ಜ್ಯೂನಿಯರ್ ಕೆಲಸಕ್ಕೆ ಸೇರಿಕೊಂಡಾಗ ಆತನಿಗೆ ತರಬೇತಿ ನೀಡಿದ್ದ. ಎಲ್ಲಾ ಹಂತದಲ್ಲೂ ನೆರವಾಗಿದ್ದ. ಬಳಿಕ ಪ್ರಮೋಶನ್ ವೇಳೆಯೂ ಆತನಿಗೆ ಉತ್ತಮ ವೇತನ ಸಿಗುವಂತೆ ನೋಡಿಕೊಂಡಿದ್ದ. ಇದೀಗ ಅದೇ ಜ್ಯೂನಿಯರ್ ತನ್ನ ಬಾಸ್ ಆಗುತ್ತಿದ್ದಾನೆ ಎಂದು ಉದ್ಯೋಗಿ ಅಸಮಾಧಾನ ವ್ಯಕ್ತಡಿಸಿದ್ದಾನೆ.

ಬೆಂಗಳೂರು (ನ.18) ಕಾರ್ಪೋರೇಟ್ ವಲಯದಲ್ಲಿ ಕಂಪನಿಗಳು ಬಹುತೇಕ ಬಾರಿ ತೆಗೆದುಕೊಳ್ಳುವ ನಿರ್ಧಾರ ಉದ್ಯೋಗಿಗಳ ಅಸಮಾಧಾನಕ್ಕೆ ಕಾರಣವಾಗುತ್ತದೆ. ಪ್ರಮುಖವಾಗಿ ಪ್ರಮೋಶನ್, ಸ್ಯಾಲರಿ ಹೈಕ್ ಸೇರಿದಂತೆ ಕೆಲ ವಿಚಾರಗಳಲ್ಲಿ ಕಾರ್ಪೋರೇಟ್ ಕಂಪನಿಗಳು ತೆಗೆದುಕೊಳ್ಳುವ ನಿರ್ಧಾರ ಹಲವು ಉದ್ಯೋಗಿಗಳ ಆಕ್ರೋಶಕ್ಕೂ ಕಾರಣಾಗುತ್ತದೆ. ಹೀಗೆ ಜ್ಯೂನಿಯರ್ ಕಂಪನಿ ಸೇರಿಕೊಂಡಾಗ ಎಲ್ಲಾ ತರಬೇತಿ ನೀಡಿ ಬೆಳೆಸಿದ್ದಾನೆ. ಆರಂಭಿಕ ಪ್ರಮೋಶನ್ ವೇಳೆ ಎಲ್ಲಾ ನೆರವು ನೀಡಿದ್ದಾರೆ. ಆದರೆ ಇದೀಗ ಅದೇ ಜ್ಯೂನಿಯರ್ ತನ್ನದೇ ಬಾಸ್ ಆಗಿ ಪ್ರಮೋಶನ್ ಪಡೆದಿದ್ದಾನೆ. ಇದು ಹಿರಿಯ ಉದ್ಯೋಗಿಯ ಬೇಸರಕ್ಕೆ ಕಾರಣಾಗಿದೆ.

ಪ್ರಮೋಶನ್ ಶಾಕ್

ರೆಡ್ಡಿಟ್ ಮೂಲಕ ಹಿರಿಯ ಉದ್ಯೋಗಿ ತನಗೆ ಕಂಪನಿ ನೀಡಿದ ಶಾಕ್ ಕುರಿತು ಹೇಳಿಕೊಂಡಿದ್ದಾನೆ.ಕೆಲ ವರ್ಷಗಳಿಂದ ಹಿಂದೆ ಜ್ಯೂನಿಯರ್ ಒಬ್ಬ ಕಂಪನಿ ಸೇರಿಕೊಂಡಿದ್ದ. ತನ್ನ ಕೆಳಗೆ ಕೆಲಸ ಮಾಡುತ್ತಿದ್ದ. ಆತನ ಕಂಪನಿ ಸೇರಿಕೊಂಡಾಗ, ಎಲ್ಲಾ ತರಬೇತಿ ನೀಡಿದ್ದೆ. ಪ್ರತಿ ಬಾರಿ ನಾನು ಹೆಚ್ಚಿನ ಸಮಯ ತೆಗೆದುಕೊಂಡು ಆತನ ಟ್ರೈನಿಂಗ್ ನೀಡಿದ್ದೆ. ನನ್ನ ಕೈಕೆಳಗೆ ಆತನ ಕೆಲಸ ಮಾಡುತ್ತಿದ್ದ. ಎಲ್ಲಾ ರೀತಿಯಲ್ಲಿ ನೆರವು ನೀಡಿದ್ದು ಮಾತ್ರವಲ್ಲ, ನನ್ನ ಸಮಾನ ಹಂತಕ್ಕೆ ಪ್ರಮೋಶನ್ ಸಿಗಲು ನಾನು ಶಿಫಾರಸು ಮಾಡಿದ್ದೆ. ಮೊದಲ ವರ್ಷದಲ್ಲಿ ಕೆಲಸ ಕಲಿತುಕೊಂಡು ಆತ ನನ್ನಂತೆ ಸಮಾನ ಹಂತಕ್ಕೆ ಬಂದಿದ್ದ. ಆದರೆ ಇದೀಗ ಕಂಪನಿ ಆತನನನ್ನ ನನಗೆ ಬಾಸ್ ಮಾಡಿ ಬಡ್ತಿ ನೀಡಿದೆ ಎಂದು ಹಿರಿಯ ಉದ್ಯೋಗಿ ಬೇಸರ ವ್ಯಕ್ತಪಡಿಸಿದ್ದಾನೆ.

