Asianet Suvarna News Asianet Suvarna News

ಆಸ್ಪತ್ರೆಯಿಂದ ಬಿಡುಗಡೆಯಾದ ಸೋನಿಯಾ ಗಾಂಧಿ ಇಡಿಗೆ ಪತ್ರ, ವಿಚಾರಣೆ ಮುಂದೂಡಲು ಮನವಿ!

  • ಕೋವಿಡ್ ನಂತರ ಆರೋಗ್ಯ ಸಮಸ್ಯೆಗಳಿಂದ ಚಿಕಿತ್ಸೆ ಪಡೆದಿದ್ದ ಸೋನಿಯಾ
  • ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಸೋನಿಯಾ ಗಾಂಧಿ ಮನೆಯಲ್ಲಿ ವಿಶ್ರಾಂತಿ
  • ಜೂನ್ 23ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದ ಇಡಿ, ಮುಂದೂಡಲು ಮನವಿ
Congress Chief Sonia Gandhi request ed to postpone appearance till complete recovery from lung infection ckm
Author
Bengaluru, First Published Jun 22, 2022, 3:29 PM IST

ನವದೆಹಲಿ(ಜೂ.22): ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಗಾಂಧಿ ಪರಿವಾರಕ್ಕೆ ತೀವ್ರ ತಲೆನೋವು ತಂದಿದೆ. ಇಡಿ ಅಧಿಕಾರಿಗಳ ಸತತ ವಿಚಾರಣೆಯಿಂದ ರಾಹುಲ್ ಗಾಂಧಿ ಬಳಲಿ ಬೆಂಡಾಗಿದ್ದಾರೆ. ಇತ್ತ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಇದರ ನಡುವೆ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಡಿ ನೋಟಿಸ್ ಪ್ರಕಾರ ನಾಳೆ ವಿಚಾರಣೆ ಹಾಜರಾಗಬೇಕಿದೆ. ಆದರೆ ಆರೋಗ್ಯ ಚೇತರಿಕೆಯಲ್ಲಿರುವ ಕಾರಣ ವಿಚಾರಣೆ ಮುಂದೂಡುವಂತೆ ಮನವಿ ಮಾಡಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ನೋಟಿಸ್ ಜಾರಿ ಮಾಡಿತ್ತು. ಇದರಲ್ಲಿ ರಾಹುಲ್ ಗಾಂಧಿ ವಿಚಾರಣೆ ಎದುರಿಸಿದ್ದಾರೆ. ಆದರೆ ಸೋನಿಯಾ ಗಾಂಧಿಗೆ ಕೊರೋನಾ ಕಾಣಿಸಿಕೊಂಡಿತ್ತು. ಕೊರೋನಾದಿಂದ ಚೇತರಿಸಿಕೊಂಡರೂ ಆರೋಗ್ಯ ಸಮಸ್ಯೆ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 21 ರಂದು ಸೋನಿಯಾ ಗಾಂಧಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ ವಿಶ್ರಾಂತಿಯಲ್ಲಿರುವ ಸೋನಿಯಾ ಗಾಂಧಿ ಆರೋಗ್ಯ ಚೇತರಿಕೆ ಕಾಣುತ್ತಿದೆ. ಹೀಗಾಗಿ ವಿಚಾರಣೆಯನ್ನು ಕನಿಷ್ಠ ಎರಡು ದಿನ ಮುಂದೂಡುವಂತೆ ಮನವಿ ಮಾಡಿದ್ದಾರೆ. ಸೋನಿಯಾ ಗಾಂಧಿ ಮನವಿಯನ್ನು ಇಡಿ ಅಧಿಕಾರಿಗಲು ಪುರಸ್ಕರಿಸುವ ಸಾಧ್ಯತೆ ಹೆಚ್ಚಿದೆ.

ರಾಹುಲ್ ವಿಚಾರಣೆಗೆ ಪ್ರತಿಭಟನೆ, ಪೊಲೀಸರ ಮೇಲೆ ಉಗುಳಿದ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ!

ಸೋಮವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನ್ಯಾಷನಲ್‌ ಹೆರಾಲ್ಡ್‌ನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಗುರುವಾರ ಜಾರಿ ನಿರ್ದೇಶನಾಲಯ (ಇ.ಡಿ.)ದ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದೆ. ಆದರೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿರುವುದರಿಂದ ಇದೀಗ ಸೋನಿಯಾ ಗಾಂಧಿ ಮನವಿಯನ್ನು ಇಡಿ ಅಧಿಕಾರಿಗಳು ಪುಸ್ಕರಿಸುವ ಸಾಧ್ಯತೆ ಇದೆ.

ಕೋವಿಡೋತ್ತರ ಆರೋಗ್ಯ ಸಮಸ್ಯೆಗಳು ಹಾಗೂ ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ದ ಸೋನಿಯಾ ಗಾಂಧಿಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ.  ಈ ಮೊದಲು ಜೂ.2ರಂದು ಹಾಜರಾಗಲು ಸೋನಿಯಾಗೆ ಸೂಚಿಸಲಾಗಿತ್ತು. ಅದರೆ ಕೋವಿಡ್‌ ಹಿನ್ನೆಲೆಯಲ್ಲಿ ಅವರು ಹೊಸ ದಿನಾಂಕ ಕೋರಿದ್ದರು. ಹೀಗಾಗಿ ಜೂ.23ರ ದಿನಾಂಕ ನೀಡಲಾಗಿತ್ತು.

ರಾಹುಲ್‌ ವಿಚಾರಣೆ:
ಈ ನಡುವೆ ಇದೇ ಪ್ರಕರಣ ಸಂಬಂಧ ರಾಹುಲ್‌ ಗಾಂಧಿ ಮಂಗಳವಾರ ಇ.ಡಿ. ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಬೆಳಗ್ಗೆ 11 ಗಂಟೆಗೆ ಇ.ಡಿ. ಕಚೇರಿಗೆ ಆಗಮಿಸಿದ ರಾಹುಲ್‌ ರಾತ್ರಿ 8 ಗಂಟೆಯವರೆಗೆ ಅಂದರೆ ಸತತ 9 ತಾಸುಗಳ ಕಾಲ ವಿಚಾರಣೆಗೆ ಒಳಪಟ್ಟರು. ಬಳಿಕ 9 ಗಂಟೆ ವೇಳೆಗೆ ಮತ್ತೆ ಇ.ಡಿ. ಕಚೇರಿಗೆ ಆಗಮಿಸಿದ ರಾಹುಲ್‌ ಅವರನ್ನು ಅಧಿಕಾರಿಗಳು ತಡರಾತ್ರಿಯವರೆಗೂ ವಿಚಾರಣೆಗೆ ಒಳಪಡಿಸಿದರು. ಇದರೊಂದಿಗೆ 5 ದಿನಗಳಲ್ಲಿ 50 ಗಂಟೆಗೂ ಹೆಚ್ಚು ಸಮಯ ರಾಹುಲ್‌ ಅವರನ್ನು ಪ್ರಶ್ನೋತ್ತರಕ್ಕೆ ಒಳಪಡಿಸಿದಂತಾಗಿದೆ.

ಹೆರಾಲ್ಡ್ ವಿಚಾರಣೆಗೆ ಟ್ವಿಸ್ಟ್ ಕೊಟ್ಟರಾ ರಾಹುಲ್ ಗಾಂಧಿ? ಸುದೀರ್ಘ ವಿಚಾರಣೆ, ಏನಿದರ ಗುಟ್ಟು?

ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ವರ್ಚಸ್ಸಿಗೆ ದಕ್ಕೆ ತರಲು ಇಡಿ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತದೆ. ಇಡಿ ವಿಚಾರಣೆ ನಡೆಸು ಅಗತ್ಯವಿಲ್ಲ ಉತ್ತರ ಒದಗಿಸಿದರು. ಸರ್ಕಾರ ಸುಳ್ಳು ಮೊಕದ್ದೆಮೆ ಹೂಡಿ ಕಾಂಗ್ರೆಸ್‌ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡಲು ಇಡಿ ದುರ್ಬಳಕೆ ಮಾಡಿಕೊಂಡು ಬಿಜೆಪಿ ದ್ವೇಷದ ರಾಜಕಾರಣ ಮಾಡಲು ಹೋರಟಿದೆ ಎಂದು ಬೆಳಗಾವಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಶೀರ್‌ ಶೇಠ ಬೇಪಾರಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಮಂಗಳವಾರ ಜಮಾವನೆಗೊಂಡ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿ ತಹಸೀಲ್ದಾರ್‌ ಸಿ.ಎ.ಗುಡದಿನ್ನಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

Follow Us:
Download App:
  • android
  • ios