Asianet Suvarna News Asianet Suvarna News

UP Elections: ಬಿಜೆಪಿ ಟ್ರಂಪ್ ಕಾರ್ಡ್ ಆದ ಸ್ತ್ರೀಶಕ್ತಿ, ಠಕ್ಕರ್ ಕೊಡುವ ಪಡೆ!

*  ಉತ್ತರ  ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಕಾವು
*  ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮಹಿಳಾ ಸಾರಥ್ಯ
* ವಿವಿಧ ಪಕ್ಷಗಳಿಂದ ಬಂದರೂ ಇಲ್ಲಿ  ಮಿಂಚುತ್ತಿದ್ದಾರೆ

Coming from other parties, these women are giving edge to the women s wing of BJP Uttar Pradesh mah
Author
Bengaluru, First Published Jan 25, 2022, 6:52 PM IST

ಲಕ್ನೋ(ಜ. 25)  ಉತ್ತರ ಪ್ರದೇಶದಲ್ಲಿ (Uttar Pradesh) ವಿಧಾನಸಭೆ ಚುನಾವಣಾ(5 State Elections)  ಕಣ ರಂಗೇರುತ್ತಿದೆ.  ಬೇರೆ ಬೇರೆ ಪಕ್ಷಗಳಿಂದ  ಬಿಜೆಪಿಗೆ (BJP) ಬಂದಿರುವ ಮಹಿಳಾ(Woman) ನಾಯಕಿಯರು ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿಯ ಮಹಿಳಾ ವಿಭಾಗವು ಯುಪಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಕ್ರಿಯಾಶೀಲವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಬಿಜೆಪಿ ಸರ್ಕಾರ ಮಹಿಳೆಯರ ಪರವಾಗಿ ತೆಗೆದುಕೊಂಡಿರುವ ನಿರ್ಧಾರಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಹಿಳಾ ನಾಯಕರಿಯರು ಮಾಡುತ್ತಿದ್ದಾರೆ. 2022 ರ ಯುಪಿ ಚುನಾವಣೆಯಲ್ಲಿ ಮಹಿಳೆಯರನ್ನು ಮುಂದಕ್ಕೆ ಕೊಂಡೊಯ್ಯುವ ಮೂಲಕ ಬಿಜೆಪಿಗೆ ಬಲ ತುಂಬುವ ಕೆಲಸ ಮಾಡುತ್ತಿದ್ದಾರೆ.

ಯುಪಿ ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಯಾರಿಯಲ್ಲಿ ನಿರತವಾಗಿವೆ. ಈ ಬಾರಿಯ ಎಲ್ಲ ರಾಜಕೀಯ ಪಕ್ಷಗಳ ಅಜೆಂಡಾದಲ್ಲಿ ಮಹಿಳೆಯರ ಸಮಸ್ಯೆಗಳೂ ಸೇರಿವೆ. ಎಲ್ಲ ಪಕ್ಷಗಳ ಮಹಿಳಾ ಘಟಕಗಳು ನಿರಂತರವಾಗಿ ಕ್ಷೇತ್ರಕ್ಕೆ ಭೇಟಿ ನೀಡಿ ಮಹಿಳೆಯರನ್ನು ಓಲೈಸಲು ಈ ವಿಷಯಗಳ ಕುರಿತು ಚರ್ಚೆ ನಡೆಸುತ್ತಿವೆ. 40ರಷ್ಟು ಟಿಕೆಟ್ ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ ಮಾಸ್ಟರ್ ಕಾರ್ಡ್ ಪ್ಲೇ ಮಾಡಿದ್ದರೆ, ಇತರ ಪಕ್ಷಗಳು ಕೂಡ ಮಹಿಳೆಯರಿಗೆ ಸಂಬಂಧಿಸಿದ ಘೋಷಣೆಗಳಲ್ಲಿ ಹಿಂದೆ ಬಿದ್ದಿಲ್ಲ. ಯುಪಿ ಚುನಾವಣೆ 2022 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಬಲ ತುಂಬುತ್ತಿರುವ ಮಹಿಳಾ ನಾಯಕಿಯರ ಕಿರು ಪರಿಚಯ ನಿಮ್ಮ ಮುಂದೆ  ಇಡುತ್ತಿದ್ದೇವೆ.

UP Elections: ಕಾಂಗ್ರೆಸ್ ಸ್ಟಾರ್‌ ಪ್ರಚಾರಕನನ್ನೇ ಬಿಜೆಪಿ ಸೆಳೆದಿದ್ದು ಹೇಗೆ? ಬಯಲಾಯ್ತು ರಹಸ್ಯ!

* ಅಪರ್ಣಾ ಯಾದವ್ : 
ಯುಪಿ ಚುನಾವಣೆಯಲ್ಲಿ ಮಹಿಳಾ ನಾಯಕರ ಪಕ್ಷಾಂತರದಲ್ಲಿ ಹೆಚ್ಚು ಚರ್ಚೆಯಲ್ಲಿರುವ ಹೆಸರು ಅಪರ್ಣಾ ಯಾದವ್. ಮುಲಾಯಂ ಸಿಂಗ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಇತ್ತೀಚೆಗೆ ಸಮಾಜವಾದಿ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಅಪರ್ಣಾ ಬಿಜೆಪಿ ಸೇರುವುದು ಸಮಾಜವಾದಿ ಪಕ್ಷಕ್ಕೆ ದೊಡ್ಡ ಪ್ರಶ್ನೆಯಾಗಿ ಪರಿಣಮಿಸಿದ್ದು ಮಾತ್ರವಲ್ಲದೆ  ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನೂ ಚಿಂತೆಗೀಡು ಮಾಡಿದೆ. ಇದೇ ಕಾರಣಕ್ಕೆ ಅವರು ಅಪರ್ಣಾ ಯಾದವ್ ಬಗ್ಗೆ ಪ್ರಶ್ನೆ  ಕೇಳಿದರೆ ಸಮಾಜವಾದಿ ಮುಖಂಡರು ಉತ್ತರ ನೀಡುತ್ತಿಲ್ಲ.

2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಪರ್ಣಾ ಯಾದವ್ ಬಿಜೆಪಿಗೆ ಬಲ ತುಂಬುತ್ತಿದ್ದಾರೆ. ಬಿಜೆಪಿ ಸರ್ಕಾರ ಮಹಿಳೆಯರ ಪರವಾಗಿ ಸದಾ ನಿಂತಿರುವ ಸರ್ಕಾರ ಎಂಬುದನ್ನು ಅವರು ಒತ್ತಿ ಒತ್ತಿ ಹೇಳಿದ್ದಾರೆ. ಅಪರ್ಣಾ ಯಾದವ್ ಚುನಾವಣಾ ಕಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಅದಿತಿ ಸಿಂಗ್:  
ರಾಯ್ ಬರೇಲಿಯ ಕಾಂಗ್ರೆಸ್ ಶಾಸಕಿಯಾಗಿದ್ದ ಅದಿತಿ ಸಿಂಗ್ ಕೂಡ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ.  ಗಾಂಧಿ ಕುಟುಂಬದ ಕ್ಷೇತ್ರ ಎಂಬ ಮಾತು ಇತ್ತು.  ಅದಿತಿ ಅವರಿಗೂ ಮುನ್ನ ಅವರ ತಂದೆ   ದಿವಂಗತ ಅಖಿಲೇಶ್ ಸಿಂಗ್ ಕ್ಷೇತ್ರ ಪ್ರತಿನಿಧಿಸುತ್ತಿದ್ದರು. ಬೇರೆ ಪಕ್ಷಗಳಿಂದ ಅಲ್ಲದೇ ಪಕ್ಷೇತರರಾಗಿಯೂ ಗೆದ್ದು ಬಂದಿದ್ದರು. 24 ನವೆಂಬರ್ 2021 ರಂದು ಬಿಜೆಪಿ ಸೇರಿದ ನಂತರ, ಅದಿತಿ ಸಿಂಗ್ 20 ಜನವರಿ 2022 ರಂದು ಕಾಂಗ್ರೆಸ್‌ ನ ಎಲ್ಲ ಸ್ಥಾನಗಳಿಗೆ ರಾಜೀನಾಮೆ ನೀಡಿದರು. 

ಸಂಘಮಿತ್ರ ಮೌರ್ಯ: 
ಬದೌನ್ ಸಂಸದೆ ಮತ್ತು ಸ್ವಾಮಿ ಪ್ರಸಾದ್ ಮೌರ್ಯ ಅವರ ಪುತ್ರಿ ಸಂಘಮಿತ್ರ ಮೌರ್ಯ ಅವರು 2022 ರ ಯುಪಿ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ.  ಸಂಘಮಿತ್ರ ಬಿಎಸ್ಪಿ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ಅದರ ನಂತರ ಪಕ್ಷವು ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿತು ಮತ್ತು ಅವರು ಬದೌನ್‌ನಿಂದ ಸಂಸದರಾಗಿ ಆಯ್ಕೆಯಾದರು. ಸ್ವಾಮಿ ಪ್ರಸಾದ್ ಮೌರ್ಯ  ಬಿಜೆಪಿ ತೊರೆದು ಎಸ್‌ಪಿ ಸೇರಿದ ನಂತರ ಸಂಘಮಿತ್ರ ಕೂಡ ಎಸ್ ಪಿ ಕಡೆ ಹೋಗುತ್ತಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದರೆ, ಈ ಪ್ರಶ್ನೆಗಳನ್ನು ಅಲ್ಲಗಳೆದು ನಾನು  ಬಿಜೆಪಿ ಜೊತೆಗಿದ್ದೇನೆ ಎಂದು ನಾಯಕಿ ಸ್ಪಷ್ಟಪಡಿಸಿದ್ದಾರೆ. 2022 ರ ಯುಪಿ ಚುನಾವಣೆಯಲ್ಲಿ, ಬಿಜೆಪಿಯಲ್ಲಿ ಮಹಿಳಾ ಮುಖವಾಗಿ ಹೊರಬರುತ್ತಿರುವ ಕೆಲವೇ ಮಹಿಳೆಯರಲ್ಲಿ ಸಂಘಮಿತ್ರ ಮೌರ್ಯ ಹೆಸರು ಮುಂಚೂಣಿಯಲ್ಲಿದೆ.

 ರೀಟಾ ಬಹುಗುಣ ಜೋಶಿ: 
ಪ್ರಯಾಗ್‌ರಾಜ್‌ನ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಕೂಡ ಯುಪಿಯಲ್ಲಿ ಬಿಜೆಪಿಯನ್ನು ಮುನ್ನಡೆಸುತ್ತಿದ್ದಾರೆ. . ರೀಟಾ ಬಹುಗುಣ ಜೋಶಿ ಅವರು 2012 ರಲ್ಲಿ ಲಕ್ನೋ ಕ್ಯಾಂಟ್
ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. . ಆದರೆ, 2017 ರ ಚುನಾವಣೆಯ ಮೊದಲು ಅವರು ಬಿಜೆಪಿ ಸೇರಿದರು ಮತ್ತು ಕ್ಯಾಂಟ್‌ನಿಂದ ಟಿಕೆಟ್ ನೀಡಲಾಯಿತು. ರೀಟಾ ಬಹುಗುಣ ಜೋಶಿ ಅವರು 2017 ರಲ್ಲಿ ಕ್ಯಾಂಟ್‌ನಿಂದ ಬಿಜೆಪಿಯಿಂದಲೇ ಗೆದ್ದು ಬಂದರು. ಪ್ರಯಾಗ್‌ರಾಜ್‌ನಿಂದ ಸಂಸದರಾಗಿ ಆಯ್ಕೆಯಾದರು. 2022 ರ ಯುಪಿ ಚುನಾವಣೆಯಲ್ಲಿ, ಮಹಿಳೆಯರ ಸಮಸ್ಯೆಗಳ ಬಗ್ಗೆ ಬಿಜೆಪಿ ಮುಂದಿಡುತ್ತಿರುವ ಕೆಲವೇ ಕೆಲವು ಬಿಜೆಪಿ ಮುಖಗಳಲ್ಲಿ ರೀಟಾ ಬಹುಗುಣ ಜೋಶಿ ಒಬ್ಬರು. ಮಗ ಮಯಾಂಕ್ ಜೋಶಿಗೆ ಕ್ಯಾಂಟ್‌ನಿಂದಲೇ ಟಿಕೆಟ್  ನೀಡಬೇಕು ಎನ್ನುವ ಯತ್ನವನ್ನು ಮಾಡಿದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪುತ್ರನಿಗೆ ಕ್ಷೇತ್ರ ಬಿಟ್ಟುಕೊಡುವ ಆಲೋಚನೆಯೂ ಅವರಿಗೆ ಇದೆ.

 

Follow Us:
Download App:
  • android
  • ios