ಶಿಕ್ಷೆ ಪ್ರಶ್ನಿಸಲು ರಾಹುಲ್‌ ಗಾಂಧಿ ರೆಡಿ: ಮೋದಿ ಉಪನಾಮ ಟೀಕೆ ಕೇಸಲ್ಲಿ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲು ಸಿದ್ಧತೆ

ಕಳೆದ ಲೋಕಸಭಾ ಚುನಾವಣೆ ವೇಳೆ ಕರ್ನಾಟಕದ ಕೋಲಾರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ರಾಹುಲ್‌ ಗಾಂಧಿ, ಮೋದಿ ಹೆಸರು ಇಟ್ಟುಕೊಂಡವರೆಲ್ಲ ಏಕೆ ಕಳ್ಳರೇ ಆಗಿರುತ್ತಾರೆ ಎಂದು ಪ್ರಶ್ನಿಸಿದ್ದರು.

rahul gandhis challenge to surat court order amid bjps delay charge ash

ನವದೆಹಲಿ (ಮಾರ್ಚ್‌ 30, 2023): ಮೋದಿ ಉಪನಾಮ ಟೀಕಿಸಿದ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ, ಲೋಕಸಭಾ ಸದಸ್ಯತ್ವವನ್ನೂ ಕಳೆದುಕೊಂಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸೂರತ್‌ ಕೋರ್ಟ್‌ ಆದೇಶವನ್ನು ಪ್ರಶ್ನಿಸಲು ಸಜ್ಜಾಗಿದ್ದಾರೆ. ಈ ಕುರಿತು ಸುಳಿವು ನೀಡಿರುವ ಕಾಂಗ್ರೆಸ್‌ ಪಕ್ಷದ ಮೂಲಗಳು, ಸೂರತ್‌ ಕೋರ್ಟ್‌ ಆದೇಶದ ವಿರುದ್ಧ ರಾಹುಲ್‌ ಗಾಂಧಿ ಸಲ್ಲಿಸಲಿರುವ ಮೇಲ್ಮನವಿ ಅರ್ಜಿ ತಯಾರಾಗಿದ್ದು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಲಾಗುವುದು ಎಂದು ತಿಳಿಸಿವೆ. ನೇರವಾಗಿ ಉನ್ನತ ಹಂತದ ನ್ಯಾಯಾಲಯಕ್ಕೆ ಮೊರೆ ಹೋಗುವ ಬದಲು ತನ್ನ ತೀರ್ಪನ್ನು ಮರು ಪರಿಶೀಲನೆ ಮಾಡುವಂತೆ ಪ್ರಕರಣದಲ್ಲಿ ತೀರ್ಪು ನೀಡಿದ ಸೂರತ್‌ ನ್ಯಾಯಾಲಯಕ್ಕೇ ಇನ್ನೆರಡು ದಿನಗಳಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಕೆ ಮಾಡಲಾಗುವುದು ಎನ್ನಲಾಗಿದೆ.

ಕಳೆದ ಲೋಕಸಭಾ ಚುನಾವಣೆ ವೇಳೆ (Lok Sabha Election) ಕರ್ನಾಟಕದ (Karnataka) ಕೋಲಾರದಲ್ಲಿ (Kolar) ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ರಾಹುಲ್‌ ಗಾಂಧಿ (Rahul Gandhi) , ಮೋದಿ (Modi) ಹೆಸರು ಇಟ್ಟುಕೊಂಡವರೆಲ್ಲ ಏಕೆ ಕಳ್ಳರೇ ಆಗಿರುತ್ತಾರೆ ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಸೂರತ್‌ನಲ್ಲಿ (Surat) ಕೇಸು ದಾಖಲಾಗಿ ಇತ್ತೀಚೆಗೆ ನ್ಯಾಯಾಲಯ (Court) 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ತೀರ್ಪಿನ ಬಗ್ಗೆ 1 ತಿಂಗಳಲ್ಲಿ ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ ಶಿಕ್ಷೆಯನ್ನು 30 ದಿನಗಳ ಮಟ್ಟಿಗೆ ಅಮಾನತು ಮಾಡಲಾಗಿತ್ತು.

