ತಿರುಮಲ ಶ್ರೀವಾರಿ ಭಕ್ತರಿಗಾಗಿ ಟಿಟಿಡಿ ಸದ್ಗಮಯ ಎಂಬ ಆನ್‌ಲೈನ್ ಕಾರ್ಯಕ್ರಮವನ್ನು ಆರಂಭಿಸಿದೆ. 5 ರೂಪಾಯಿ ಪಾವತಿಸಿ ನೋಂದಾಯಿಸಿಕೊಂಡರೆ ಲಕ್ಕಿ ಡಿಪ್ ಮೂಲಕ ಕುಟುಂಬ ಸಮೇತ ದರ್ಶನ ಭಾಗ್ಯ ಸಿಗಲಿದೆ.

ತಿರುಮಲ ಶ್ರೀವಾರಿ ಭಕ್ತರಿಗಾಗಿ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ಡಿಸೆಂಬರ್ 20ರಂದು ವೈಕುಂಠ ಏಕಾದಶಿ ದಿನದಿಂದ ಸದ್ಗಮಯ ಹೆಸರಿನಲ್ಲಿ ಆನ್‌ಲೈನ್ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಸದ್ಗಮ ಕಾರ್ಯಕ್ರಮಕ್ಕಾಗಿ ಪ್ರತ್ಯೇಕ ಪೋರ್ಟಲ್ ಅನ್ನು ಟಿಟಿಡಿ ರೂಪಿಸಿದೆ. ಸಾಮಾನ್ಯ ಭಕ್ತರಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಯಂತಹ ಮಹೋನ್ನತ ಗ್ರಂಥಗಳಲ್ಲಿರುವ ಮುಖ್ಯವಾದ ಅಂಶಗಳನ್ನು ಅರ್ಥವಾಗಿರುವ ರೀತಿಯಲ್ಲಿ ಪ್ರತಿದಿನ ಆನ್ ಲೈನ್ ಮೂಲಕ ಭಕ್ತರಿಗೆ ನೀಡಲಿದೆ.

ಟಿಟಿಡಿ ತೆಲುಗು, ತಮಿಳು, ಹಿಂದಿ ಮಲಯಾಳಂ ಜೊತೆ ಆಂಗ್ಲ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಸದ್ಗಮಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರತ್ಯೇಕವಾದ ಆನ್ ಲೈನ್ ಪೋರ್ಟಲ್ ನಲ್ಲಿ 5 ರೂಪಾಯಿ ಪಾವತಿಸಿ ನಿಮ್ಮ ಹೆಸರುಗಳನ್ನು ನಮೂದಿಸಿಕೊಳ್ಳಬೇಕಿದೆ.

ಮೊದಲು ಟಿಟಿಡಿ ಶ್ರೀವಾರಿ ಸೇವಕರ ಮೂಲಕ ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಟಿಟಿಡಿ ನಿರ್ಧರಿಸಿದೆ. ಆ ಬಳಿಕ ದೇಶ, ವಿದೇಶಗಳಲ್ಲಿರುವ ಭಕ್ತರಿಗೆ ವಿಸ್ತರಣೆ ಮಾಡಲು ನಿರ್ಧಾರ ಕೈಗೊಂಡಿದೆ. ಟಿಟಿಡಿ ಇತಿಹಾಸದ ಪಾಠಕ್ಕೆ ಸೀಮಿತವಾಗದೆ ಅವುಗಳಿಗೆ ಸಂಬಂಧಿಸಿದ ಪ್ರಶ್ನೋತ್ತರ ಕಾರ್ಯಕ್ರಮವನ್ನು ನಡೆಸಲಿದೆ. ಇದರಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡ ಆರು ಮಂದಿಯನ್ನು ಗುರುತಿಸಿ, ಲಕ್ಕಿ ಡಿಪ್ ಪದ್ಧತಿಯಲ್ಲಿ ಆಯ್ಕೆ ಮಾಡಲಿದೆ. ಇವರಿಗೆ ಕುಟುಂಬ ಸದಸ್ಯರೊಂದಿಗೆ ಸೇರಿ ಶ್ರೀವಾರಿ ದರ್ಶನ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಿದೆ.

