ಬೆಂಗಳೂರು(ಆ.21):  ರಾಜ್ಯದಲ್ಲಿ ಗುರುವಾರ 7,385 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಒಂದೂವರೆ ತಿಂಗಳ ಮಗು ಸೇರಿ 102 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದೇ ದಿನ 6231 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ

ಇದರೊಂದಿಗೆ ರಾಜ್ಯದಲ್ಲಿ ಇದುವರೆಗೂ ಸೋಂಕು ದೃಢಪಟ್ಟವರ ಒಟ್ಟು ಸಂಖ್ಯೆ 2.56 ಲಕ್ಷಕ್ಕೆ ಏರಿಕೆಯಾಗಿದ್ದರೆ, ಮೃತಪಟ್ಟವರ ಸಂಖ್ಯೆ ನಾಲ್ಕೂವರೆ ಸಾವಿರ ಗಡಿ (4,429) (ಆತ್ಮಹತ್ಯೆ ಸೇರಿದಂತೆ 16 ಅನ್ಯ ಕಾರಣದ ಸಾವು ಪ್ರಕರಣ ಹೊರತುಪಡಿಸಿ) ತಲುಪಿದೆ. ಇದರ ನಡುವೆ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 1.7 ಲಕ್ಷಕ್ಕೇರಿದೆ. ಉಳಿದ 82,149 ಮಂದಿ ಸಕ್ರಿಯ ಸೋಂಕಿತರು ರಾಜ್ಯದ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಗಂಭೀರ ಆರೋಗ್ಯ ಸಮಸ್ಯೆ ಹಿನ್ನೆಲೆಯ 705 ಮಂದಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.

ಬೆಳಗಾವಿಯ ಆಸ್ಪತ್ರೆಯಲ್ಲಿ ಮತ್ತೊಂದು ಲಸಿಕೆ ಪರೀಕ್ಷೆ!...

ಬೆಂಗಳೂರಲ್ಲೇ 2,912 ಹೊಸ ಪ್ರಕರಣ: ಗುರುವಾರ ರಾಜಧಾನಿ ಬೆಂಗಳೂರಿನಲ್ಲೇ ಅತಿ ಹೆಚ್ಚು 2,912 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಬಳ್ಳಾರಿ 483, ಬೆಳಗಾವಿ 358, ಉಡುಪಿ 351, ಮೈಸೂರು 253, ದಾವಣಗೆರೆ 245, ಕಲಬುರಗಿ 210ಯಲ್ಲಿ ಅತಿಹೆಚ್ಚು ಪ್ರಕ​ರಣಗಳು ದಾಖ​ಲಾ​ಗಿದೆ.

ಬೆಂಗ್ಳೂ​ರಲ್ಲಿ 25 ಸಾವು: ಗುರುವಾರ ವರದಿಯಾದ 102 ಸಾವಿನ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 25 ಮಂದಿ, ಬಳ್ಳಾರಿ 8, ಹಾಸನ, ಕೊಪ್ಪಳ ತಲಾ 7, ದಕ್ಷಿಣ ಕನ್ನಡದಲ್ಲಿ ಒಂದೂವರೆ ತಿಂಗಳ ಹೆಣ್ಣು ಮಗು ಸೇರಿ 6 ಮಂದಿ ಮೃತಪಟ್ಟಿ​ದ್ದಾರೆ.

ಕೊರೊನಾ ವಿಚಾರದಲ್ಲಿ ಗುಡ್‌ನ್ಯೂಸ್: ಕಂಟೈನ್ಮೆಂಟ್, ಬಫರ್‌ ಝೋನ್‌ಗಳ ನಿಯಮ ಸಡಿಲಿಕೆ...

ಹಾಸನ 196, ಶಿವಮೊಗ್ಗ 188, ದಕ್ಷಿಣ ಕನ್ನಡ 177, ಬಾಗಲಕೋಟೆ, ಧಾರವಾಡ ತಲಾ 159, ತುಮಕೂರು 138, ಕೊಪ್ಪಳ 132, ಚಿಕ್ಕಮಗಳೂರು 124, ಚಾಮರಾಜನಗರ 120, ಉತ್ತರ ಕನ್ನಡ 115, ಗದಗ 114, ವಿಜಯಪುರ 112, ಹಾವೇರಿ, ರಾಯಚೂರು ತಲಾ 111, ಮಂಡ್ಯ 109, ಬೀದರ್‌ 85, ಬೆಂಗಳೂರು ಗ್ರಾಮಾಂತರ 77, ಚಿಕ್ಕಬಳ್ಳಾಪುರ 76, ಕೋಲಾರ 69, ಯಾದಗಿರಿ 68, ಚಿತ್ರದುರ್ಗ 60, ಕೊಡಗು 46 ಮತ್ತು ರಾಮನಗರ ಜಿಲ್ಲೆಯಲ್ಲಿ 27 ಕೋವಿಡ್‌ ಪ್ರಕರಣಗಳು ವರದಿಯಾಗಿವೆ.

ದಾವಣಗೆರೆ 5 ಜನ, ಬೆಳಗಾವಿ, ಹಾವೇರಿ, ಕಲಬುರಗಿ, ಶಿವಮೊಗ್ಗ, ವಿಜಯಪುರ, ಯಾದಗಿರಿ ತಲಾ 4 ಜನ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಉತ್ತರ ಕನ್ನಡ ತಲಾ ಮೂವರು, ಚಾಮರಾಜನಗರ, ಕೊಡಗು, ರಾಮನಗರ, ಉಡುಪಿ ತಲಾ ಇಬ್ಬರು, ಗದಗ, ಕೋಲಾರ, ತುಮಕೂರಿನಲ್ಲಿ ತಲಾ ಒಬ್ಬರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಮೃತ ಮಗು ಸೇರಿದಂತೆ 12 ಜನರಿಗೆ ಸೋಂಕಿನ ಸಂಪರ್ಕ ಪತ್ತೆಯಾಗಿಲ್ಲ. ಉಳಿದವರು ಸಾರಿ, ಐಎಲ್‌ಐ ಮತ್ತು ವಿವಿಧ ಪೂರ್ವ ಕಾಯಿಲೆಗಳಿಂದ ಬಳಲುತ್ತಿದ್ದುದಾಗಿ ಇಲಾಖೆ ಹೇಳಿದೆ.