಯಾಲಿಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. 

ಬೀತುಲ್‌ನಲ್ಲಿ ಆಯೋಜಿಸಿದ ರ್‍ಯಾಲಿಯಲ್ಲಿ ಮಾತನಾಡಿದ  ಕಮಲ್ ನಾಥ್ ಜೈ ಶ್ರೀರಾಮ್ ಘೋಷಣೆ ಮೊಳಗಿಸಿದ್ದಾರೆ. ಇಷ್ಟೇ ಅಲ್ಲ ನೆರೆದಿದ್ದ ಜನರು ಕೂಡ ಒಕ್ಕೊರಲಿನಿಂದ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಸಮಾವೇಶದಲ್ಲಿ ಜೈ ಶ್ರೀರಾಮ್ ಘೋಷಣೆಗಳು ಮೊಳಗುವುದು ವಿರಳ. ಆದರೆ ಕೆಲ ನಾಯಕರು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಆದರೆ ಕಮಲ್ ನಾಥ್ ಈ ಬಾರಿ ಜೈಶ್ರೀರಾಮ್ ಘೋಷಣೆ ಕೂಗಿ, ಜನರನ್ನು ಘೋಷಣೆ ಕೂಗುವಂತೆ ಪ್ರೇರೆಪಿಸಿರುವುದು ಇದೀಗ ಗೊಂದಲಕ್ಕೆ ಕಾರಣಾಗಿದೆ.

Breaking: ಬಿಜೆಪಿಗೆ ಹೋಗೋದಿಲ್ಲ ಕಮಲ್‌ನಾಥ್‌, ಕಾಂಗ್ರೆಸ್‌ ಹೈಕಮಾಂಡ್‌ಗೆ ತಿಳಿಸಿದ ಹಿರಿಯ ನಾಯಕ!

ಕಳೆದ ಫೆಬ್ರವರಿಯಲ್ಲಿ ಕಮಲ್ ನಾಥ್ ಬಿಜೆಪಿ ಸೇರಲಿದ್ದಾರೆ ಅನ್ನೋ ಮಾತುಗಳು ದಟ್ಟವಾಗಿ ಕೇಳಿಬಂದಿತ್ತು. ಇಷ್ಟೇ ಅಲ್ಲ ಕಾಂಗ್ರೆಸ್ ನಾಯಕರಿಂದ ಅಂತರ ಕಾಯ್ದುಕೊಂಡಿದ್ದರು. ಇದೇ ವೇಳೆ ಕಮಲ್ ನಾಥ್ ತಮ್ಮ ಮನೆ ಮೇಲೆ ಶ್ರೀರಾಮನ ಬಾವುಟ ಹಾರಿಸಿದ್ದರು. ಇದು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತು. ಪರಿಸ್ಥಿತಿ ತಿಳಿಗೊಳ್ಳುತ್ತಿದ್ದಂತೆ ಕಮಲ್ ನಾಥ್ ಮನೆ ಮೇಲೆ ಹಾಕಿದ್ದ ಶ್ರೀರಾಮ ಬಾವುಟ ತೆಗೆದಿದ್ದರು. ಇದೀಗ ಜೈ ಶ್ರೀರಾಮ್ ಘೋಷಣೆ ಮೊಳಗಿಸುವ ಮೂಲಕ ಮತ್ತೆ ಕಮಲ್ ನಾಥ್ ಬಿಜೆಪಿ ಸೇರುವ ಸೂಚನೆ ನೀಡಿದ್ದಾರಾ ಅನ್ನೋ ಚರ್ಚೆಗಳು ಶುರುವಾಗಿದೆ. 

ಒಂದೆಡೆ ಕಮಲ್ ನಾಥ್ ಭಾಷಣ ಸಂಚಲನ ಸೃಷ್ಟಿಸಿದರೆ ಮತ್ತೊಂದೆಡೆ ಮಧ್ಯಪ್ರದೇಶ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. ಶಾಸಕ ಹರಿ ವಲ್ಲಬ ಶುಕ್ಲಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ಮುಖ್ಯಮಂತ್ರಿ ಮೋಹನ್ ಯಾದವ್ ಸಮ್ಮುಖದಲ್ಲಿ ಶಾಸಕ ಬಿಜೆಪಿ ಸೇರಿಕೊಂಡಿದ್ದಾರೆ.ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿಕೊಳ್ಳುತ್ತಿದ್ದರೆ, ಇತ್ತ ಕಮಲ್ ನಾಥ್ ನಡೆ ಮತ್ತೆ ಕುತೂಹಲ ಮೂಡಿಸುವಂತೆ ಮಾಡಿದೆ.

ಮಧ್ಯ ಪ್ರದೇಶ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಕಮಲ್ ನಾಥ್, ಪುತ್ರ ನಕುಲ್ ಬಿಜೆಪಿ ಸೇರ್ಪಡೆ ಸಾಧ್ಯತೆ!

Follow Us:
Download App:
  • android
  • ios