ಮಸೀದಿ ನಿರ್ಮಾಣಕ್ಕೆ ಕೈಜೋಡಿಸಿದ ಸಿಖ್ ಸಮುದಾಯ ಗುರುದ್ವಾರ, ದೇವಸ್ಥಾನ ಪಕ್ಕದಲ್ಲೇ ಮಸೀದಿ ನಿರ್ಮಾಣ ಇದು ಸಾಮರಸ್ಯದ ಗ್ರಾಮ, ಎಲ್ಲಾ ಹಬ್ಬಗಳು ಒಟ್ಟಿಗೆ ಆಚರಣೆ

ಲುಧಿಯಾನ(ಮೇ.22): ದೇಶದಲ್ಲಿ ಧರ್ಮ ಸಂಘರ್ಷ ಹೆಚ್ಚಾಗುತ್ತಿದೆ. ಪ್ರತಿಭಟನೆ, ಕಾನೂನು ಹೋರಾಟ ನಡೆಯುತ್ತಿದೆ. ಇದರ ನಡುವೆ ಧರ್ಮ ಸಾಮರಸ್ಯದ ಗ್ರಾಮ ಇದೀಗ ದೇಶದಲ್ಲೇ ಸದ್ದು ಮಾಡುತ್ತಿದೆ.ಪಂಜಾಬ್‌ನ ಲುಧಿಯಾನದ ರಾಯಿಕೋಟ್ ಏರಿಯಾ ಸಿಖ್ ಸಮುದಾಯ ಪ್ರಾಬಲ್ಯ ಸಾಧಿಸಿದೆ. ಇಲ್ಲಿ ಕೇವಲ ನಾಲ್ಕೇ ಮುಸ್ಲಿಮ್ ಕುಟುಂಬಳಿದೆ. ಇದೀಗ ಈ ನಾಲ್ಕು ಮುಸ್ಲಿಮ್ ಕುಟಂಬ ಪ್ರಾರ್ಥನೆಗಾಗಿ ಸಿಖ್ ಸಮುದಾಯದ ಮಸೀದಿ ನಿರ್ಮಾಣ ಮಾಡುತ್ತಿದೆ. 

ಮಸೀದಿ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮಕ್ಕೆ ಆಗಮಿಸಿದ ಗುರುದ್ವಾರದ ಸಿಖ್ ಗುರು 13 ಕಲ್ಲುಗಳನ್ನಿಟ್ಟು ಮಸೀದಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ಪಕ್ಕದ ಗ್ರಾಮಗಳ ಮುಸ್ಲಿಮರು, ಮುಸ್ಲಿಮ್ ಧರ್ಮಗುರುಗಳು, ರಾಯಿಕೋಟ್ ಗ್ರಾಮದ ಸಿಖ್ ಧರ್ಮ ಗುರು ಹಾಗೂ ಸಿಖ್‌ರು ಪಾಲ್ಗೊಂಡಿದ್ದಾರೆ.

ಧರ್ಮ ದಂಗಲ್ ನಡುವೆ ಭಾವೈಕ್ಯತೆಯ ಸಿದ್ದೇಶ್ವರ ಸ್ವಾಮಿ ಜಾತ್ರೆ!

ಈ ಮಸೀದಿ ನಿರ್ಮಾಣಕ್ಕೆ ಶೇಕಡಾ 90 ರಷ್ಟು ಹಣ ಹಾಗೂ ಸಲಕರಣೆ ಒದಗಿಸಿರುವುದು ಸಿಖ್ ಸಮುದಾಯ. ಶೇಕಡಾ 10 ರಷ್ಟು ನಾಲ್ಕು ಮುಸ್ಲಿಮ್ ಕುಟುಂಬ ಹಾಗೂ ಮುಸ್ಲಿಮ್ ಮಸೀದಿ ಸಮಿತಿ ಹಾಕಿದೆ. ಈ ಗ್ರಾಮದಲಲ್ಲಿ 1,400 ಸಿಖ್ ಮತಗಳಿದ್ದರೆ, ಮುಸ್ಲಿಮ ಕುಟುಂಬಗಳ ಸಂಖ್ಯೆ ಕೇವಲ 4. 

ಸಿಖ್ ಗುರುದ್ವಾರದ ನೇತೃತ್ವದಲ್ಲಿ ಮಸೀದಿ ನಿರ್ಮಾಣ ನಡೆಯುತ್ತಿದೆ. ಈ ಗ್ರಾಮದಲ್ಲಿ ಗುರುದ್ವಾರವಿದೆ. ದೇವಸ್ಥಾನವಿದೆ. ಇದೀಗ ಮಸೀದಿಯೂ ನಿರ್ಮಾಣವಾಗುತ್ತಿದೆ. ಇಲ್ಲಿ ಹಬ್ಬಗಳನ್ನು ಒಟ್ಟಿಗೆ ಆಚರಿಸಲಾಗುತ್ತದೆ. ದೇಶಕ್ಕೆ ನಮ್ಮ ಗ್ರಾಮ ಮಾದರಿಯಾಗಿದೆ ಎಂದು ಗುರುದ್ವಾರದ ಸಿಖ್ ಧರ್ಮಗುರು ಹೇಳಿದ್ದಾರೆ.

