Computer Science ಪದವೀಧರೆ ಹೀಗಾಗಿದ್ದು ಹೇಗೆ?: ಭಿಕ್ಷುಕಿಯ ವಿಡಿಯೋ ವೈರಲ್
* ಪದವೀಧರೆಯ ನೋವಿನ ಕತೆ
* ಉತ್ತಮವಾಗಿ ಕಲಿತರೂ ಸಿಗಲಿಲ್ಲ ಉದ್ಯೋಗ ಅವಕಾಶ
* ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಈ ಮಹಿಳೆ
ಗಾಂಧೀನಗರ(ನ.24): ಜೀವನದಲ್ಲಿ ಓದುವುದು ಮತ್ತು ಬರೆಯುವುದು ಬಹಳ ಮುಖ್ಯ ಏಕೆಂದರೆ ಅದು ಉತ್ತಮ ಜೀವನಕ್ಕೆ ಕಾರಣವಾಗುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ, ಆದರೆ ಕೆಲವರಿಗೆ ಪರಿಸ್ಥಿತಿಗಳು ತುಂಬಾ ವಿರುದ್ಧವಾಗಿರುತ್ತವೆ, ಅವರ ಶಿಕ್ಷಣದಿಂದಲೂ (Education) ಯಾವುದೇ ಪ್ರಯೋಜನವಾಗುವುದಿಲ್ಲ. ಇದರಿಂದಾಗಿ ಅವರು ಜೀವನ ಸಾಗಿಸಲು ಅವರು ಒಂದಿಲ್ಲೊಂದು ದಾರಿ ಹುಡುಕುತ್ತಾರೆ. ಇತ್ತೀಚೆಗಷ್ಟೇ ವಾರಣಾಸಿಯಿಂದ (Varanasi) ಅಸ್ಸಿ ಘಾಟ್ ಬಳಿ ಸ್ವಾತಿ ಎಂಬ ಮಹಿಳೆ ತೀರಾ ಹದಗೆಟ್ಟಿದ್ದ ಪರಿಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬರುವವರ ಬಳಿ ಭಿಕ್ಷೆ ಬೇಡುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಅಚ್ಚರಿಯ ಸಂಗತಿಯೆಂದರೆ ಸ್ವಾತಿ ಅವರು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲರು ಮತ್ತು ಅವರು ಕಂಪ್ಯೂಟರ್ ಸೈನ್ಸ್‌ನಲ್ಲಿ (Computer Science) ಪದವಿ ಪಡೆದಿದ್ದಾರೆ.
ಸ್ವಾತಿಯ ಈ ವಿಡಿಯೋವನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (Banaras Hindu University) ವಿದ್ಯಾರ್ಥಿನಿ ಶಾರದಾ ಅವಿನಾಶ್ ತ್ರಿಪಾಠಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಬಂದ ನಂತರ ಸಾಮಾಜಿಕ ಲೋಕದಲ್ಲಿ ಸ್ವಾತಿ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇಲ್ಲಿಯವರೆಗೆ 58 ಸಾವಿರಕ್ಕೂ ಹೆಚ್ಚು ಮಂದಿ ಆಕೆಯ ವಿಡಿಯೋ ನೋಡಿದ್ದಾರೆ.
ಈ ಪರಿಸ್ಥಿತಿಯಲ್ಲಿ ಸ್ವಾತಿ ಯಾರು ಮತ್ತು ಏಕೆ
ಈ ವಿಡಿಯೋದಲ್ಲಿ ಸ್ವತಃ ಸ್ವಾತಿ ತಾನು ದಕ್ಷಿಣ ಭಾರತದವಳು ಮತ್ತು ಮೂರು ವರ್ಷಗಳ ಹಿಂದೆ ವಾರಣಾಸಿಗೆ ಬಂದಿದ್ದೆ ಎಂದು ಹೇಳುತ್ತಿದ್ದಾರೆ. ಅಂದಿನಿಂದ ಅವಳು ಇಲ್ಲಿದ್ದಾಳೆ ಮತ್ತು ಜೀವನ ಮಾಡಲು ಅವಕಾಶವನ್ನು ಹುಡುಕುತ್ತಿದ್ದಾಳೆ. ಕಡುಬಡತನದಲ್ಲಿ ಕಾಣುವ ಸ್ವಾತಿಗೆ ಹಣ, ಸೂರು ಬೇಕಿಲ್ಲ. ತಮ್ಮ ಓದಿಗೆ ತಕ್ಕಂತೆ ಉದ್ಯೋಗ ಗಿಟ್ಟಿಸಿಕೊಳ್ಳಬೇಕು, ಸ್ವಾಭಿಮಾನದಿಂದ ಜೀವನ ಸಾಗಿಸಬೇಕು ಎಂದು ಬಯಸುತ್ತಾರೆ. ಸ್ವಾತಿಗೆ ಕಂಪ್ಯೂಟರ್ ಸಂಬಂಧಿತ ಕೆಲಸಗಳ ಬಗ್ಗೆ ಉತ್ತಮ ಜ್ಞಾನವಿದೆ, ಜೊತೆಗೆ ಟೈಪಿಂಗ್ ತಿಳಿದಿದೆ. ಮಗುವಿಗೆ ಜನ್ಮ ನೀಡಿದ ನಂತರ ತನ್ನ ದೇಹದ ಅರ್ಧ ಭಾಗ ಪಾರ್ಶ್ವವಾಯುವಿಗೆ ಒಳಗಾಗಿತ್ತು ಎಂದೂ ಸ್ವಾತಿ ಹೇಳಿದ್ದಾರೆ.
ಸಮಾಜದಲ್ಲಿ ಇಂತಹ ಸಮಸ್ಯೆ ಏಕೆ?
ಸ್ವಾತಿಯ ಈ ವಿಡಿಯೋದಿಂದ ಅನೇಕರು ಆಕೆಯ ಬಗ್ಗೆ ಸಹಾನುಭೂತಿ ತೋರಿಸುತ್ತಿದ್ದಾರೆ. ಸ್ವಾತಿ ವಿದ್ಯಾವಂತಳಾಗಿದ್ದಾಳೆ, ಇಂಗ್ಲಿಷ್ ಬಲ್ಲವಳು ಮತ್ತು ಸಭ್ಯಳಾಗಿದ್ದಾಳೆ, ಆದರೂ ಅವಳು ಇಂದು ಈ ಸ್ಥಿತಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಅಷ್ಟಕ್ಕೂ ಪ್ರತಿಭಾವಂತರು ಯಾಕೆ ಹೀಗೆ ಹಿಂದುಳಿದಿದ್ದಾರೆ? ಅವರಲ್ಲಿ ಸ್ವಾಭಿಮಾನದಿಂದ ಬದುಕುವ ಹಂಬಲ ನಶಿಸುತ್ತಿದ್ದು, ಸಮಾಜಕ್ಕೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯ ಸೋಲು.