ಸಾಮಾನ್ಯ ವೀಸಾ: ಅಮೆರಿಕ ಏರ್‌ಪೋರ್ಟ್‌ನಲ್ಲಿ 2 ತಾಸು ಕಾದ ರಾಹುಲ್!
ಮೋದಿ ಉಪನಾಮ ಅವಹೇಳನ ಪ್ರಕರಣದಲ್ಲಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡು, ರಾಜತಾಂತ್ರಿಕ ವೀಸಾ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದರ ಪರಿಣಾಮವನ್ನು ಅಮೆರಿಕದಲ್ಲಿ ಎದುರಿಸಿದರು
ಸ್ಯಾನ್‌ಫ್ರಾನ್ಸಿಸ್ಕೋ: ಮೋದಿ ಉಪನಾಮ ಅವಹೇಳನ ಪ್ರಕರಣದಲ್ಲಿ ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡು, ರಾಜತಾಂತ್ರಿಕ ವೀಸಾ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದರ ಪರಿಣಾಮವನ್ನು ಅಮೆರಿಕದಲ್ಲಿ ಎದುರಿಸಿದರು. ಬುಧವಾರ ಸ್ಯಾನ್‌ಫ್ರಾನ್ಸಿಸ್ಕೋ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ ಗಾಂಧಿ ವಲಸೆ ವಿಭಾಗದಲ್ಲಿ ಅಗತ್ಯ ಪ್ರಕ್ರಿಯೆ ಮುಗಿಸಲು ಸುಮಾರು 2 ತಾಸು ಕಾಯಬೇಕಾಯ್ತು. ಈ ವೇಳೆ ಜನರು ಅವರನ್ನು ಕೇಳಿದಾಗ ನಾನು ಈಗ ಸಂಸದನಲ್ಲ ನಾನು ಸಾಮಾನ್ಯ ನಾಗರಿಕ ಎಂದು ಉತ್ತರಿಸಿದರು. ಒಂದು ವೇಳೆ ರಾಹುಲ್ ಸಂಸದರಾಗಿದ್ದರೆ, ಅವರ ಎಮಿಗ್ರೇಷನ್ ವಿಭಾಗದಲ್ಲಿನ (immigration department) ಪ್ರಕ್ರಿಯೆಗಳು ತುರ್ತಾಗಿ ನಡೆಯುತ್ತಿತ್ತು.
ರಾಹುಲ್ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಗೆ ಅಗೌರವ
ಸಾಂಟಾ ಕ್ಲಾರಾ: ಇಲ್ಲಿ ನಡೆದ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರಗೀತೆಗೆ ಅಗೌರವ ತೋರಿದ ಘಟನೆ ನಡೆದಿದೆ. ರಾಹುಲ್ ಸಂವಾದ ಆರಂಭಕ್ಕೂ ಮುನ್ನ ಕಾರ್ಯಕ್ರಮ ಸ್ಥಳದಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಯಿತು. ಈ ವೇಳೆ ನೆರೆದಿದ್ದವರ ಪೈಕಿ ಅರ್ಧದಷ್ಟು ಜನ ಎದ್ದುನಿಂತರೆ, ಇನ್ನರ್ಧ ಜನ ತಮ್ಮ ಪಾಡಿಗೆ ತಾವು ಕುಳಿತಿದ್ದರು. ಒಂದಿಷ್ಟು ಜನ ಹರಟೆ ಹೊಡೆಯುತ್ತಿದ್ದರೆ, ಇನ್ನೊಂದಿಷ್ಟು ಜನರು ಅತ್ತಿಂದಿತ್ತ ಓಡಾಡುತ್ತಾ, ಫೋಟೋ ತೆಗೆಯುತ್ತಾ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ. ಈ ಬಗ್ಗೆ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.
ಮೋದಿಗೆ ತಾನೇ ದೇವರೆಂಬ ಭ್ರಮೆ: ಮತ್ತೆ ವಿದೇಶದಲ್ಲಿ ರಾಹುಲ್ ಗಾಂಧಿ ವಿವಾದ
ಬಿಜೆಪಿ ಜನರನ್ನು ಹೆದರಿಸುತ್ತಿದೆ
ಸ್ಯಾನ್ ಫ್ರಾನ್ಸಿಸ್ಕೋ: ಬಿಜೆಪಿ ದೇಶದಲ್ಲಿ ಜನರನ್ನು ಹೆದರಿಸುತ್ತಿದ್ದು, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ (BJP) ಮತ್ತು ಆರ್‌ಎಸ್‌ಎಸ್ (RSS) ದೇಶದಲ್ಲಿರುವ ಎಲ್ಲಾ ರಾಜಕೀಯ ವ್ಯವಸ್ಥೆಗಳನ್ನು ನಿಯಂತ್ರಿಸುತ್ತಿವೆ. ಹೀಗಾಗಿಯೇ ಈ ವ್ಯವಸ್ಥೆಗಳು ನೇರವಾಗಿ ಜನರನ್ನು ಸಂಪರ್ಕಿಸಬೇಕು ಎಂಬ ಕಾರಣಕ್ಕೆ ನಾವು ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದೆವು. ಕೆಲವು ವಿಷಯಗಳನ್ನು ರಾಜಕೀಯವಾಗಿ ಕಾರ್ಯರೂಪಕ್ಕೆ ತರುವುದು ಕಷ್ಟ. ಹೀಗಾಗಿ ದಕ್ಷಿಣದ ತುದಿಯಿಂದ ಉತ್ತರ ಭಾರತದವರೆಗೂ ಪಾದಯಾತ್ರೆ ನಡೆಸಿದೆವು. ಪ್ರೀತಿ, ಗೌರವ ಮತ್ತು ಮಾನವೀಯತೆಯ ಸ್ಪೂರ್ತಿಯಲ್ಲಿ ನಾವು ಭಾರತ್ (Bharat jodo) ಜೋಡೋ ಯಾತ್ರೆ ಕೈಗೊಂಡಿದ್ದೆವು. ಇತಿಹಾಸವನ್ನು ಓದಿದರೆ ಗುರು ನಾನಕರು, ಗುರು ಬಸವಣ್ಣ, ನಾರಾಯಣ ಗುರು ಅವರು ದೇಶವನ್ನು ಕಟ್ಟುವುದನ್ನೇ ಕಲಿಸಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಮೊಳಗಿದ 'ಖಲಿಸ್ತಾನಿ ಜಿಂದಾಬಾದ್' ಘೋಷಣೆ!