ಕಚ್ಚತೀವು ದ್ವೀಪ ಶ್ರೀಲಂಕಾಗೆ ನೀಡಿ ಭಾರತಕ್ಕೆ ದ್ರೋಹ ಬಗೆದ ಕಾಂಗ್ರೆಸ್, ಬಿಜೆಪಿ ಸುದ್ದಿಗೋಷ್ಠಿ!

ಭಾರತದ ಭಾಗವಾಗಿದ್ದ ಕಚ್ಚತೀವು ದ್ವೀಪವನ್ನು 1974ರಲ್ಲಿ ಇಂದಿರಾಗಾಂಧಿ ಶ್ರೀಲಂಕಾಗೆ ನೀಡಿದ ಮಹತ್ವದ ಮಾಹಿತಿ ಆರ್‌ಟಿಐ ಮಾಹಿತಿಯಡಿ ಬಹಿರಂಗವಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದೀಗ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಎಡವಟ್ಟುಗಳ ಪಟ್ಟಿ ಮಾಡಿದ್ದಾರೆ.
 

Congress betraying national interests by giving away Katchatheevu island to Sri Lanka says Shehzad Poonawalla ckm

ನವದೆಹಲಿ(ಮಾ.31) ಒಂದು ಹುಲ್ಲು ಕಡ್ಡಿ ಕೂಡ ಬೆಳೆಯಲು ಸಾಧ್ಯವಿಲ್ಲ ಎಂದು ಭಾರತದ ಭೂಪ್ರದೇಶವನ್ನು ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರೂ  ಚೀನಾಗೆ ನೀಡಿದ್ದರು. ಆದರೆ 1974ರಲ್ಲಿ ಇಂದಿರಾ ಗಾಂಧಿ ಭಾರತದ ದ್ವೀಪ ಕಚ್ಚುತೀವನ್ನು ಶ್ರೀಲಂಕಾಗೆ ನೀಡಿದ ಮಾಹಿತಿ ಆರ್‌ಟಿಐನಡಿ ಬಹಿರಂಗವಾಗಿದೆ. ಇದು ಕೋಲಾಹಲ ಸೃಷ್ಟಿಸಿದೆ. ಈ ಕುರಿತು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶೆಹಜಾಜ್ ಪೂನವಾಲ್ಲ, ಭಾರತದ ಭೂಮಿಯನ್ನು ಬೇರೆ ದೇಶಕ್ಕೆ ನೀಡುವ ಮೂಲಕ ರಾಷ್ಟ್ರೀಯ ಹಿತಾಸಕ್ತಿಗೆ ಕಾಂಗ್ರೆಸ್ ದ್ರೋಹ ಬಗೆದಿದೆ ಎಂದಿದ್ದಾರೆ. ಕಚ್ಚುತೀವು ದ್ವೀಪವನ್ನು ಶ್ರೀಲಂಕಾಗೆ ನೀಡಿ ತಮಿಳುನಾಡು ಮೀನುಗಾರರ ಜೀವನೋಪಾಯಕ್ಕೆ ಕಾಂಗ್ರೆಸ್ ಕುತ್ತು ತಂದಿದೆ ಎಂದಿದ್ದಾರೆ.

ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಕಚ್ಚುತೀವು ದ್ವೀಪದ ಕುರಿತು ಆರ್‌ಟಿಐ ಮಾಹಿತಿ ಕೇಳಿದ್ದರು. ಸರ್ಕಾರಿ ಅಧಿಕೃತ ಮಾಹಿತಿ ಪ್ರಕಾರ, ಈ ದ್ವೀಪವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಾಗೂ ತಮಿಳುನಾಡಿನ ಡಿಎಂಕೆ ಪಕ್ಷದ ಮುಖ್ಯಮಂತ್ರಿ ಕರುಣಾನಿಧಿ ಶ್ರೀಲಂಕಾಗೆ ನೀಡಿದ್ದಾರೆ. ಕಾಂಗ್ರೆಸ್ ಈ ದೇಶದ ಭೂಪ್ರದೇಶವನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಂಡಿದ್ದಾರೆ ಎಂದು ಪೂನಾವಾಲ ಆರೋಪಿಸಿದ್ದಾರೆ.

ಕಾಂಗ್ರೆಸ್‌ಗೆ ಮಿಷನ್‌, ವಿಷನ್‌ ಎರಡೂ ಇಲ್ಲ, ಇರೋದು ಬರೀ ಕರಪ್ಶನ್‌, ಬಿಜೆಪಿ ವಾಗ್ದಾಳಿ!

ಕಚ್ಚುತೀವು ದ್ವೀಪ ಒಂದು ಸಣ್ಣ ಪ್ರದೇಶ ಮಾತ್ರ ಆಗಿರಲಿಲ್ಲ. ಇದು ಭಾರತದ ಅವಿಭಾಜ್ಯ ಅಂಗವಾಗಿತ್ತು. ಇದು ತಮಿಳುನಾಡಿನ ಒಂದು ಭಾಗವಾಗಿತ್ತು. ಪ್ರಮುಖವಾಗಿ ತಮಿಳುನಾಡು ಮೀನುಗಾರರ ಜೀವನಾಧಾರವಾಗಿತ್ತು. ಆದರೆ ಕಾಂಗ್ರೆಸ್ ತನ್ನ ಕುಟುಂಬದ ಹಿತಾಸಕ್ತಿಗೆ ಭಾರತದ ದ್ವೀಪವನ್ನು ಶ್ರೀಲಂಕಾಗೆ ನೀಡಲಾಗಿದೆ ಎಂದಿದ್ದಾರೆ.

ಇದೇ ವೇಳೆ ರಾಹುಲ್ ಗಾಂಧಿ ಮಾಡಿರುವ ಬಿಜೆಪಿಯ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಮ್ಯಾಚ್ ಫಿಕ್ಸಿಂಗ್‌‌ಗೆ ಅತೀ ದೊಡ್ಡ ಇತಿಹಾಸವಿದೆ. ಮಾರ್ಚ್ 10, 1961ರಲ್ಲಿ ಇದೇ ಕಚ್ಚುತೀವು ದ್ವೀಪದ ಕುರಿತು ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅದಿಕೃತ ಹೇಳಿಕೆ ಅತೀ ದೊಡ್ಡ ಮ್ಯಾಚ್‌ಫಿಕ್ಸಿಂಗ್.  ಕಚ್ಚುತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಬಾಕಿ ಉಳಿದಿರುವ ಈ ವಿಚಾರವನ್ನು ಉಲ್ಲೇಖಿಸುತ್ತಾ ಮರುಳಕಿಸುವುದು ಸರಿಯಲ್ಲ. ಈ ಸಣ್ಣ ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಡುತ್ತೇನೆ ಎಂದು ನೆಹರೂ ಹೇಳಿಕೆಯನ್ನೂ ಪೂನಾವಾಲ ಉಲ್ಲೇಖಿಸಿದ್ದಾರೆ. ದೇಶದ ಭೂಭಾಗದ ಕುರಿತು ನೆಹರೂ ಹಾಗೂ ಕಾಂಗ್ರೆಸ್‌ಗೆ ಇದ್ದ ಅಸಡ್ಡೆ ಧೋರಣೆಗಳಿಂದ ಅಕ್ಸಾಯ್ ಚಿನ್ ಚೀನಾ ಪಾಲಾಯಿತು. ಕಚ್ಚುತೀವು ಶ್ರೀಲಂಕಾ ಪಾಲಾಯಿತು ಎಂದು ಪೂನಾವಾಲ್ಲ ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ಡಿಎಂಕೆ ಮಾಡಿದ ಅತೀ ದೊಡ್ಡ ಮ್ಯಾಚ್‌ಫಿಕ್ಸಿಂಗ್‌ನಿಂದ ಭಾರತ ತನ್ನ ಅವಿಭಾಜ್ಯ ಅಂಗವನ್ನು ಕಳೆದುಕೊಂಡಿತು ಎಂದಿದ್ದಾರೆ.

ಟಿವಿ ಚರ್ಚೆಯಲ್ಲಿ ಬಿಜೆಪಿ-ಕಾಂಗ್ರೆಸ್‌ ವಕ್ತಾರರ ಜಟಾಪಟಿ, ಎಕ್ಸ್‌ನಲ್ಲಿ 'Lavanya BJ' ಟ್ರೆಂಡ್‌!

ಕಾಂಗ್ರೆಸ್ ತನ್ನ ಕುಟುಂಬ, ತನ್ನ ಹಿತಾಸಕ್ತಿ ವಿಷಯ ಬಂದಾಗ ದೇಶವ ಸೌರ್ವಭೌಮತ್ವ, ದೇಶದ ಏಕತೆ, ದೇಶದ ಭೂಭಾಗ ಯಾವುದನ್ನು ನೋಡುವುದಿಲ್ಲ.ಕಾಶ್ಮೀರದ ಭೂಭಾಗವನ್ನು ಪಾಕಿಸ್ತಾನ ಆಕ್ರಮಿಸಿಕೊಂಡು ಇದೀಗ ಪಾಕ್ ಆಕ್ರಮಿತ ಕಾಶ್ಮೀರವಾಗಿದೆ. ಅಕ್ಸಾಯ್ ಚಿನ್ ಚೀನಾ ಪಾಲಾಗಿದೆ. ಕಚ್ಚುತೀವು ದ್ವೀಪರಾಷ್ಟ್ರವಾಗಿದೆ. ಇದು ಕಾಂಗ್ರೆಸ್ ಇತಿಹಾಸ ಎಂದು ಪೂನಾವಾಲ್ಲ ಹೇಳಿದ್ದಾರೆ.

Latest Videos
Follow Us:
Download App:
  • android
  • ios