ದೇಶಕ್ಕೆ ದೇಣಿಗೆ ಆರಂಭಿಸಿದ ಕಾಂಗ್ರೆಸ್, ಬಿಜೆಪಿ ಹೆಸರಿನಲ್ಲಿದೆ ಡೋನೇಶನ್ ವೆಬ್‌ಸೈಟ್!

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಇದರ ನಡುವೆ ದೇಶಕ್ಕೆ ದೇಣಿಗೆ ನೀಡಿ ಅಭಿಯಾನ ಆರಂಭಿಸಿದೆ.ಆದರೆ ಸುದ್ದಿಗೋಷ್ಠಿ, ಸಾಮಾಜಿಕ ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ದಿಢೀರ್ ಹೆಸರು ಬದಲಿಸಿದೆ.
 

Congress begins Donate for Desh Campaign to collect fund but bjp owns website under this domain ckm

ನವದೆಹಲಿ(ಡಿ.18) ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿದೆ. ಇದರ ನಡುವೆ ಕಾಂಗ್ರೆಸ್ ಪಕ್ಷಕ್ಕೆ 138 ವರ್ಷಗಳ ಸಂಭ್ರಮ. ಹೀಗಾಗಿ ಕಾಂಗ್ರೆಸ್ ಇದೀಗ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೇಶಕ್ಕಾಗಿ ದೇಣಿಗೆ(Donate for Desh) ಅಭಿಯಾನ ಆರಂಭಿಸಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯರು ಕನಿಷ್ಠ 138 ರೂಪಾಯಿ ಅಥವಾ 1,380 ರೂ, 13,800 ರೂ ಸೇರಿದಂತೆ ತಮಗೆ ಸಾಧ್ಯವಾಗುವಷ್ಟು ದೇಣಿಗೆ ನೀಡಬಹುದು. ಈ ಅಭಿಯಾನ ಆರಂಭಿಸಿದ ಕೆಲವೇ ದಿನಗಳಲ್ಲಿ ಇದೀಗ ಕಾಂಗ್ರೆಸ್ ಡೋನೇಟ್ ಐಎನ್‌ಸಿ ಡಾಟ್ ಇನ್(donateinc dot in) ಎಂದು ಹೆಸರು ಬದಲಾಯಿಸಿದೆ. 

ಕಾಂಗ್ರೆಸ್ ಆರಂಭಿಸಿದ ಡೋನೇಟ್ ಫಾರ್ ದೇಶ್ ಅಭಿಯಾನದಲ್ಲಿ ಪಾಲ್ಗೊಂಡು ದೇಣಿಗೆ ನೀಡಲು ಕಾಂಗ್ರೆಸ್ donateinc dot in ವೆಬ್‌ಸೈಟ್‌ ಮೂಲಕ ದೇಣಿಗೆ ನೀಡಲು ಕಾಂಗ್ರೆಸ್ ಮನವಿ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಡೋನೇಟ್ ಫಾರ್ ದೇಶ್ ಅನ್ನೋ ಹ್ಯಾಶ್‌ಟ್ಯಾಗ್ ಮೂಲಕ ಅಭಿಯಾನ ನಡೆಸುತ್ತಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಲು ಮಾತ್ರ donateinc dot in ವೆಬ್‌ಸೈಟ್ ಮೂಲಕವೇ ನೀಡಬೇಕು. ಇದಕ್ಕೆ ಮುಖ್ಯ ಕಾರಣ ಬಿಜೆಪಿ ವೆಬ್‌ಸೈಟ್.

'ಕಾಂಗ್ರೆಸ್‌ಗಾಗಿ ಕಾಸು ಕೊಡಿ..' ಲೋಕಸಭೆ ಚುನಾವಣೆಗೆ ಜನರಿಂದ ಹಣವೆತ್ತಲು ಮುಂದಾದ ಕಾಂಗ್ರೆಸ್‌!

