Asianet Suvarna News Asianet Suvarna News

UP Elections: ಕಾಂಗ್ರೆಸ್ ಸ್ಟಾರ್‌ ಪ್ರಚಾರಕನನ್ನೇ ಬಿಜೆಪಿ ಸೆಳೆದಿದ್ದು ಹೇಗೆ? ಬಯಲಾಯ್ತು ರಹಸ್ಯ!

* ಉತ್ತರ ಪ್ರದೇಶ ರಾಜಕೀಯದಲ್ಲಿ ಕೇಳರಿಯದ ತಿರುವು

* ಘಟಾನುಘಟಿ ನಾಯಕರ ಪಕ್ಷಾಂತರ ಪರ್ವ

* ಕಾಂಗ್ರೆಸ್ ಸ್ಟಾರ್‌ ಪ್ರಚಾರಕನನ್ನೇ ಬಿಜೆಪಿ ಸೆಳೆದಿದ್ದು ಹೇಗೆ?

UP Elections Rivalry With Swami Prasad Maurya The Reason Behind RPN Singh Resigning Congress pod
Author
Bangalore, First Published Jan 25, 2022, 4:57 PM IST

ಲಕ್ನೋ(ಜ.25): ಮಾಜಿ ಕೇಂದ್ರ ಸಚಿವ ರತನ್‌ಜಿತ್ ಪ್ರತಾಪ್ ನಾರಾಯಣ್ ಸಿಂಗ್ ಅಂದರೆ ಆರ್‌ಪಿಎನ್ ಸಿಂಗ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ್ದಾರೆ. ಇತ್ತೀಚೆಗಷ್ಟೇ ಎಸ್‌ಪಿ ಸೇರಿರುವ ಸ್ವಾಮಿ ಪ್ರಸಾದ್‌ ಮೌರ್ಯರವರೇ, ಆರ್‌ಪಿಎನ್‌ ಸಿಂಗ್‌ ದಿಢೀರ್‌ ಬಿಜೆಪಿ ಸೇರಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಆರ್‌ಪಿಎನ್ ಸಿಂಗ್ ಕುಶಿನಗರದ ರಾಜಕೀಯದ ಎರಡು ವಿಭಿನ್ನ ಧ್ರುವಗಳಾಗಿದ್ದು, ಇಬ್ಬರ ನಡುವೆ 2009 ರಿಂದ ರಾಜಕೀಯ ಪೈಪೋಟಿ ನಡೆಯುತ್ತಿದೆ.

RPN ಸಿಂಗ್ ಮತ್ತು ಸ್ವಾಮಿ ಪ್ರಸಾದ್ ಮೌರ್ಯ ನಡುವಿನ ರಾಜಕೀಯ ಪೈಪೋಟಿ 2009 ರಲ್ಲಿ ಪ್ರಾರಂಭವಾಯಿತು, ಇಬ್ಬರೂ ಪರಸ್ಪರರ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ. ಆಗ ಸ್ವಾಮಿ ಪ್ರಸಾದ್ ಮೌರ್ಯ ಬಿಎಸ್‌ಪಿಯ ರಾಜ್ಯಾಧ್ಯಕ್ಷ ಹಾಗೂ ಮಾಯಾವತಿ ಸರ್ಕಾರದಲ್ಲಿ ಪ್ರಬಲ ಸಚಿವರಾಗಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್ ಪಿಎನ್ ಸಿಂಗ್ ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು ಸೋಲಿಸಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು.

ಸ್ವಾಮಿ ಪ್ರಸಾದ್ ಮೌರ್ಯರನ್ನು ಸೋಲಿಸಿದ್ದ ಆರ್‌ಪಿಎನ್ ಸಿಂಗ್ 

ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದ ಆರ್‌ಪಿಎನ್ ಸಿಂಗ್ 2.23 ಲಕ್ಷ ಮತಗಳನ್ನು ಪಡೆದರೆ, ಬಿಎಸ್‌ಪಿಯ ಸ್ವಾಮಿ ಪ್ರಸಾದ್ ಮೌರ್ಯ 2.02 ಲಕ್ಷ ಮತಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದಿದ್ದರು. ಆರ್‌ಪಿಎನ್ ಸಿಂಗ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಅವರು ಪದ್ರೌನಾ ಕ್ಷೇತ್ರದಿಂದ ಶಾಸಕರಾಗಿದ್ದರು. ಸಂಸದರಾದ ಬಳಿಕ ಆರ್ ಪಿಎನ್ ಸಿಂಗ್ ಅವರು ಶಾಸಕಾಂಗ ತೊರೆದಿದ್ದರು. ಇದಾದ ನಂತರ ಅವರು ತಮ್ಮ ತಾಯಿ ಮೋಹಿನಿ ದೇವಿ ಅವರನ್ನು ಪದ್ರೌನಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಡಿದರು. ಈ ಬಾರಿಯ ವಿಧಾನಸಭಾ ಉಪಚುನಾವಣೆಯಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಅವರು ಬಿಎಸ್‌ಪಿ ಟಿಕೆಟ್‌ನಲ್ಲಿ ಅಖಾಡಕ್ಕಿಳಿದಿದ್ದರು.

ಸ್ವಾಮಿ ಆರ್ ಪಿಎನ್ ತಾಯಿಯನ್ನು ಸೋಲಿಸಿ ಸೇಡು ತೀರಿಸಿಕೊಂಡರು

2009 ರ ವಿಧಾನಸಭಾ ಉಪಚುನಾವಣೆಯಲ್ಲಿ ಪದ್ರೌನಾ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ಅವರು ಆರ್‌ಪಿಎನ್ ಸಿಂಗ್ ಅವರ ತಾಯಿ ಮೋಹಿನಿ ದೇವಿ ಅವರನ್ನು ಭಾರಿ ಅಂತರದಿಂದ ಸೋಲಿಸಿ ಪದ್ರೌನಾ ಕ್ಷೇತ್ರದಿಂದ ವಿಧಾನಸಭೆ ಯಾತ್ರೆ ಆರಂಭಿಸಿದರು. ಇದರ ನಂತರ, 2012 ರ ಚುನಾವಣೆಗಳಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಅವರು ಪದ್ರೌನಾ ಕ್ಷೇತ್ರದಿಂದ ಬಿಎಸ್ಪಿ ಟಿಕೆಟ್‌ನಲ್ಲಿ ಗೆಲ್ಲುವಲ್ಲಿ ಯಶಸ್ವಿಯಾದರು. ಸ್ವಾಮಿ ಪ್ರಸಾದ್ ಮೌರ್ಯ ಅವರು ಪದ್ರೌನಾದಲ್ಲಿ ಮತ್ತಷ್ಟು  ಉನ್ನತಿಗೇರಿದರು, ಆದರೆ RPN ಸಿಂಗ್ 2014 ರ ಲೋಕಸಭೆ ಚುನಾವಣೆಯಲ್ಲಿ ಸೋತರು.

ಪದ್ರೌನ ರಾಜಕೀಯದಲ್ಲಿ ಸ್ವಾಮಿ ಬಲಿಷ್ಠರಾಗುತ್ತಿದ್ದರು

ಇದರ ನಂತರ, ಸ್ವಾಮಿ ಪ್ರಸಾದ್ ಮೌರ್ಯ ಮತ್ತೆ 2017 ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು ಮತ್ತು ಪದ್ರೌನಾ ಕ್ಷೇತ್ರದಿಂದ ಐತಿಹಾಸಿಕ ವಿಜಯವನ್ನು ದಾಖಲಿಸಿದರು. 2012 ಮತ್ತು 2017ರಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು ಸೋಲಿಸಲು ಆರ್‌ಪಿಎನ್ ಸಿಂಗ್ ಪ್ರಯತ್ನಿಸಿದರು, ಆದರೆ ಅವರು ಯಶಸ್ವಿಯಾಗಲಿಲ್ಲ. ಏತನ್ಮಧ್ಯೆ, 2019 ರ ಚುನಾವಣೆಯಲ್ಲಿ, ಆರ್‌ಪಿಎನ್ ಸಿಂಗ್ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸೋತರು. ಈ ಸೋಲಿನೊಂದಿಗೆ, ಕುಶಿನಗರ ಮತ್ತು ವಿಶೇಷವಾಗಿ ಪದ್ರೌನಾ ರಾಜಕೀಯದ ಮೇಲಿನ ಆರ್‌ಪಿಎನ್ ಸಿಂಗ್ ಹಿಡಿತ ಸಡಿಲವಾಯಿತು.

ಆರ್‌ಪಿಎನ್ ಸಿಂಗ್ ಪದ್ರೌನಾ ಕ್ಷೇತ್ರದಿಂದ ಸ್ಪರ್ಧಿಸಬಹುದು

ಇದೀಗ ಸ್ವಾಮಿ ಪ್ರಸಾದ್ ಮೌರ್ಯ ಅವರು ಸಮಾಜವಾದಿ ಪಕ್ಷ (ಎಸ್‌ಪಿ) ಸೈಕಲ್ ಹತ್ತಿದ ನಂತರ, ಆರ್‌ಪಿಎನ್ ಸಿಂಗ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಮತ್ತು ಕುಶಿನಗರ ಮತ್ತು ಪದ್ರೌನಾ ರಾಜಕೀಯ ಹಿಡಿತವನ್ನು ಬಲಪಡಿಸಲು ಪ್ರಾರಂಭಿಸಿದ್ದಾರೆ. ಆರ್‌ಪಿಎನ್ ಸಿಂಗ್ ಅವರು 1996, 2002 ಮತ್ತು 2007 ರ ವಿಧಾನಸಭಾ ಚುನಾವಣೆಗಳಲ್ಲಿ ಪದ್ರೌನಾ ಕ್ಷೇತ್ರದಿಂದ ಗೆದ್ದರು. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಅವರನ್ನು ಮತ್ತೊಮ್ಮೆ ಪದ್ರೌನಾ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿಸಬಹುದೆಂಬ ಊಹಾಪೋಹಗಳು ಕೇಳಿಬರುತ್ತಿವೆ.

ಆರ್‌ಪಿಎನ್ ಸಿಂಗ್ ಬಿಜೆಪಿಗೆ ಸೇರ್ಪಡೆಯಾದ ಬಗ್ಗೆ ಎಸ್‌ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಮಾತನಾಡಿ, 'ಆರ್‌ಪಿಎನ್ ಸಿಂಗ್ ಬಿಜೆಪಿಗೆ ಸೇರ್ಪಡೆಯಾಗುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ, ಸಮಾಜವಾದಿ ಪಕ್ಷದ ಎಲ್ಲಾ ಕಾರ್ಯಕರ್ತರು ಪದ್ರೌನಾದಿಂದ ಆರ್‌ಪಿಎನ್ ಸಿಂಗ್ ಅವರನ್ನು ಸೋಲಿಸುತ್ತಾರೆ, ನಾನು ಪದ್ರೌನಾದಿಂದ ಹೋರಾಡಬೇಕು. ಅಂತಿಮ ನಿರ್ಧಾರ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರದ್ದಾಗಿದೆ ಎಂದಿದ್ದಾರೆ. 

Follow Us:
Download App:
  • android
  • ios