ಕಾಲೇಜು ಮುಗಿಸಿ ನೇರವಾಗಿ ನಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಸೇರಿಕೊಂಡಿದ್ದ. ನನಗಿಂತ 3 ರಿಂದ 4 ವರ್ಷ ಚಿಕ್ಕವನು. ಕಳೆದ ಐದು ವರ್ಷದಿಂದ ನನಗೆ ಬಡ್ತಿ ಸಿಗಲಿಲ್ಲ. ಈ ಬಾರಿ ನಾನು ಬಡ್ತಿ ಪಡೆಯುವ ನಿರೀಕ್ಷೆಯಲ್ಲಿದ್ದೆ. ಕಂಪನಿಗೆ ಸೇರಿಕೊಳ್ಳುವ ಹೊಸಬರರಿಗೆ ತರಬೇತಿ ನೀಡುವುದು ಸೇರಿದಂತೆ ಪ್ರಮುಖ ಜವಾಬ್ದಾರಿಗಳನ್ನು ನನಗೆ ನೀಡುತ್ತಿದ್ದರು. ಇದರ ಜೊತೆಗೆ ನನ್ನ ಕೆಲಸವನ್ನು ನಿರ್ವಹಿಸುತ್ತಿದ್ದೆ. ಈ ಕಂಪನಿಯಲ್ಲಿ ಹೆಚ್ಚು ಅನುಭವ ಹೊಂದಿದ ಕಾರಣ, ನನಗೆ ಹೆಚ್ಚುವರಿ ಜವಾಬ್ದಾರಿ ನೀಡಿದ್ದರು. ನಾನು ಯಶಸ್ವಿಯಾಗಿ ನಿಭಾಯಿಸಿದ್ದರು. ಆದರೆ ಇದೀಗ ಬಡ್ತಿ ವಿಚಾರ ಬಂದಾಗ, ನಾನೇ ಕಲಿಸಿದ ಜ್ಯೂನಿಯರ್ ನನ್ನ ಬಾಸ್ ಆಗಿ ಬರುತ್ತಿದ್ದಾನೆ ಎಂದು ಬೇಸರ ಹೊರಹಾಕಿದ್ದಾರೆ.

ಕಂಪನಿ ನಿರ್ಧಾರ ಹಿಂದೆ ಯಾರ ಕೈವಾಡ

ಪ್ರಸಕ್ತ ಮ್ಯಾನೇಜರ್ ಕಂಪನಿ ತೊರಯೆಲು ನಿರ್ಧರಿಸಿದ್ದರು. ಹೀಗಾಗಿ ಆ ಹುದ್ದೆಗೆ ಕಂಪನಿಯಲ್ಲಿ ಹಿರಿಯನಾಗಿ, ಅನುಭವದ ಮೇಲೆ ನನಗೆ ಆಗುತ್ತಿತ್ತು. ಹೊರಹೋಗುವ ಮ್ಯಾನೇಜರ್ ಕೂಡ ನನ್ನ ಹೆಸರು ಹೇಳಿದ್ದರು. ಆದರೆ ಕಂಪನಿ ನನ್ನ ಜೊತೆಗೂ ಚರ್ಚಿಸಲು ಮುಂದಾಗಿಲ್ಲ, ನೇರವಾಗಿ ನನ್ನ ಜ್ಯೂನಿಯರ್‌ಗೆ ಮ್ಯಾನೇಜರ್ ಹುದ್ದೆ ನೀಡಿದೆ. ಇದೀಗ ನಾನು ಆತನ ಕೆಳಗೆ ಕೆಲಸ ಮಾಡಬೇಕು ಎಂದು ಅಸಮಾದಾನ ಹೊರಹಾಕಿದ್ದಾನೆ.

ಕಾರ್ಪೋರೇಟ್‌ನ ಗರಿಷ್ಠ ಮಿತಿ ತಲುಪಿದ್ದೀರಿ

ಈತನ ಪೋಸ್ಟ್‌ಗೆ ಹಲವರು ಕಮೆಂಟ್ಸ್ ಮಾಡಿದ್ದಾರೆ. ಕಾರ್ಪೋರೇಟ್ ಕಂಪನಿಯಲ್ಲಿ ನಿಮಗಿಂತ ಜ್ಯೂನಿಯರ್‌ಗೆ ಬಡ್ತಿ ಸಿಗುತ್ತಿದೆ. ನಿಮ್ಮ ಮ್ಯಾನೇಜರ್ ಆಗಿ ಬರುತ್ತಿದ್ದಾರೆ ಎಂದರೆ ನೀವು ಗರಿಷ್ಠ ಮಿತಿ ತಲುಪಿದ್ದೀರಿ. ಹೊರಡಲು ಸಮಯ ಆಗಿದೆ ಎಂದು ಸೂಚಿಸಿದ್ದಾರೆ.ಬೇರೆ ಕೆಲಸ ಹುಡುಕುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.