ಕಾಂಗ್ರೆಸ್ ಆರಂಭಿಸಿರುವ ಡೋನೇಟ್ ಫಾರ್ ದೇಶ್ ಅನ್ನೋ ಅಭಿಯಾನಕ್ಕೂ ಮೊದಲೇ ಬಿಜೆಪಿ ಇದೇ ಹೆಸರಿನಲ್ಲಿ ವೆಬ್‌ಸೈಟ್ ಹೊಂದಿದೆ. ಬಿಜೆಪಿ ಪಕ್ಷ ಆನ್‌ಲೈನ್ ಮೂಲಕ ದೇಣಿಗೆ ಸಂಗ್ರಹ ಕಳೆದ ಹಲವು ವರ್ಷಗಳಿಂದ ಮಾಡುತ್ತಿದೆ. ಈ ವೆಬ್‌ಸೈಟ್ ಹೆಸರು ಡೋನೇಟ್ ಫಾರ್ ದೇಶ್.  ಬಿಜೆಪಿಯ ದೇಣಿಗೆ ಸಂಗ್ರಹ ವೆಬ್‌ಸೈಟ್ ಹೆಸರು ಡೋನೇಟ್ ಫಾರ್ ದೇಶ್ ಡಾಟ್ ಆರ್ಗ್( DonateForDesh dot Org). ಇನ್ನು OpIndia ವೆಬ್‌ಸೈಟ್ ಸಬ್‌ಸ್ಕ್ರಿಪ್ಶನ್ ಪೇಜ್ ಅಡಿಯಲ್ಲಿ ಡೋನೇಟ್ ಫಾರ್ ದೇಶ್ ಡಾಟ್ ಕಾಂ( DonateForDesh dot Com )ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಎರಡೂ ಡೊಮಿನ್‌ಗಳು ಬಿಜೆಪಿ ಹಾಗೂ ಬಲಪಂಥಿಯ ವೆಬ್‌ಸೈಟ್ ಅಡಿಯಲ್ಲಿದೆ. ಹೀಗಾಗಿ ಕಾಂಗ್ರೆಸ್ ತನ್ನ ಡೋನೇಟ್ ಫಾರ್ ದೇಶ್ ಅಭಿಯಾನದಡಿಯಲ್ಲಿ ಹಣ ನೀಡಲು  donateinc dot in ವೆಬ್‌ಸೈಟ್ ಡೊಮಿನ್ ಖರೀದಿಸಿದೆ. 

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಕ್ರೌಡ್‌ ಫಂಡಿಂಗ್;

ಏನಿದು ಡೋನೇಟ್ ಫಾರ್ ದೇಶ್ ಅಭಿಯಾನ?
‘1920-21ರಲ್ಲಿ ಮಹಾತ್ಮಾ ಗಾಂಧೀಜಿ ಅವರು ‘ತಿಲಕ್ ಸ್ವರಾಜ್ ನಿಧಿ’ ಎಂಬ ನಿಧಿ ಸಂಗ್ರಹ ಅಭಿಯಾನವನ್ನು ಆರಂಭಿಸಿದ್ದರು. ಅದರಿಂದ ನಮ್ಮ ನಿಧಿ ಸಂಗ್ರಹವು ಪ್ರೇರಣೆ ಪಡೆದಿದೆ. ಸಮೃದ್ಧ ಭಾರತ ರೂಪಿಸುವ ದೃಷ್ಟಿಯಿಂದ ಪಕ್ಷವನ್ನು ಬಲಪಡಿಸುವುದು ಅಗತ್ಯವಾಗಿದೆ. ಹೀಗಾಗಿ ಈ ನಿಧಿ ಸಂಗ್ರಹ ಅಭಿಯಾನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.ದೇಣಿಗೆಯಲ್ಲಿನ ‘138’ ಅಂಕಿಯ ಮಹತ್ವ ವಿವರಿಸಿದ ಅವರು, ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸ್ಥಾಪನೆಯಾಗಿ ಈಗ 138 ವರ್ಷಗಳಾಗಿವೆ. ಹೀಗಾಗಿ ದೇಣಿಗೆಯಲ್ಲಿನ 138 ರು. ಅಂಕಿಯು ಕಾಂಗ್ರೆಸ್‌ನ 138 ವರ್ಷದ ಪ್ರಯಾಣವನ್ನು ನೆನಪಿಸುತ್ತದೆ’ ಎಂದು ವೇಣುಗೋಪಾಲ್‌ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios