ಕಾಂಗ್ರೆಸ್‌ನ '48,20,69,00,00,000 ರೂ. ಭ್ರಷ್ಟಾಚಾರ’ದ ಬಗ್ಗೆ ವಿಡಿಯೋ ರಿಲೀಸ್ ಮಾಡಿದ ಬಿಜೆಪಿ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು 2ಜಿ ಹಗರಣ, ಕಲ್ಲಿದ್ದಲು ಹಗರಣ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ವಿವಿಧ ಹಗರಣಗಳಲ್ಲಿ ಭಾಗಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.

congress files bjps video campaign to target party over corruption ash

ಹೊಸದೆಹಲಿ (ಏಪ್ರಿಲ್‌ 2, 2023): ಕೇಂದ್ರದ ಆಡಳಿತಾರೂಢ ಬಿಜೆಪಿ ಇಂದು ಯುಪಿಎ ಸರ್ಕಾರದ ಅವಧಿಯಲ್ಲಿ ಅತಿರೇಕದ ಭ್ರಷ್ಟಾಚಾರವನ್ನು ಆರೋಪಿಸುವ ಸರಣಿ ವಿಡಿಯೋದೊಂದಿಗೆ ಕಾಂಗ್ರೆಸ್ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದೆ. "ಕಾಂಗ್ರೆಸ್ ಫೈಲ್ಸ್" ಎಂಬ ವಿಡಿಯೋ ಸರಣಿಯ ಮೊದಲ ಸಂಚಿಕೆಯನ್ನು ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಪೋಸ್ಟ್‌ ಮಾಡಿದೆ. 

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು 2ಜಿ ಹಗರಣ, ಕಲ್ಲಿದ್ದಲು ಹಗರಣ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ವಿವಿಧ ಹಗರಣಗಳಲ್ಲಿ ಭಾಗಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರಿರುವ 3 ನಿಮಿಷಗಳ ವಿಡಿಯೋ ಕ್ಲಿಪ್, ಯುಪಿಎ ಅವಧಿಯಲ್ಲಿ ನಡೆದಿದೆ ಎನ್ನಲಾದ ₹ 48,20,69,00,00,000 ಮೌಲ್ಯದ ಹಗರಣಗಳನ್ನು ಪಟ್ಟಿ ಮಾಡಿದೆ.

‘ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ’ ಎಂಬ ಶೀರ್ಷಿಕೆಯ ವಿಡಿಯೋ ಸಂದೇಶದಲ್ಲಿ ಬಿಜೆಪಿ, “ಕಾಂಗ್ರೆಸ್ ತನ್ನ 70 ವರ್ಷಗಳ ಆಡಳಿತದಲ್ಲಿ ಸಾರ್ವಜನಿಕರಿಂದ ₹48,20,69,00,00,000 ಲೂಟಿ ಮಾಡಿದೆ. ಆ ಹಣವನ್ನು ಭದ್ರತೆ ಮತ್ತು ಅಭಿವೃದ್ಧಿಯ ಹಲವು ಉಪಯುಕ್ತ ಕ್ಷೇತ್ರಗಳಿಗೆ ಬಳಸಿಕೊಳ್ಳಬಹುದಿತ್ತು’’ ಎಂದು ಆರೋಪ ಮಾಡಿದೆ. 

ಇದನ್ನು ಓದಿ: ದೇಶ ವಿಭಜನೆ ತಪ್ಪೆಂದು ಈಗ ಪಾಕಿಸ್ತಾನ ಜನತೆಗೆ ಅರಿವಾಗಿದೆ: ಮೋಹನ್‌ ಭಾಗವತ್‌

‘ಜನರ ಕಷ್ಟಪಟ್ಟು ದುಡಿದ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ’
ಜನರು ಕಷ್ಟಪಟ್ಟು ದುಡಿದ ಹಣವನ್ನು ಕಾಂಗ್ರೆಸ್ 48,20,69,00,00,000 ರೂ. ಲೂಟಿ ಮಾಡಿದೆ ಎಂದು ವಿಡಿಯೋದಲ್ಲಿ ಬಿಜೆಪಿ ಆರೋಪಿಸಿದೆ.  ಈ ಪೈಕಿ 1.86 ಲಕ್ಷ ಕೋಟಿ ರೂ ಮೌಲ್ಯದ ಕಲ್ಲಿದ್ದಲು ಹಗರಣವನ್ನೂ ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ.

'24 ಐಎನ್‌ಎಸ್ ವಿಕ್ರಾಂತ್ ಖರೀದಿಸಬಹುದಿತ್ತು'
₹ 48 ಟ್ರಿಲಿಯನ್‌ 20 ಬಿಲಿಯನ್‌ 69 ಕೋಟಿಯಲ್ಲಿ ಭದ್ರತೆಯಿಂದ ಹಿಡಿದು ದೇಶದ ಅಭಿವೃದ್ಧಿಯವರೆಗೆ ಅನೇಕ ಕೆಲಸಗಳನ್ನು ಮಾಡಬಹುದಿತ್ತು ಎಂದು ಬಿಜೆಪಿ ಹೇಳಿಕೊಂಡಿದೆ. "ಇಷ್ಟು ಮೊತ್ತವನ್ನು ಬಳಸಿ, 24 ಐಎನ್‌ಎಸ್ ವಿಕ್ರಾಂತ್, 300 ರಫೇಲ್ ಜೆಟ್‌ಗಳು ಮತ್ತು 1,000 ಮಂಗಲ್ ಮಿಷನ್‌ಗಳನ್ನು ತಯಾರಿಸಬಹುದು ಅಥವಾ ಖರೀದಿಸಬಹುದಾಗಿತ್ತು. ಆದರೆ ದೇಶವು ಕಾಂಗ್ರೆಸ್‌ನ ಭ್ರಷ್ಟಾಚಾರದ ವೆಚ್ಚವನ್ನು ಭರಿಸಬೇಕಾಗಿತ್ತು ಮತ್ತು ಅದು ಪ್ರಗತಿಯ ಓಟದಲ್ಲಿ ಹಿಂದುಳಿದಿದೆ," ಎಂದು ವಿಡಿಯೋ ಸಂದೇಶವನ್ನು ಸೇರಿಸಲಾಗಿದೆ.

ಇದನ್ನೂ ಓದಿ: ಶಿಕ್ಷೆ ಪ್ರಶ್ನಿಸಲು ರಾಹುಲ್‌ ಗಾಂಧಿ ರೆಡಿ: ಮೋದಿ ಉಪನಾಮ ಟೀಕೆ ಕೇಸಲ್ಲಿ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲು ಸಿದ್ಧತೆ

ಕಲ್ಲಿದ್ದಲು, 2ಜಿ ತರಂಗಾಂತರ ಮತ್ತು ಸಿಡಬ್ಲ್ಯೂಜಿ ಹಗರಣದ ಪ್ರಸ್ತಾಪ
ಕಳೆದ 10 ವರ್ಷಗಳ ಕಾಂಗ್ರೆಸ್ ಸರ್ಕಾರದ ಅವಧಿಯನ್ನು ಉಲ್ಲೇಖಿಸಿದ ಬಿಜೆಪಿ, ವಿವಿಐಪಿ ಹೆಲಿಕಾಪ್ಟರ್ ಖರೀದಿಯಲ್ಲಿ ಅಗಸ್ಟಾ ವೆಸ್ಟ್‌ಲ್ಯಾಂಡ್ ಸಿಇಒ 350 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಆರೋಪಿಸಿದೆ. ‘‘ಕಲ್ಲಿದ್ದಲು ಹಗರಣ ₹1.86 ಲಕ್ಷ ಕೋಟಿ, 2ಜಿ ಸ್ಪೆಕ್ಟ್ರಂ ಹಗರಣ ₹1.76 ಲಕ್ಷ ಕೋಟಿ, ಎಂಎನ್‌ಆರ್‌ಇಜಿಎ ₹10 ಲಕ್ಷ ಕೋಟಿ, ಕಾಮನ್‌ವೆಲ್ತ್ ₹70 ಸಾವಿರ ಕೋಟಿ, ಇಟಲಿ ಜತೆಗಿನ ಹೆಲಿಕಾಪ್ಟರ್ ಡೀಲ್‌ನಲ್ಲಿ ₹362 ಕೋಟಿ ಲಂಚ, ₹12 ಕೋಟಿ ಲಂಚ ರೈಲ್ವೆ ಮಂಡಳಿಯ ಅಧ್ಯಕ್ಷರಿಗೆ" ಎಂದು ಬಿಜೆಪಿ ಹೇಳಿಕೊಂಡಿದೆ.

Latest Videos
Follow Us:
Download App:
  • android
  • ios