ಸಂತ ಬಾಬಾ ಗುರುಚರಣ್ ಸಿಂಗ್ ಆವರ ಆಶೀರ್ವಾದದಲ್ಲಿ ಮಸೀದಿ ನಿರ್ಮಾಣ ನಡೆಯುತ್ತಿದೆ. ವಿದೇಶದಲ್ಲಿರುವ ಹಲವು ಸಿಖ್ ಸಮುದಾಯದವರು ಹಣ ದೇಣಿಗೆ ನೀಡಿದ್ದಾರೆ. ಗ್ರಾಮದಲ್ಲಿ ಪ್ರಾರ್ಥನೆಗಾಗಿ ಮಸೀದಿ ನಿರ್ಮಾಣ ಮಾಡಬೇಕು ಅನ್ನೋದು ನಮ್ಮ ಬಯಕೆಯಾಗಿತ್ತು. 10 ವರ್ಷಗಳ ಹಿಂದೆ 1.75 ಲಕ್ಷ ರೂಪಾಯಿಗೆ ಜಮೀನು ಖರೀದಿ ಮಾಡಲಾಗಿತ್ತು. ಆದರೆ ಹಣದ ಕೊರತೆಯಿಂದ ಮಸೀದಿ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ಇದೀಗ ಸಿಖ್ ಸಮುದಾಯದ ಸಹೋದದರು ನೆರವಿನಿಂದ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಿಂತ ಸಂತಸ ಇನ್ನೇನಿದೆ ಎಂದು ಗ್ರಾಮದ ಮುಸ್ಲಿಮ್ ಇಂದ್ರಜಿತ್ ಸಿಂಗ್ ಹೇಳಿದ್ದಾರೆ.

ಸ್ವರ್ಣವಲ್ಲಿ ರಥ ಕಟ್ಟುವ ಮುಸ್ಲಿಂ ಕುಟುಂಬ
ಹಿಂದು-ಮುಸ್ಲಿಂ ಸೌಹಾರ್ದಕ್ಕೆ ಶಿರಸಿ ಸ್ವರ್ಣವಲ್ಲಿ ಸಂಸ್ಥಾನ ಮಾದರಿಯಾಗಿದೆ. ಸೇವೆ, ಸಹಕಾರ, ಭಾತೃತ್ವ ಮುಸ್ಲಿಮರೊಂದಿಗೆ ಸ್ವರ್ಣವಲ್ಲಿ ಸಂಸ್ಥಾನವು ಅನಾದಿಕಾಲದಿಂದ ಬೆಸೆದುಕೊಂಡಿದೆ.ಸ್ವರ್ಣವಲ್ಲಿ ಸಂಸ್ಥಾನ ಮಠದ ರಥ ಕಟ್ಟುವ ಕಾರ್ಯವನ್ನು ಅನಾದಿ ಕಾಲದಿಂದಲೂ ಮುಸ್ಲಿಮರೇ ನಿರ್ವಹಿಸಿಕೊಂಡು ಬಂದಿದ್ದಾರೆ. ಸೋಂದಾದ ಅಬ್ದುಲ್‌ ರೆಹಮಾನ್‌ ಕುಟುಂಬ ಈ ಕಾರ್ಯವನ್ನು ನಡೆಸಿಕೊಂಡು ಬಂದಿದೆ.

ಯಾದಗಿರಿಯಲ್ಲಿ ಹಿಂದೂಗಳ ನೇತೃತ್ವದಲ್ಲಿಯೇ ಜಮಾಲುದ್ಧಿನ್ ಜಾತ್ರೆ

ರಥೋತ್ಸವದ ದಿನಾಂಕದ ಮಾಹಿತಿಯನ್ನು ಸ್ವರ್ಣವಲ್ಲಿ ಸಂಸ್ಥಾನದಿಂದ ಪಡೆದುಕೊಳ್ಳುವ ಈ ಕುಟುಂಬ ರಥ ಕಟ್ಟಲು ದಿನಾಂಕವನ್ನು ನಿಗದಿಪಡಿಸಿಕೊಳ್ಳುತ್ತದೆ. ಕುಟುಂಬದ ಸದಸ್ಯರಾದ ರವೂಫಸಾಬ, ಕಬೀರಸಾಬ, ನಜೀರ ಅಹಮ್ಮದ್‌ ಮಠಕ್ಕೆ ಆಗಮಿಸಿ ರಥವನ್ನು ಗೂಡಿನಿಂದ ಹೊರ ತೆಗೆಯುತ್ತಾರೆ.ರಥಕ್ಕೆ ಮರದ ಪಟ್ಟಿಗಳನ್ನು ಅಳವಡಿಸಿ, ಹಗ್ಗದಿಂದ ಬಿಗಿಯುವ ಕಾರ್ಯವನ್ನು ಮುಸ್ಲಿಂ ಯುವಕರೇ ಮಾಡುತ್ತಾರೆ. ಬಳಿಕ ಅಡಕೆ ಮರದ ದಬ್ಬೆಗಳನ್ನು ಕಟ್ಟುವಿಕೆ, ರಥದ ಪತಾಕೆ ಹಾರಿಸುವಿಕೆಯನ್ನು ಇವರೇ ನಿರ್ವಹಿಸುತ್ತಾರೆ. ರಥೋತ್ಸವದಲ್ಲಿ ಈ ಕುಟುಂಬದ ಸದಸ್ಯರೆಲ್ಲ ಪಾಲ್ಗೊಳ್ಳುತ್ತಾರೆ.