ತಿಮ್ಮಪ್ಪನ ಭಕ್ತರಿಗೆ ಮತ್ತೊದು ಗುಡ್ ನ್ಯೂಸ್

ಕಲಿಯುಗ ಪ್ರತ್ಯಕ್ಷ ದೈವ ಶ್ರೀ ವೆಂಕಟೇಶ್ವರಸ್ವಾಮಿ ನೆಲಸಿರುವ ತಿರುಮಲ ಕ್ಷೇತ್ರ ಆಧ್ಯಾತ್ಮಿಕತೆ ಮಾತ್ರವಲ್ಲದೆ, ಅದ್ಭುತ ಚರಿತ್ರೆ, ಅಪರೂಪದ ಶಿಲ್ಪಕಲೆ, ಸನಾತನ ಧರ್ಮ ವೈಭಕ್ಕೆ ಕೂಡ ಸಾಕ್ಷಿಯಾಗಿದೆ. ಭಕ್ತರು ಆರಾಧಿಸುತ್ತಿರುವ ಶ್ರೀವಾರಿ ದಿವ್ಯಕ್ಷೇತ್ರ ವಿಶಿಷ್ಠತೆಯನ್ನು, ನೂರಾರು ವರ್ಷಗಳ ಇತಿಹಾಸವನ್ನು, ಭಾರತೀಯ ಸಂಸ್ಕೃತಿ ಸಂಪ್ರದಾಯಗಳನ್ನು ಒಂದೇ ಸ್ಥಳದಲ್ಲಿ ಆವಿಷ್ಕರಿಸುವ ಅದ್ಭುತ ವೇದಿಕೆಯೊಂದನ್ನು ತಿರುಮಲದಲ್ಲಿ ರೂಪಿಸಲಾಗಿದೆ. ಆಧುನಿಕರಿಸಿದ ಶ್ರೀ ವೆಂಕಟೇಶ್ವರ ಮ್ಯೂಜಿಯಂ ಸಂದರ್ಶನವನ್ನ ಭಕ್ತರಿಗೆ ನವೆಂಬರ್ 15ರಿಂದ ಪ್ರಾಂಭಿಸಿದೆ.

ಮ್ಯೂಸಿಯಂ ಪ್ರವೇಶಕ್ಕೆ ಒಬ್ಬರಿಗೆ 50 ರೂಪಾಯಿ ನಿಗದಿ ಮಾಡಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೂ ಭಕ್ತರು ಮ್ಯೂಸಿಯಂಗೆ ಭೇಟಿ ನೀಡಬಹುದು. ಸಂಜೆ ನಾಲ್ಕು ಗಂಟೆವರೆಗೂ ಭಕ್ತರಿಗೆ ಟಿಕೆಟ್ ನೀಡಲಾಗುತ್ತದೆ. ತಿರುಮಲದಲ್ಲಿ ಸುಮಾರು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ, ನಾಲ್ಕು ಅಂತಸ್ತಿನ ಎಸ್‌ವಿ ಮ್ಯೂಜಿಯಂ ಅನ್ನು ಉನ್ನತೀಕರಿಸಲಾಗಿದೆ. ಇದಕ್ಕೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ತಂತ್ರಜ್ಞಾನದ ಸಹಾಯವನ್ನು ನಡಿದೆ. ಮ್ಯೂಜಿಯಂನಲ್ಲಿ 14 ಪ್ರತ್ಯೇಕ ಗ್ಯಾಲರಿ, ಸುಮಾರು 8 ಸಾವಿರಕ್ಕೂ ಹೆಚ್ಚು ಕಲಾಕೃತಿಗಳು, ಶಿಲ್ಪಗಳು, ಅಪರೂಪದ ಸಂಸ್ಕೃತಿಕ ಗುರುತಗಳನ್ನು ಸಂಗ್ರಹಿಸಲಾಗಿದೆ.