ಇದನ್ನು ಓದಿ: ರಾಹುಲ್‌ ಗಾಂಧಿ ಹಾರ್ವರ್ಡ್‌, ಕೇಂಬ್ರಿಡ್ಜ್‌ನಿಂದ ಪದವಿ ಪಡೆದಿದ್ದಾರೆ, ಆದರೂ ಪಪ್ಪು ಅಂತೀರಿ: ಪ್ರಿಯಾಂಕಾ ಗಾಂಧಿ

ಸಂಸತ್‌ ಆವರಣದ ಪಕ್ಷದ ಕಚೇರಿಗೆ ರಾಹುಲ್‌ ಭೇಟಿ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬುಧವಾರ ಸಂಸತ್‌ ಆವರಣದಲ್ಲಿರುವ ಪಕ್ಷದ ಕಚೇರಿಗೆ ಭೇಟಿ ನೀಡಿದರು. ಈ ವೇಳೆ 20 ನಿಮಿಷ ಅಲ್ಲೇ ಕಳೆದು ಪಕ್ಷದ ಸದಸ್ಯರನ್ನು ಭೇಟಿ ಮಾಡಿದರು. ನಂತರ ಶಿವಸೇನೆ ಉದ್ಧವ್‌ ಠಾಕ್ರೆ ಬಣದ ವಕ್ತಾರ ಹಾಗೂ ಸಂಸದ ಸಂಜಯ್‌ ರಾವುತ್‌ ಅವರನ್ನು ಭೇಟಿ ಮಾಡಿದರು. ಇದಾದ ಬಳಿಕ ರಾಹುಲ್‌ ಗಾಂಧಿ ಯಾಯಿ ಸೋನಿಯಾ ಗಾಂಧಿಯೊಂದಿಗೆ ಭೋಜನಕ್ಕೆ ತೆರಳಿದರು. ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾರಣ, ರಾಹುಲ್‌ಗೆ ಲೋಕಸಭಾ ಕಲಾಪಕ್ಕೆ ತೆರಳಲಿಲ್ಲ.

ರಾಹುಲ್‌ರ ವಯನಾಡ್‌ ಕ್ಷೇತ್ರದ ಬೈಎಲೆಕ್ಷನ್‌ಗೆ ಆತುರವಿಲ್ಲ: ಚುನಾವಣಾ ಆಯೋಗ
ಕಾಂಗ್ರೆಸ್‌ ನಾಯಕ ಅವರ ಅನರ್ಹತೆಯಿಂದ ತೆರವಾಗಿರುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲು ಆತುರವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ರಾಹುಲ್‌ ಅವರಿಗೆ ತಮ್ಮ ವಿರುದ್ಧ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯ 30 ದಿನಗಳ ಕಾಲಾವಕಾಶ ನೀಡಿದೆ. ಹೀಗಾಗಿ ನ್ಯಾಯಾಂಗ ನೀಡಿರುವ ಅವಧಿಯ ಮುನ್ನವೇ ಉಪಚುನಾವಣೆ ನಡೆಸುವ ಯಾವುದೇ ಅವಸರವಿಲ್ಲ, ನಾವು ಕಾಯುತ್ತೇವೆ. ಅವಧಿ ಮುಕ್ತಾಯ ಬಳಿಕ ಉಪಚುನಾವಣೆ ಕೈಗೊಳ್ಳುತ್ತೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಪ್ರಧಾನಿ ಹೇಡಿ; ನನ್ನ ವಿರುದ್ಧವೂ ಕೇಸು ದಾಖಲಿಸಿ, ನನ್ನನ್ನೂ ಜೈಲಿಗೆ ಹಾಕಿ: ಪ್ರಿಯಾಂಕಾ ಗಾಂಧಿ ಆಕ್ರೋಶ

Latest Videos
Follow Us:
Download App:
  • android
  • ios